Tulsi Dry Leaves Tips: ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ.  ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತುಳಸಿ ಗಿಡ ಇರುವ ಮನೆಯಲ್ಲಿ ಲಕ್ಷ್ಮಿ ಮತ್ತು ವಿಷ್ಣುವಿನ ಕೃಪೆಯಿಂದ ಯಾವುದೇ ತೊಂದರೆ ಇರುವುದಿಲ್ಲ. ಭಗವಾನ್ ವಿಷ್ಣುವಿನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಿದರೆ ಮಾತ್ರ ಪೂಜೆ ಪೂರ್ಣಗೊಳ್ಳುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ ತುಳಸಿಯ ಹಸಿರು ಎಲೆಗಳಂತೆ ಅದರ ಒಣ ಎಲೆಗಳಿಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. 


COMMERCIAL BREAK
SCROLL TO CONTINUE READING

ತುಳಸಿ ಎಲೆಗಳು ಎಂದಿಗೂ ಹಳೆಯದಾಗುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಒಣ ತುಳಸಿ ಎಲೆಗಳ ಪರಿಹಾರಗಳಿಂದ ಜೀವನದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಒಣ ತುಳಸಿ ಎಲೆಗಳನ್ನು ಹೇಗೆ ಬಳಸುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಬಹುದು ಎಂದು ತಿಳಿಯೋಣ...


ಒಣ ತುಳಸಿ ಎಲೆಗಳ ಪರಿಹಾರ:
ಶ್ರೀ ಕೃಷ್ಣನಿಗೆ ಅಭಿಷೇಕ:

ಶ್ರೀ ಕೃಷ್ಣನು ವಿಷ್ಣುವಿನ ರೂಪ. ಇಂತಹ ಪರಿಸ್ಥಿತಿಯಲ್ಲಿ ಶ್ರೀಕೃಷ್ಣನ ಬಾಲ ರೂಪ ಬಾಲಕೃಷ್ಣನಿಗೆ ಒಣ ತುಳಸಿ ಎಲೆಗಳ ನೀರಿನಿಂದ ಅಭಿಷೇಕ ಮಾಡುವುದರಿಂದ ಭಗವಾನ್ ಕೃಷ್ಣನು ಸಂತುಷ್ಟನಾಗುತ್ತಾನೆ. ಅಲ್ಲದೆ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. 


ಇದನ್ನೂ ಓದಿ- Surya Gochar 2022: ಇಂದಿನಿಂದ ಮುಂದಿನ 30 ದಿನಗಳವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಿ


ಭಗವಾನ್ ಕೃಷ್ಣನಿಗೆ ನೇವೇದ್ಯವನ್ನು ಅರ್ಪಿಸುವಾಗ ಈ ರೀತಿ ಮಾಡಿ:
ಭಗವಾನ್ ವಿಷ್ಣು ಹಾಗೂ ಶ್ರೀ ಕೃಷ್ಣನಿಗೆ ನೇವೇದ್ಯವನ್ನು ಅರ್ಪಿಸುವಾಗ ತುಳಸಿ ಎಲೆಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿಯ ಒಣ ಎಲೆಗಳನ್ನು ಸುಮಾರು 15 ದಿನಗಳವರೆಗೆ ಇಡಬಹುದು. ತುಳಸಿ ಎಲೆಗಳು 15 ದಿನಗಳವರೆಗೆ ಹಳಸುವುದಿಲ್ಲ.


ಆರ್ಥಿಕ ಸ್ಥಿತಿ ಬಲಪಡಿಸಲು:
ನೀವು ಜೀವನದಲ್ಲಿ ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ ಮತ್ತು ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದರೆ ಒಣ ತುಳಸಿ ಎಲೆಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಅದನ್ನು ಕಟ್ಟಿ ಮತ್ತು ಕಮಾನಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. ಈ ಪರಿಹಾರದಿಂದ, ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Vastu Tips: ಮರೆತೂ ಸಹ ಯಾರಿಂದಲೂ ಈ ವಸ್ತುವನ್ನು ಫ್ರೀ ಆಗಿ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಭಾರೀ ನಷ್ಟ!


ವಾಸ್ತು ದೋಷ ನಿವಾರಣೆಗೆ ತುಳಸಿ ಪರಿಹಾರ:
ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಅಥವಾ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ನೀವು ಬಯಸಿದರೆ, ಒಣ ತುಳಸಿ ಎಲೆಗಳು ಮತ್ತು ಗಂಗಾಜಲವನ್ನು ಒಂದು ಪಾತ್ರೆಯಲ್ಲಿ ಬೆರೆಸಿ ನಂತರ ಈ ನೀರನ್ನು ಮನೆಯಾದ್ಯಂತ ಸಿಂಪಡಿಸಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ದೂರಹೋಗಿ ಸಕಾರಾತ್ಮಕತೆ ಮನೆಯನ್ನು ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.