Astrology, Zodiac Sign: ಜೋತಿಷ್ಯ ಶಾಸ್ತ್ರದ ಪ್ರಕಾರ, ಓರ್ವ ವ್ಯಕ್ತಿಯ ಜಾತಕದಲ್ಲಿನ ಗ್ರಹ-ನಕ್ಷತ್ರಗಳ ಸ್ಥಿತಿಯ ಪ್ರಭಾವ ಕೇವಲ ಆ ವ್ಯಕ್ತಿಗೆ ಮಾತ್ರ ಸೀಮಿತವಾಗಿರದೆ ಇತರರ ಮೇಲೂ ಪ್ರಭಾವ ಬೀರುತ್ತವೆ ಎನ್ನಲಾಗುತ್ತದೆ. ವ್ಯಕ್ತಿ ವಿಶೇಷರೊಬ್ಬರ ಜೀವನದಲ್ಲಿನ ಆಗಮನದಿಂದ ಸಾಕಾತ್ಮಕ ಬದಲಾವಣೆಗಳಾಗುತ್ತವೆ ಎಂಬುದನ್ನು ಜನ ಹೇಳುವುದನ್ನು ನೀವು ಗಮಣಿಸಿರಬಹುದು. ಈ ವಿಶೇಷ ವ್ಯಕ್ತಿ ಯಾರೆ ಆಗಿರಬಹುದು. ಅವರು ನಿಮ್ಮ ಬಾಳಸಂಗಾತಿ ಯಾಗಿರಬಹುದು, ಗೆಳೆಯರಾಗಿರಬಹುದು, ಪ್ರೇಮಿಯೇ ಆಗಿರಬಹುದು ಅಥವಾ ನಿಮ್ಮ ಸಂತಾನವೆ ಆಗಿರಬಹುದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಯಾವುದಾದರೊಂದು ವಿಶೇಷ ಗುಣ ಇದ್ದೇ ಇರುತ್ತದೆ ಅದು ಕೇವಲ ಅವರಿಗಷ್ಟೇ ಅಲ್ಲ ಇತರರ ಪಾಳಿಗೂ ಕೂಡ ಲಾಭದಾಯಕವಾಗಿರುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಹಲವು ಜಾತಕಗಲಿದ್ದು, ಅವು ಇತರರ ಪಾಲಿಗೆ ಭಾಗ್ಯಶಾಲಿ ಸಾಬೀತಾಗುತ್ತವೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಇತರರ ಪಾಲಿಗೆ ಭಾಗ್ಯಶಾಲಿ ಸಾಬೀತಾಗುತ್ತವೆ ಈ ರಾಶಿ ಜನರು 
ಕರ್ಕ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗೆ ಸೇರಿದ ಜನರ ಸ್ವಭಾವವು ತುಂಬಾ ಉದಾರ ಮತ್ತು ಶಾಂತವಾಗಿರುತ್ತದೆ. ಈ ಜನರು ಇತರರ ಭಾವನೆಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಇದೇ ವೇಳೆ, ತಮ್ಮ ಜೊತೆಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಇವರು ತುಂಬಾ ಅದೃಷ್ಟವಂತರು ಎಂದು ಸಾಬೀತಾಗುತ್ತಾರೆ. ಈ ರಾಶಿಚಕ್ರದ ಜನರನ್ನು ಮದುವೆಯಾಗುವ ವ್ಯಕ್ತಿಯು  ತುಂಬಾ ಅದೃಷ್ಟಶಾಲಿಯಾಗಿರುತ್ತಾನೆ ಎಂದು ನಂಬಲಾಗುತ್ತದೆ.  ಕುಟುಂಬದಲ್ಲಿ ಕರ್ಕ ರಾಶಿಯ ವ್ಯಕ್ತಿಯ ಆಗಮನವು ಸಂತೋಷವನ್ನು ತರುತ್ತದೆ. ಆದರೆ, ಕರ್ಕ ರಾಶಿಯ ಜನರು ತಮ್ಮ ಭಾವನಾತ್ಮಕ ಸ್ವಭಾವದಿಂದಾಗಿ ತಮಗೆ ತಾವೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. 


ಸಿಂಹ ರಾಶಿ : ಈ ರಾಶಿಯ ಜನರು ಯಾವ ವ್ಯಕ್ತಿಯ ಜೀವನದಲ್ಲಿ ಪ್ರವೇಶಿಸುತ್ತಾರೋ, ಅವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಪ್ರಗತಿ ಸಾಧಿಸಲು ಪ್ರಾರಂಭಿಸುತ್ತಾನೆ. ಈ ಜನರು ಉತ್ತಮ ತರಬೇತುದಾರರಾಗಬಹುದು. ಈ ರಾಶಿಯ ಜನರ ಸ್ವಭಾವವು ಮುಂಗೋಪಿ ಸ್ವಭಾವದದಾಗಿರುತ್ತದೆ. ಈ ಜನರು ಕೆಲವೊಮ್ಮೆ ತಮ್ಮ ಸ್ವಭಾವದಿಂದ ತಮಗೆ ತಾವೇ ತೊಂದರೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಇವರು ತಮ್ಮ ಸಂಬಂಧಿಕರಿಗೆ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Vastu Tips : ಮನೆಯ ಈ ಗೋಡೆಯ ಮೇಲೆ ಗಿಳಿ ಫೋಟೋ ಹಾಕಿ: ನಿಮ್ಮ ಅದೃಷ್ಟ ಬದಲಾಗುತ್ತೆ!


ಕುಂಭ ರಾಶಿ : ಕುಂಭ ರಾಶಿಯ ಜನರು ತುಂಬಾ ಕಠಿಣ ಪರಿಶ್ರಮಿಗಳಗಿರುತ್ತಾರೆ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಈ ಜನರು ಯಾರ ಜೀವನದಲ್ಲಿ ಪ್ರವೇಶಿಸುತ್ತಾರೆ, ಇವರು ಅವರನ್ನು ಜೀವನದಲ್ಲಿ ಮುಂದುವರಿಯಲು  ಪ್ರೇರೇಪಿಸುತ್ತಾರೆ. ಜೊತೆಗೆ, ಅದಕ್ಕೆ ತಮ್ಮ  ಬೆಂಬಲವನ್ನು ಸಹ ನೀಡುತ್ತಾರೆ. ಈ ಜನರು ಸ್ವಲ್ಪ ಸೋಮಾರಿಗಳು. ಈ ಒಂದು ನಕಾರಾತ್ಮಕ ಸಂಗತಿಯನ್ನು ಇವರು ತೊರೆದರೆ ಇವರು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ವಿಭಿನ್ನ ಗುರುತನ್ನು ಮೂಡಿಸಬಹುದು. 


ಇದನ್ನೂ ಓದಿ-Sagittarius Ascendant People : ಈ ರಾಶಿಯವರು ತೀಕ್ಷ್ಣ ಮನಸ್ಸು ಮತ್ತು ಪ್ರಚೋದನ ಸ್ಮೈಲ್ ಹೊಂದಿದ್ದರಂತೆ!


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ )


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.