Moles On Body : ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮೈಮೇಲೆ ಮಚ್ಚೆಗಳು ಇರುತ್ತವೆ. ಹುಟ್ಟಿದಾಗಿನಿಂದಲೂ ದೇಹದ ವಿವಿಧ ಭಾಗಗಳಲ್ಲಿ ಮಚ್ಚೆ ಇರುತ್ತವೆ. ಆದರೆ ಕೆಲವರಿಗೆ ಮಾತ್ರ ಇಂತಹ ವಿಶೇಷ ಮಚ್ಚೆಗಳು ಇರುತ್ತವೆ. ಅವರು ಅತ್ಯಂತ ಅದೃಷ್ಟವಂತೃಾಗಿರುತ್ತಾರೆ. ಕೆಲವು ನಿರ್ದಿಷ್ಟ ಜಾಗದಲ್ಲಿ ಮಚ್ಚೆ ಇದ್ದರೆ, ಅಂತಹವರನ್ನು ಅದೃಷ್ಟವಂತರೆಂದು ಹೇಳುವುದುಂಟು. ಕೆಲವು ಹಿಂದೂ ನಂಬಿಕೆಗಳ ಪ್ರಕಾರ, ಮಚ್ಚೆಗಳು ವ್ಯಕ್ತಿಯ ಭವಿಷ್ಯ, ಜೀವನ ಮೊದಲಾದವುಗಳ ಬಗ್ಗೆ ಮಾಹಿತಿ ನೀಡುತ್ತವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Palmistry : ಅಂಗೈಯಲ್ಲಿರುವ ಈ ಗುರುತುಗಳು ರಾಜಯೋಗ ಸೂಚಿಸುತ್ತವೆ


ಹಣೆಯ ಮೇಲಿರುವ ಮಚ್ಚೆ : ನಿಮ್ಮ ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ, ನೀವು ಬೆಳೆದಂತೆ ಶ್ರೀಮಂತರಾಗುತ್ತೀರಿ. ಜೊತೆಗೆ ವಿದೇಶ ಪ್ರವಾಸದ ಯೋಗವನ್ನು ಸಹ ಹೊಂದಿರುತ್ತಾರೆ. ಹಣೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ, ಅವರು ಸಾಕಷ್ಟು ಸಿರಿವಂತರಾಗಿರುತ್ತಾರೆ. ಇತರರಿಗೆ ಸಹಾಯ ಮಾಡಲು ಆಸಕ್ತಿ ವಹಿಸಲಾರರು.


ಕಣ್ಣಿನರೆಪ್ಪೆ ಮೇಲಿರುವ ಮಚ್ಚೆ : ನಿಮ್ಮ ಕಣ್ಣುರೆಪ್ಪೆಗಳಲ್ಲಿ ಯಾವುದಾದರೂ ಒಂದು ಮಚ್ಚೆ ಇದ್ದರೆ, ಇದರರ್ಥ ನೀವು ಶ್ರೀಮಂತರಾಗುತ್ತೀರಿ. ಅಲ್ಲದೇ ಈ ಮಚ್ಚೆ ನೀವು ಪ್ರಸಿದ್ಧರಾಗುವ ಸಂಕೇತವೂ ಹೌದು. ಮತ್ತೊಂದೆಡೆ, ನಿಮ್ಮ ಕೆಳಗಿನ ಕಣ್ಣಿನರೆಪ್ಪೆಯಲ್ಲಿ ಮಚ್ಚೆ ಇದ್ದರೆ, ನೀವು ಅತಿಯಾದ ಖರ್ಚು ಮಾಡುವವರಾಗಿರುತ್ತೀರಿ. 


ಇದನ್ನೂ ಓದಿ : Vastu Tips For Pitra : ಮನೆಯ ಈ ಸ್ಥಳಗಳಲ್ಲಿ ಪೂರ್ವಜರ ಫೋಟೋ ಇಟ್ಟರೆ ಬಡತನ ಎದುರಾಗುತ್ತೆ ಎಚ್ಚರ!


ಹುಬ್ಬುಗಳ ನಡುವೆ ಮಚ್ಚೆ : ನಿಮ್ಮ ಹುಬ್ಬುಗಳ ನಡುವೆ ಒಂದು ಮಚ್ಚೆ ಇದ್ದರೆ, ಅಪಾರ ಸಂಪತ್ತು ಮತ್ತು ಆರೋಗ್ಯದ ಸೂಚನೆಯಾಗಿದೆ. ಮತ್ತೊಂದೆಡೆ, ನಿಮ್ಮ ಹುಬ್ಬುಗಳ ಮೇಲೆ ಮಚ್ಚೆ ಇದ್ದರೆ, ಮದುವೆಯಾದ ನಂತರ ನೀವು ಸಾಕಷ್ಟು ಅದೃಷ್ಟವನ್ನು ಪಡೆಯುತ್ತೀರಿ ಎಂದರ್ಥ. 


ತುಟಿಯ ಮೇಲಿನ ಮಚ್ಚೆ : ತುಟಿಗಳ ತುದಿಯಲ್ಲಿರುವ ಮಚ್ಚೆ ಮಂಗಳಕರವಾಗಿರುತ್ತದೆ. ನಿಮ್ಮ ಕೆಳ ತುಟಿಯಲ್ಲಿನ ಮಚ್ಚೆ, ಜೂಜಾಟದ ಪ್ರವೃತ್ತಿಯನ್ನು ಸೂಚಿಸುತ್ತದೆ. ಈ ಜಾಗದಲ್ಲಿ ಮಚ್ಚೆಯಿರುವವರು ಬೆಟ್ಟಿಂಗ್‌ ಆಡುತ್ತಿರುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.