Which Animal Represent Our Soul: ನಮ್ಮ ಆತ್ಮವನ್ನು ಪ್ರತಿನಿಧಿಸುವ ಪ್ರಾಣಿಗಳು ನಮ್ಮ ಪ್ರಮುಖ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಳ್ಳುತ್ತವೆ ಮತ್ತು ನಮಗೆ ರಹಸ್ಯ ಸಂದೇಶಗಳನ್ನು ರವಾನಿಸಿ ಮಾರ್ಗದರ್ಶನ ಮಾಡುತ್ತವೆ ಎನ್ನಲಾಗುತ್ತದೆ. ಸಾಮಾನ್ಯವಾಗಿ, ಅವು ನಿಜ ಜೀವನದಲ್ಲಿ ನಮಗೆ ಕಾಣಿಸಿಕೊಂಡರೆ, ಅವು ನಮ್ಮನ್ನು ಪ್ರೋತ್ಸಾಹಿಸಲು ಬಂದಿವೆ ಎಂಬುದನ್ನು ನೀವು ಊಹಿಸಬಹುದು. ಉದಾಹರಣೆಗೆ, ನಾವು ನಿಜವಾಗಿಯೂ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಮತ್ತು ನಮಗೆ ನಮ್ಮ ಆತ್ಮವನ್ನು ಪ್ರತಿನಿಧಿಸುವ ಪ್ರಾಣಿ ಕಂಡರೆ, ಆ ಕ್ಷಣದಲ್ಲಿ ನಾವು ಯಾವುದರ ಬಗ್ಗೆ ಯೋಚಿಸುತ್ತಿರುವೆವೋ, ಅದು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿದೆ ಎಂಬುದರ ಸಂಕೇತವಾಗಿರಬಹುದು ಎನ್ನಲಾಗುತ್ತದೆ. ಹಾಗಾದರೆ ಬನ್ನಿ ರಾಶಿಗಳಿಗೆ ಅನುಗುಣವಾಗಿ ನಮ್ಮ ಆತ್ಮವನ್ನು ಪ್ರತಿನಿಧಿಸುವ ಪ್ರಾಣಿ ಯಾವುದು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಮೇಷ ರಾಶಿ: ಚಿರತೆ
ಮೇಷ ರಾಶಿಯಂತೆ, ಚಿರತೆಗಳು ಎರಡು ವೇಗಗಳನ್ನು ಹೊಂದಿವೆ: ನಡೆಯುವುದು ಮತ್ತು ಗರಿಷ್ಠ ಓಟ. ಚಿರತೆಯು ಕೇವಲ ಮೂರು ಸೆಕೆಂಡುಗಳಲ್ಲಿ 0 ರಿಂದ 60 mph ವೇಗವನ್ನು ಪಡೆಯುತ್ತದೆ. ಆದರೆ ಇದರ ದುಷ್ಪರಿಣಾಮವೆಂದರೆ ಅದು ಕೇವಲ 30 ಸೆಕೆಂಡುಗಳವರೆಗೆ ಮಾತ್ರ ಆ ವೇಗವನ್ನು ಉಳಿಸಿಕೊಳ್ಳಬಹುದು - ಇದು ಮೇಷ ರಾಶಿಯ ಶಕ್ತಿಯ ಚಕ್ರಕ್ಕೆ ಹೋಲುತ್ತದೆ. ಮೇಷ ರಾಶಿಯ ಜನರು ಬೇಗನೆ ಕೋಪಗೊಳ್ಳುತ್ತಾರೆ, ಆದರೆ ಕೆಲವೇ ನಿಮಿಷಗಳಲ್ಲಿ ಅವರು ಶಾಂತವಾಗುತ್ತಾರೆ.


ವೃಷಭ ರಾಶಿ: ಕರಡಿ
ಕರಡಿ ನಿಧಾನ, ತೊಡಕಿನ ಮತ್ತು ಸಾಮಾನ್ಯವಾಗಿ ಸೌಮ್ಯ ವರ್ತನೆಯನ್ನು ಹೊಂದಿರುತ್ತದೆ. ವೃಷಭ ರಾಶಿಯ ಜನರು ಕೂಡ ಇದೇ ರೀತಿಯವರು. ಅವರು ನಿಧಾನವಾಗಿ ಚಲಿಸುವ, ವಿನೋದ ಪ್ರಿಯರು. ಅವರು ಹೆದರುವುದಿಲ್ಲ, ಆದರೆ ಯಾರಾದರೂ ಅವರನ್ನು ಕರಡಿಯಂತೆ ಪ್ರಚೋದಿಸಿದಾಗ, ಅವರು ತಮ್ಮ ಎಲ್ಲಾ ಶಕ್ತಿಯನ್ನು ಸಕಾರಾತ್ಮಕ ಕೆಲಸಗಳಲ್ಲಿ ತೊಡಗಿಸುತ್ತಾರೆ.


ಮಿಥುನ ರಾಶಿ: ನರಿ
ಬುದ್ಧಿವಂತ, ತ್ವರಿತ ಮತ್ತು ಸ್ವಲ್ಪ ಚೇಷ್ಟೆಯ, ನರಿ ತ್ವರಿತ-ಮನೋಭಾವದ ಮಿಥುನ ರಾಶಿಯ ಜನರ ಆದರ್ಶ ಆತ್ಮ ಪ್ರಾಣಿಯಾಗಿದೆ. ನರಿ ತನ್ನ ಬುದ್ಧಿವಂತಿಕೆಯಿಂದ ಯಾವುದೇ ಪರಿಸ್ಥಿತಿಯಿಂದ ಹೊರಬರುತ್ತದೆ. ಮಿಥುನ ರಾಶಿಯ ಜನರ ವ್ಯಕ್ತಿತ್ವ ಕೂಡ ಅದೇ ರೀತಿ ಆಗಿರುತ್ತದೆ.


ಕರ್ಕ ರಾಶಿ: ತೋಳ
ತೋಳವು ಕೆಲವೊಮ್ಮೆ "ಏಕಾಂಗಿ" ಆಗಿರಬಹುದು, ಆದರೆ ಈ ಪ್ರಾಣಿಯು ತನ್ನ ಕುಟುಂಬವನ್ನು ತೀವ್ರವಾಗಿ ರಕ್ಷಿಸುತ್ತದೆ. ಕರ್ಕ ರಾಶಿಯ ಜನರ ಸ್ವಭಾವ ಕೂಡ ಇದೇ ರೀತಿ ಇರುತ್ತದೆ. ಕರ್ಕ ರಾಶಿಗೆ ಸೇರಿದ ಜನರು ಕುಟುಂಬವನ್ನು ತೋಳಿನ ಹಿಂಡಿನಂತೆ ಭಾವಿಸುತ್ತಾರೆ, ಪ್ರತಿದಿನ ಪರಸ್ಪರ ಕಾಳಜಿ ವಹಿಸುತ್ತಾರೆ.


ಸಿಂಹ ರಾಶಿ: ಸಿಂಹ
ಸಿಂಹ ರಾಶಿಗೆ ಸಿಂಹವೇ ನಿಜವಾದ ಮುಖವಾಡ. ಆದರೆ, ಪ್ರಾಮಾಣಿಕವಾಗಿ, ಈ ಕುಟುಂಬ-ಆಧಾರಿತ, ಆಕರ್ಷಕ, ಐಷಾರಾಮಿ, ಪ್ರೀತಿಯ ಸಂಕೇತಗಳಿಗೆ ಸಿಂಹಗಳು ಅತ್ಯುತ್ತಮ ಉದಾಹರಣೆಗಳಾಗಿವೆ. ಸಿಂಹ ದಿನವಿಡೀ ಬಿಸಿಲಲ್ಲಿ ಕುಳಿತುಕೊಳ್ಳಬಹುದು. ಅದು ತನ್ನ ಕುಟುಂಬದೊಂದಿಗೆ ಮಾತ್ರ ಸಮಯ ಕಳೆಯುತ್ತದೆ. ಅದು ರಕ್ಷಣಾತ್ಮಕ ತಾಯಿಯಾಗಿರುತ್ತದೆ ಮತ್ತು ಅದಕ್ಕೆ ಅದರ ಜೀವನ ಶಕ್ತಿಗಾಗಿ ಅಥವಾ  ಚೈತನ್ಯಕ್ಕಾಗಿ ಸೂರ್ಯನ ಅವಶ್ಯಕತೆ ಇರುತ್ತದೆ ಮತ್ತು ಅದು ಪರಿಪೂರ್ಣ ಕೂಡ ಹೌದು. ಏಕೆಂದರೆ ಸಿಂಹದ ಅಧಿಪತಿ ಗ್ರಹವೂ ಕೂಡ ಸೂರ್ಯ ಎನ್ನಲಾಗುತ್ತದೆ.


ಕನ್ಯಾ ರಾಶಿ: ಜಲಮೂಷಿಕ 
ಜಲಮೂಷಿಕಗಳು ಪರಿಪೂರ್ಣತಾವಾದಿಗಳು ಮಾತ್ರವಲ್ಲ, ತಾವು ಮಾಡುವ ಕೆಲಸದಲ್ಲಿ ಪ್ರಾವಿಣ್ಯತೆಯನ್ನು ಹೊಂದಿರುತ್ತವೆ. ಇದೇ ರೀತಿ ಮಾಡಲು ಕನ್ಯಾರಾಶಿಯ ಜಾತಕದವರು ಕೂಡ ಪ್ರಯತ್ನಿಸುತ್ತಾರೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಗಾಳಿಯಾಡದ ಓಡ್ದನ್ನು ನಿರ್ಮಿಸುವ ಅದ್ಭುತ ಸಾಮರ್ಥ್ಯ ಹೊಂದಿರುವ ಈ ಪ್ರಾಣಿಗಳನ್ನು "ನೈಸರ್ಗಿಕ ಎಂಜಿನಿಯರ್‌ಗಳು" ಎಂದು ಕರೆಯಲಾಗುತ್ತದೆ. ಇದೇ ಕಾರಣದಿಂದ ಕನ್ಯಾ ರಾಶಿಯ ಜನರು ತಾಂತ್ರಿಕ ಕ್ಷೇತ್ರದಲ್ಲಿ ಬಹಳ ಪ್ರವೀಣರು ಎಂದು ಪರಿಗಣಿಸಲಾಗುತ್ತದೆ. 


ತುಲಾ ರಾಶಿ: ನವಿಲು
ತುಲಾ ರಾಶಿಯ ಜನರು ತುಂಬಾ ಆಕರ್ಷಕರಾಗಿರುತ್ತಾರೆ. ಆದ್ದರಿಂದ, ನವಿಲನ್ನು ಇವರ ಆತ್ಮಪ್ರಾಣಿ ಅಥವಾ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ತುಲಾ ರಾಶಿಯ ಜನರಂತೆಯೇ ನವಿಲುಗಳು ಕೂಡ ಪ್ರತಿಯೊಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ. ಆದರೆ ಇತರರನ್ನು ತನ್ನತ್ತ ಆಕರ್ಷಿಸುವ ಸೌಂದರ್ಯ ಹೊಂದಿರುವ ಕಾರಣ ಅವರ ಈ ಅದ್ಭುತ ಗುಣ ಕಂಡುಬರುವುದಿಲ್ಲ. 


ವೃಶ್ಚಿಕ ರಾಶಿ: ಹಾವು
ಹಾವುಗಳು ಅಂಜುಬುರುಕ ಮತ್ತು ಅತ್ಯಂತ ಸಮರ್ಥ ಜೀವಿಗಳಾಗಿವೆ. ಹಾವುಗಳ ಬಗ್ಗೆ ಹೇಳುವುದಾದರೆ, ಅವು ತಾವಾಗಿಯೇ ಬಯಸುವ ಮೊದಲು ನೀವು ಅವುಗಳನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಮತ್ತು ವೃಶ್ಚಿಕ ರಾಶಿಯ ಜನರು ಸಹ ಇದೆ ಪ್ರವೃತ್ತಿಯನ್ನು ಹೊಂದಿರುತಾರೆ. ಇವರ ಪ್ರತಿನಿತ್ಯದ ಪ್ರತಿಕ್ರಿಯೆಗಳು ಆ ದಿನವನ್ನು ಆಧರಿಸಿರುತ್ತವೆ. 


ಧನು ರಾಶಿ: ಗೂಬೆ
ಗೂಬೆಗಳನ್ನು ಬುದ್ಧಿವಂತ ಮತ್ತು ಸುಲಭವಾಗಿ ಪ್ರಯಾಣಕ್ಕೆ ಸಿದ್ಧವಾಗುವ ಅಪ್ರತಿಮ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಧನು ರಾಶಿಯ ಜಾತಕದವರಲ್ಲಿಯೂ ಕೂಡ ದರ್ಶನ, ಕಲಿಯುವ ಹಾಗೂ ಕ್ಷಣಮಾತ್ರದ ಸೂಚನೆಯ ಮೇರೆಗೆ ಯಾತ್ರೆ ಕೈಗೊಳ್ಳುವ ಕ್ಷಮತೆ ಇರುತ್ತದೆ. ಒಂದು ಪಕ್ಷಿಯಂತೆ ಧನು ರಾಶಿಯ ಜನರು ಕೂಡ ಮನಸ್ಸಿಗೆ ತೋಚಿದಾದ ಸ್ವಾತಂತ್ರ್ಯವನ್ನು ಆಯ್ದುಕೊಳ್ಳುತ್ತಾರೆ. 


ಮಕರ ರಾಶಿ: ಗಿಡುಗ
ಆಗಸದ ಸಾಮ್ರಾಜ್ಯದಲ್ಲಿ ಗಿದುಗನ್ನು ನಿರ್ಭೀತ ಹಾಗೂ ತೀಕ್ಷ್ಣ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿ ಮಕರ ರಾಶಿಯ ವ್ಯಕ್ತಿತ್ವ ಇರುತ್ತದೆ. ಈ ಪ್ರಾಣಿಯ ತೀಕ್ಷ್ಣ ದೃಷ್ಟಿ ಮನುಷ್ಯರಿಗಿಂತ ಎಂಟು ಪಟ್ಟು ಹೆಚ್ಚಾಗಿರುತ್ತದೆ ಮತ್ತು ಇದೇ ಕಾರಣದಿಂದ ಅವುಗಳನ್ನು ಅಜೇಯ ಬೇಟೆಗಾರ ಎಂದು ಪರಿಗಣಿಸಲಾಗುತ್ತದೆ. ಮಕರ ರಾಶಿಯ ಜಾತಕದವರೂ ಕೂಡ ಕೇವಲ ಕಾರ್ಯಸ್ಥಳದಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ದೃಢನಿಶ್ಚಯಿಗಳಾಗಿರುತ್ತಾರೆ.

ಕುಂಭ ರಾಶಿ: ಜೀಬ್ರಾ
ಈ ಪ್ರಾಣಿಯು ಅತ್ಯಂತ ಸಮುದಾಯ-ಆಧಾರಿತವಾಗಿದೆ, ಆದರೆ ಪ್ರಾಣಿ ಪ್ರಪಂಚದಲ್ಲಿ ಸಂಪೂರ್ಣವಾಗಿ ಇದೊಂದು ವಿಶಿಷ್ಟ ಪ್ರಾಣಿಯಾಗಿದೆ. ಇದೇ ರೀತಿಯಲ್ಲಿ, ಕುಂಭ ರಾಶಿಯ ಜನರ ಸ್ವಭಾವ ಇರುತ್ತದೆ ಎಂದು ಪರಿಗಣಿಸಲಾಗುತ್ತದೆ. ಇವರು ಗುಂಪಿನಲ್ಲಿ ನಿಂತರೂ ಕೂಡ ವಿಭಿನ್ನವಾಗಿ ಕಂಗೊಳಿಸುತ್ತಾರೆ. ಮತ್ತು ಇವರು ತಮ್ಮ ಕುಟುಂಬವನ್ನು ತುಂಬಾ ಇಷ್ಟಪಡುತ್ತಾರೆ. ಅವರ ಜೀವನ ಅವರ ಕುಟುಂಬದ ಸುತ್ತ ಸುತ್ತುತ್ತಿರುತ್ತದೆ.


ಇದನ್ನೂ ಓದಿ-Astrology For Week: ವಾರದ ಈ ದಿನ ಈ ಪದಾರ್ಥ ಸೇವನೆ ಬೇಡ, ಜಾತಕದ ಗ್ರಹಗಳು ಅಶುಭ ಫಲಿತಾಂಶ ನೀಡುತ್ತವೆ


ಮೀನ ರಾಶಿ: ಕುದುರೆ
ಕುದುರೆಗಳು ಅತ್ಯಂತ ಸೂಕ್ಷ್ಮ, ಸಹಾನುಭೂತಿ ಹೊಂದಿರುವ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಮೀನ ರಾಶಿಯವರಂತೆ, ಅದು ಕೂಡ ಇತರರ ಶಕ್ತಿಯನ್ನು ಪದೆದುಕೊಳ್ಳಲು ಪ್ರವೃತ್ತರಾಗಿರುತ್ತದೆ. ಏಕೆಂದರೆ ಕುದುರೆಗಳನ್ನು ಹಾಗೆಯೇ ಬೆಳೆಸಲಾಗುತ್ತದೆ. ಇದಲ್ಲದೆ, ಕುದುರೆಗಳು  ಸ್ವಾಭಾವಿಕವಾಗಿ ಗುಣಪಡಿಸುವ ಗುಣಗಳನ್ನು ಹೊಂದಿವೆ, ಮೀನ ರಾಶಿಯಂತೆಯೇ. ಅದು ಕೆಲವೊಮ್ಮೆ ದುಖಿತನಾದರೂ ಕೂಡ ಮತ್ತೆ ಎದ್ದು ನಿಲ್ಲುತ್ತದೆ. 


ಇದನ್ನೂ ಓದಿ-Women Open Hair: ಹೆರಳು ಹಾಕದೆ ತಲೆಗೂದಲು ಹರಡಿಬಿಡುವುದು ದುಬಾರಿ ಪರಿಣಮಿಸುತ್ತದೆ, ಈ ಪರಿಣಾಮಗಳನ್ನು ಎದುರಿಸಬೇಕಾದೀತು ಎಚ್ಚರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ  ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.