Zodiac Nature: ಈ ರಾಶಿಯ ಮಕ್ಕಳಿಗೆ ಖುಷಿಪಡಿಸುವುದು ಸುಲಭದ ಮಾತಲ್ಲ
Aris Child Nature: ಪ್ರತಿಯೊಂದು ಮಗುವಿನ ಸ್ವಭಾವ ವಿಭಿನ್ನವಾಗಿರುತ್ತದೆ. ಮಕ್ಕಳನ್ನು ಅರ್ಥಮಾಡಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳ ಆಧಾರದ ಮೇಲೆ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬಹುದು ಎನ್ನಲಾಗುತ್ತದೆ. ಇಂದು ನಾವು ಮೇಷ ರಾಶಿಯ ಮಕ್ಕಳ ಸ್ವಭಾವದ ಕುರಿತು ತಿಳಿದುಕೊಳ್ಳೋಣ ಬನ್ನಿ,
Aries Child: ಕುಟುಂಬದಲ್ಲಿ ನಿಮ್ಮ ಮಕ್ಕಳನ್ನು ನೀವು ನಿಮ್ಮ ಸಂಪೂರ್ಣ ಅನಿಸಿಕೆಗೆ ತಕ್ಕಂತೆ ನಡೆಯಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ನೀವು ರಾಶಿಯ ಮೂಲಕ, ಅವರ ಸ್ವಭಾವ, ಅಭ್ಯಾಸಗಳು, ತುಂಟಾಟದಂತಹ ಕೆಲವು ಮೂಲಭೂತ ವಿಷಯಗಳನ್ನು ಅರ್ಥಮಾಡಿಕೊಂಡು ಅವರ ನ್ಯೂನತೆಗಳನ್ನು ನಿವಾರಿಸಬಹುದು. ಬಾಲ್ಯದಲ್ಲಿ ಶ್ರೀ ಕೃಷ್ಣ ಕೂಡ ತುಂಟಾಟ ಮಾಡುತ್ತಿದ್ದ ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೇ. ಇಂದು ನಾವು ಮೇಷ ರಾಶಿಯ ಮಕ್ಕಳ ಮನೋವಿಜ್ಞಾನವನ್ನು ಅರ್ಹತಮಾಡಿಕೊಳ್ಳಲು ಪ್ರಯತ್ನಿಸೋಣ. ಮೇಷ ರಾಶಿಯ ಮಕ್ಕಳಲ್ಲಿ ಎಂತಹ ಪ್ರತಿಭೆ ಅಡಗಿರುತ್ತದೆ ಎಂಬುದು ನಿಮಗೆ ಮಗು ತೊಟ್ಟಿಲಲ್ಲಿ ಇರುವಾಗಲೇ ತಿಳಿಯಲಿದೆ.
ಹೊಗಳಿಕೆಯ ಮಾತುಗಳನ್ನಾಡಿ ನೀವು ಅವರನ್ನು ಸಂತೋಷಪಡಿಸಬಹುದು
ಮೇಷ ರಾಶಿಯ ಮಕ್ಕಳು ಕನಸುಗಾರರು, ಭಾವೋದ್ರಿಕ್ತ, ಅಸಾಮಾನ್ಯ ವ್ಯಾಖ್ಯಾನಕಾರರು, ಉದಾರ ಮತ್ತು ಸಹಜ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ಯಾವಾಗಲೂ ತಮ್ಮ ಮೇಲೆ ನಿಮ್ಮ ಗಮನವನ್ನು ಬಯಸುತ್ತಾರೆ. ನೀವು ಅವರನ್ನು ಹೊಗಳುತ್ತಾ ಅಥವಾ ಮುದ್ದಿಸುತ್ತಾ ಹೋದರೆ ಅವರು ಸಂತೋಷಪಡುತ್ತಾರೆ.
ಹೊರಗೆ ಕರೆದುಕೊಂಡು ಹೋಗಲು ಒತ್ತಾಯಿಸುತ್ತಾರೆ
ಈ ರಾಶಿಯ ಮಕ್ಕಳು ವಿಹಾರ ತುಂಬಾ ಇಷ್ಟಪಡುತ್ತಾರೆ, ಅದಕ್ಕಾಗಿಯೇ ಅವರು ನಿಮಗೆ ತಮ್ಮನ್ನು ಪದೇ ಪದೇ ಹೊರಗೆ ಕರೆದುಕೊಂಡು ಹೋಗಲು ಒತ್ತಾಯಿಸುತ್ತಾರೆ. ಹೊರಗಿನಿಂದ ಬಂದ ಮೇಲೂ ಇವರಿಗೆ ಹೊರಗೆ ಉಳಿಯುವ ಆಸೆಯೇ ಇರುತ್ತದೆ. ಮೇಷ ರಾಶಿಯ ಮಕ್ಕಳ ಕಣ್ಣುಗಳು ದುಂಡಾಗಿರುತ್ತವೆ ಆದರೆ ಮೊಣಕಾಲುಗಳು ದುರ್ಬಲವಾಗಿವೆ.
ಇವರ ಕೋಪ ತಡವಾಗಿ ಇಳಿಯುತ್ತದೆ
ಈ ರಾಶಿಯ ಮಕ್ಕಳಿಗೆ ಕೋಪ ಕಡಿಮೆ ಆದರೆ, ಒಂದೊಮ್ಮೆ ಕೋಪ ಬಂದರೆ ಅದು ತಂದೆ-ತಾಯಿಯರ ಪಾಲಿಗೆ ಸುಲಭವಾಗಿರುವುದಿಲ್ಲ. ಇವರು ಬಹಳ ಹಠಮಾರಿ ಸ್ವಭಾವದವರು, ಒಂದೊಮ್ಮೆ ಯಾವುದೇ ಒಂದು ಕೆಲಸವನ್ನು ಮಾಡಲು ನಿರ್ಧರಿಸಿದರೆ, ಮಾಡಿದ ನಂತರವೇ ನಿಟ್ಟುಸಿರುಬಿಡುತ್ತಾರೆ. ಹೊರನೋಟಕ್ಕೆ ಇವರು ನಿರ್ಧರಿಸಿದ ಕೆಲಸವನ್ನು ಬಿಟ್ಟಿದ್ದಾರೆ ಅಂತ ನಿಮಗೆ ಅನಿಸಬಹುದು, ಆದರೆ ಈ ಮಕ್ಕಳು ಒಳಗಿನಿಂದ ಆ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಯಾವುದನ್ನೂ ಸುಲಭವಾಗಿ ಮರೆಯುವುದಿಲ್ಲ
ಮೇಷ ರಾಶಿಯ ಮಕ್ಕಳು ಯಾವುದನ್ನೂ ಸುಲಭವಾಗಿ ಮರೆಯುವುದಿಲ್ಲ, ಇದೇ ಕಾರಣದಿಂದ ಶಾಲೆಯಲ್ಲಿ ಇಂತಹ ಮಗುವಿನೊಂದಿಗೆ ಯಾರಾದರೂ ಜಗಳವಾಡಿದರೆ, ಅವರ ಮೇಲೆ ಸೇಡು ತೀರಿಸಿಕೊಳ್ಳುವವರೆಗೂ ಇವರು ಮರೆಯುವುದಿಲ್ಲ. ಆಳುವುದು ಇವರ ಸ್ವಭಾವದಲ್ಲಿರುತ್ತದೆ. ಸಂಗಾತಿಗೆ ಇವರು ಏನಾದರೂ ಹೇಳಿದರೆ ಮತ್ತು ಅವರು ಅದನ್ನು ಕೇಳಿಸಿಕೊಳ್ಳಲಿಲ್ಲ ಎಂದರೆ ತಕ್ಷಣ ಕೋಪಿಸಿಕೊಳ್ಳುತ್ತಾರೆ. ಏಕೆಂದರೆ ಇವರಿಗೆ 'ಇಲ್ಲ' ಅಂತ ಕೇಳುವ ಅಭ್ಯಾಸವೆ ಇರುವುದಿಲ್ಲ.
ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಸಾಧ್ಯತೆ ಇದೆ
ಈ ಮಕ್ಕಳ ಜಾತಕದಲ್ಲಿ ಒಂದು ವೇಳೆ ಇತರ ಗ್ರಹಗಳ ಸ್ಥಾನ ಚೆನ್ನಾಗಿದ್ದರೆ, ಇವರು ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಜನರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಯಾರಿಗೂ ಹೇಳುವುದಿಲ್ಲ, ಅವಕಾಶ ಸಿಕ್ಕಾಗಲೆಲ್ಲಾ, ಅವರು ಲಾಭ ಪಡೆಯಲು ತಪ್ಪಿಸಿಕೊಳ್ಳುವುದಿಲ್ಲ.
ಇವರನ್ನು ಗಾಯಗಳಿಂದ ರಕ್ಷಿಸಿ. ಹೋಮ್ ವರ್ಕ್ ಮಾಡದೆ ಇರಲು ಇವರು ಒಂದಿಲ್ಲ ಒಂದು ಕಾರಣ ಖಂಡಿತ ಹುಡುಕಿಕೊಳ್ಳುತ್ತಾರೆ. ಹೀಗಾಗಿ ಆರಂಭದಿಂದಲೂ ಕೂಡ ಇವರ ಮೇಲೆ ಕಟ್ಟುನಿಟ್ಟಾದ ನಿಯಮ ವಿಧಿಸಿ. ಇವರ ಉತ್ಸಾಹವನ್ನು ಎಂದಿಗೂ ಕೂಡ ತುಳಿಯಲು ಪ್ರಯತ್ನಿಸಬೇಡಿ. ಏಕೆಂದರೆ ಅದನ್ನು ಇವರು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ . ಆರೊಬ್ಬರ ಆದೇಶ ಪಾಲಿಸುವುದು ಇವರಿಗೆ ಕಷ್ಟಸಾಧ್ಯ. ಪ್ರೀತಿಯಿಂದ ಇವರು ಯಾವುದೇ ಕೆಲಸ ಹೇಳಿದರು ಮಾಡಲು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ತಮ್ಮ ಬಗ್ಗೆ ಪ್ರಶಂಸೆ ಕೇಳಲು ಇವರಿಗೆ ತುಂಬಾ ಇಷ್ಟದ ಕೆಲಸ, ಆದರೆ, ಮುನಿಸಿಕೊಂಡರೆ ಇವರು ಎಲ್ಲವನ್ನೂ ಮರೆತುಬಿಡುತ್ತಾರೆ. ಇವರನ್ನು ಆದಷ್ಟು ನೀರಿನಿಂದ ದೂರವಿರಿಸಿ.
Somavati Amavasya - ಶನಿ ದೇವ ಮ
ಮ್ಯಾಜಿಕ್ ಮಂತ್ರ: ಸೋಮಾರಿತನ ಬೇಡ, ಚುರುಕುತನದಿಂದಿದ್ದರೆ, ನಿಮಗೆ ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲ
ಇದನ್ನೂ ನೋಡಿ-ಈ ಮೂರು ರಾಶಿಯವರ ಮೇಲೆ ಜೀವನ ಪೂರ್ತಿ ಇರುತ್ತದೆಯಂತೆ ಗಣೇಶನ ಕೃಪೆ, ಪ್ರತಿ ಕೆಲಸದಲ್ಲೂ ನೀಡುತ್ತಾನೆ ಯಶಸ್ಸು
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ )
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.