ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರ ಅರಣ್ಯ ಪ್ರದೇಶ ಹೊಂದಿರುವ ಜೊತೆಗೆ ಪುರಾತನ ದೇಗುಲ, ಪ್ರಸಿದ್ಧ ಯಾತ್ರಸ್ಥಳಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು 2023 ರಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು‌, ಚಾಮರಾಜನಗರ ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಚಾಮರಾಜನಗರದ 22 ಪ್ರವಾಸಿ ಸ್ಥಳಗಳಿಗೆ 2023 ರಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು ಅತಿಹೆಚ್ಚು ಜನರು ಭೇಟಿ ಕೊಟ್ಟ ಸ್ಥಳದಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಮೊದಲ ಸ್ಥಾನದಲ್ಲಿದೆ.


ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ 40  ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 1 ವರ್ಷದಲ್ಲಿ 2.5 ಲಕ್ಷ ದಷ್ಟು ಮಂದಿ ಹಿಮಾಚ್ಛಾದಿತ ಬೆಟ್ಟದ ಚೆಲುವನ್ನು ಕಂಡಿದ್ದಾರೆ.


ಇದನ್ನೂ ಓದಿ- ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯ್ತು, ಅರಳಿದ ಕಮಲ ಉದುರಿ ಹೋಯ್ತು: ಡಿಸಿಎಂ ಡಿ.ಕೆ.ಶಿವಕುಮಾರ್


ಪ್ರವಾಸಿ ಸ್ಥಳಗಳು ಯಾವುವು? 
ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಲ್ಲಿ 22 ಪ್ರವಾಸಿ ಸ್ಥಳಗಳನ್ನು ಗುರುತಿಸಿದ್ದು ಪ್ರವಾಸಿಗರು ಭೇಟಿ ನೀಡಿದ ಅಂದಾಜು ಸಂಖ್ಯೆಯನ್ನು ಪ್ರತಿ ತಿಂಗಳು ಲೆಕ್ಕ ಹಾಕಲಿದೆ. 


ಚಾಮರಾಜನಗರದ ಚಿಕ್ಕಹೊಳೆ, ಸುವರ್ಣಾವತಿ, ಕರಿವರದರಾಜಬೆಟ್ಟ, ನರಸಮಂಗಲ, ಬಂಡೀಪುರ,  ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತೆರಕಣಾಂಬಿ ದೇವಾಲಯ, ಹುಲಗನಮುರುಡಿ ವೆಂಕರಮಣ ಬೆಟ್ಟ, ಕೊಳ್ಳೇಗಾಲದ ಮರಡಿಗುಡ್ಡ, ತ್ರಯಂಬಕಪುರ, ಬಿಳಿಗಿರಿರಂಗನ ಬೆಟ್ಟ, ಬಳೆಮಂಟಪ, ಹೊಗೆನಕಲ್ ಜಲಪಾತ, ಭರಚುಕ್ಕಿ, ವೆಸ್ಲಿ ಸೇತುವೆ, ಮಲೆ ಮಹದೇಶ್ವರ ಬೆಟ್ಟ, ಪಾಲಾರ್ ಗಡಿ, ಒಡೆತರಪಾಳ್ಯ ಟಿಬೆಟಿಯನ್ ಕ್ಯಾಂಪ್, ಒನ್ನಮೇಟಿ- ಅತ್ತಿಖಾನೆಗಳುಗಳಿಗೆ ಕಳೆದ ವರ್ಷ ಒಟ್ಟಾರೆ 70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದಾರೆ.


ಈ ಪ್ರವಾಸಿ ತಾಣಗಳಿಗೆ ಹೆಚ್ಚಾಗಿ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರು: 
ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ.ಗುಡಿ, ಬಿಳಿಗಿರಿರಂಗನ ಬೆಟ್ಟಕ್ಕೆ ನೂರಾರು ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿ ಗಡಿಜಿಲ್ಲೆ ಪ್ರಕೃತಿ ಚೆಲುವನ್ನು ತುಂಬಿಕೊಂಡಿದ್ದಾರೆ.


ಇದನ್ನೂ ಓದಿ- ಪ್ರಧಾನಿ ಮೋದಿ ಅವರ ಮತ್ತೊಂದು ಭಾಷಣ ಸುಳ್ಳಾಗಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಕಾಲೆಳೆದ ಸಿಎಂ!


ಶಕ್ತಿ ಯೋಜನೆ ಬಳಿಕ ಪ್ರವಾಸಿಗರ ಸಂಖ್ಯೆ ಡಬಲ್: 
ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ  ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಗಡಿಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿರುವುದು ಗಮನಾರ್ಹವಾಗಿದೆ. 


ಜನವರಿಯಿಂದ ಆಗಸ್ಟ್ ತನಕ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ 30-35 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದರೇ ಆಗಸ್ಟ್ ಬಳಿಕ ಇದರ ಸಂಖ್ಯೆ ದ್ವಿಗುಣಗೊಂಡಿದೆ, ನವೆಂಬರ್ ನಲ್ಲಿ 80 ಸಾವಿರ ಮಂದಿ ಭೇಟಿ ಕೊಟ್ಟಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೂ ಕೂಡ  4-5 ಲಕ್ಷದಷ್ಟು ಇದ್ದ ಭಕ್ತರ ಸಂಖ್ಯೆ ಆಗಸ್ಟ್ ಬಳಿಕ 6-7 ಲಕ್ಷ ದಾಟಿದ್ದು ಭರಚುಕ್ಕಿ, ಬಿಳಿಗಿರಿರಂಗನ ಬೆಟ್ಟ, ಹೊಗೆನಕಲ್ ಜಲಪಾತಕ್ಕೆ ಭೇಟಿ ಕೊಟ್ಟವರ ಸಂಖ್ಯೆ ಕಳೆದ 4 ತಿಂಗಳಲ್ಲಿ ಡಬಲ್ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.