ನವದೆಹಲಿ: ಜ್ಯೋತಿಷ್ಯದಲ್ಲಿ ವ್ಯಕ್ತಿಯ ರಾಶಿ ತಿಳಿದುಕೊಂಡು ಅವರ ಸ್ವಭಾವವನ್ನು ನಿರ್ಣಯಿಸಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ರಾಶಿಯಲ್ಲಿ ಆಳುವ ಗ್ರಹದ ಸ್ಥಾನವು ಅವರ ಜೀವನದ ಏರಿಳಿತಗಳ ಮೇಲೆ ಹೆಚ್ಚಿನ ಪ್ರಮಾಣದ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಪತಿ-ಪತ್ನಿ ಪರಸ್ಪರ ಜಗಳವಾಡುವುದು ಮತ್ತು ಸಂಬಂಧದಲ್ಲಿ ಬಿರುಕು ಉಂಟಾಗುವುದರ ಬಗ್ಗೆ ನೀವು ನೋಡಿಯೇ ಇರ್ತಿರಿ. ಕೆಲವು ಜನರ ಜೀವನವು ತುಂಬಾ ಸಂತೋಷವಾಗಿರುತ್ತದೆ. ಆ ದಂಪತಿ ಪರಸ್ಪರ ಖುಷಿಖುಷಿಯಾಗಿದ್ದು, ಪರಸ್ಪರ ಬೆಂಬಲಿಸುತ್ತಾರೆ.


COMMERCIAL BREAK
SCROLL TO CONTINUE READING

ವಿವಾಹದ ಸಮಯದಲ್ಲಿ ಇಬ್ಬರ ರಾಶಿಯನ್ನು ಹೊಂದಿಸಿ ನೋಡುವುದು ಬಹಳ ಮುಖ್ಯವೆಂದು ಹೇಳಲಾಗುತ್ತದೆ. ರಾಶಿಗಳು ಹೊಂದಿಕೆಯಾಗಬೇಕಾದರೆ ಗ್ರಹಗಳು ಹೊಂದಾಣಿಕೆಯಾಗುವುದು ಅವಶ್ಯಕ. ಧರ್ಮಗ್ರಂಥಗಳ ಪ್ರಕಾರ ಮೇಷ ರಾಶಿಯ ಜನರು ಮಿಥುನ ಮತ್ತು ತುಲಾ ರಾಶಿಯ ಜನರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಮತ್ತು ಇಬ್ಬರೂ ಉತ್ತಮ ಸಂಗಾತಿಯಾಗುತ್ತಾರೆಂದು ಹೇಳಲಾಗಿದೆ. ಮತ್ತೊಂದೆಡೆ ವೃಷಭ ರಾಶಿಯ ಜನರಿಗೆ ವೃಶ್ಚಿಕ ಮತ್ತು ಮಕರ ಸಂಕ್ರಾಂತಿಯ ಜನರು ಉತ್ತಮ ಸಂಗಾತಿಯಾಗುತ್ತಾರಂತೆ. ಮಿಥುನ ರಾಶಿಯವರಿಗೆ ವೃಷಭ, ತುಲಾ ಮತ್ತು ಸಿಂಹ ರಾಶಿಯವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆಂದು ಹೇಳಲಾಗಿದೆ.


ಇದನ್ನೂ ಓದಿ: Money remedies: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ಈಗಲೇ ಈ ಕೆಲಸ ಮಾಡಿ


ಕರ್ಕಾಟಕ, ಸಿಂಹ, ಧನು ರಾಶಿ ಮತ್ತು ಕುಂಭ ರಾಶಿಯವರಿಗೆ


ನಿಮ್ಮ ರಾಶಿಯು ಕರ್ಕ ರಾಶಿಯಾಗಿದ್ದರೆ, ವೃಶ್ಚಿಕ ರಾಶಿಯ ಜನರು ನಿಮಗೆ ಉತ್ತಮ ಸಂಗಾತಿ ಆಗುತ್ತಾರೆ. ಇದಲ್ಲದೆ ಕರ್ಕಾಟಕವು ಸಿಂಹ ಮತ್ತು ಮೇಷ ರಾಶಿಯ ಜನರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸಿಂಹ ರಾಶಿಯ ಜನರು ಧನು ರಾಶಿಯವರಿಗೆ ಉತ್ತಮ ಪಾಲುದಾರರು. ಸಿಂಹ ರಾಶಿಯ ಜನರು ಸ್ವಲ್ಪ ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತಾರೆ, ಆದ್ದರಿಂದ ಸಂಗಾತಿಯು ಶಾಂತ ಮನಸ್ಥಿತಿ ಹೊಂದಿರಬೇಕೆಂದು ಧರ್ಮಗ್ರಂಥಗಳ ತಜ್ಞರು ಹೇಳುತ್ತಾರೆ. ನಾವು ಕುಂಭ ರಾಶಿಯ ಜನರ ಸ್ವಭಾವವು ತುಂಬಾ ಒಳ್ಳೆಯದು. ಹೀಗಾಗಿ ಅವರ ಸಂಗಾತಿಯು ಅವರನ್ನು ಬೆಂಬಲಿಸುವಂತಿರಬೇಕು. ಸಿಂಹ ಮತ್ತು ಮೇಷ ರಾಶಿಯ ಜನರು ಕುಂಭ ರಾಶಿಯ ಜನರಿಗೆ ಉತ್ತಮ ಪಾಲುದಾರರು ಎಂದು ಹೇಳಲಾಗಿದೆ.  


ಇದನ್ನೂ ಓದಿ: ವೈಶಾಖ ಅಮಾವಾಸ್ಯೆ 2023: ಈ ಕೆಲಸ ಮಾಡಿದ್ರೆ 3 ದೊಡ್ಡ 'ಮಹಾದೋಷ'ಗಳಿಂದ ಮುಕ್ತಿ ಸಿಗುತ್ತದೆ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.