Astrology for Love Life in Kannada: ಜೀವನದಲ್ಲಿ ಪ್ರೀತಿ ಇರುವುದು ತುಂಬಾ ಮುಖ್ಯ. ತಮ್ಮನ್ನು ಪ್ರೀತಿಸುವ ಸಂಗಾತಿಯ ಬೆಂಬಲವನ್ನು ಪಡೆಯುವ ಜನರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಆದರೆ, ಪ್ರೀತಿಸುವ ಬಾಳಸಂಗಾತಿಯ ಒಡನಾಟ ಅಥವಾ ನಿಜವಾದ ಪ್ರೀತಿ ಸಿಗುವುದು ಎಲ್ಲರ ಅದೃಷ್ಟದಲ್ಲಿ ಇರುವುದಿಲ್ಲ. ಇದೇ ವೇಳೆ, ಕೆಲವು ಜನರ ಪ್ರೇಮ ಜೀವನದಲ್ಲಿ ಯಾವುದೇ ಸ್ಥಿರತೆ ಇರುವುದಿಲ್ಲ. ಅವರು ಆಗಾಗ್ಗೆ ತಮ್ಮ ಸಂಗಾತಿಯನ್ನು ಬದಲಾಯಿಸುತ್ತಲೇ ಇರುತ್ತಾರೆ.  ಬ್ರೇಕ್ ಅಪ್ ಮತ್ತು ಹೊಸ ಸಂಗಾತಿಯನ್ನು ಹುಡುಕುವುದು ಅವರ ಪಾಲಿಗೆ ಕಷ್ಟದ ಕೆಲಸವಲ್ಲ. ಅವರು ತಮ್ಮ ಪಾರ್ಟ್ನರ್ ಅನ್ನು ಸುಲಭವಾಗಿ ಬದಲಾಯಿಸುತ್ತಾರೆ.


COMMERCIAL BREAK
SCROLL TO CONTINUE READING

ರಿಲೇಶನ್ ಶಿಪ್ ಸ್ಟೇಟಸ್ ಬದಲಾಗುತ್ತಲೇ ಇರುತ್ತದೆ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 3 ರಾಶಿಗಳ ಜನರ ಜೀವನದಲ್ಲಿ ಸಂಬಂಧದ ಸ್ಥಿತಿ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಈ ಜನರಿಗೆ ಜೀವನದಲ್ಲಿ ಓರ್ವ ಪಾರ್ಟ್ನರ್ ಜೊತೆ ಬದುಕಲು ಸಾಧ್ಯವಾಗುವುದಿಲ್ಲ. ವಿವಿಧ ಕಾರಣಗಳಿಂದ ಇವರು ಪದೇ ಪದೇ ಬ್ರೇಕ್ ಅಪ್ ಮಾಡಿಕೊಳ್ಳುತ್ತಲೇ ಇರುತ್ತಾರೆ.  ಆದರೆ ಈ ಜನರಿಗೆ ಶೀಘ್ರದಲ್ಲೇ ಹೊಸ ಪಾರ್ಟ್ನರ್ ಕೂಡ ಸಿಗುತ್ತಾರೆ. 


ಮೇಷ ರಾಶಿ: ಮೇಷ ರಾಶಿಯವರಿಗೆ ಕೋಪ ಮೂಗಿನ ಮೇಲೆ ಇರುತ್ತದೆ. ಕೆಲವೊಮ್ಮೆ ಇವರು ತಮ್ಮ ಸಂಗಾತಿ ಏನು ಹೇಳುತ್ತಿದ್ದಾರೆಂಬುದನ್ನು ಗಮನಿಸುವುದೇ ಇಲ್ಲ. ಇವರ ಇದೇ ಸ್ವಭಾವ ಅವರ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಮತ್ತು ಅವರು ಶೀಘ್ರದಲ್ಲೇ ತಮ್ಮ ಸಂಗಾತಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಆದರೆ, ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಸಂಬಂಧ ಇನ್ನೇನು ಸಂಪೂರ್ಣ ಬಿಗಡಾಯಿಸುತ್ತದೆ ಎನ್ನುವಷ್ಟರಲ್ಲಿ ಇವರು ಸ್ವತಃ  ತಾವೇ ಪಾಲುದಾರರಿಂದ ದೂರವಿರುತ್ತಾರೆ.


ತುಲಾ ರಾಶಿ: ತುಲಾ ರಾಶಿಯ ಜನರು ಹೆಚ್ಚಿನ ಸಂದರ್ಭಗಳಲ್ಲಿ ಸಮತೋಲನವನ್ನು ಹೊಂದಿರುತ್ತಾರೆ. ಆದರೆ ಇದೇ ವೇಳೆ ಇವರು ತುಂಬಾ ಭಾವನಾತ್ಮಕರಾಗಿರುವ ಕಾರಣ ಇವರು ಸಣ್ಣ-ಪುಟ್ಟ ವಿಷಯಗಳನ್ನು ಮನಸ್ಸಿನ ಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಇದೇ ಕಾರಣದಿಂದ ತಮ್ಮ ಸಂಗಾತಿಯಿಂದ ದೂರಾಗುತ್ತಾರೆ. ಈ ಕಾರಣದಿಂದಾಗಿ ಇವರು ಶೀಘ್ರದಲ್ಲೇ ತಮ್ಮ ಸಂಗಾಗಿಯಿಂದ ಬೇರ್ಪಡುತ್ತಾರೆ. ಸಾಮಾನ್ಯವಾಗಿ, ಇವರು ಸಂಗಾತಿಯ ಜೊತೆಗೆ ಜಗಳವಾಗುವ ಮೊದಲು ಮತ್ತು ಸಂಬಂಧದಲ್ಲಿ ಕಹಿ ಅನುಭವ ಬರುವ ಮೊದಲೇ ತಮ್ಮ ಸಂಗಾತಿಯೊಂದಿಗೆ ದೂರವಾಗುತ್ತಾರೆ.


ಇದನ್ನೂ ಓದಿ-Guru Purnima 2022: ಗುರು ಪೂರ್ಣಿಮಾ ದಿನ ನಿರ್ಮಾಣಗೊಳ್ಳುತ್ತಿವೆ 4 ರಾಜಯೋಗಗಳು, ಶುಭ ಮೂಹುರ್ತದಲ್ಲಿ ಪೂಜೆ ಸಲ್ಲಿಸಿದರೆ ಲಾಭ


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಸ್ವಲ್ಪ ಸ್ವಾರ್ಥಿಗಳಾಗಿದ್ದರೂ ಸಂಬಂಧದ ವಿಚಾರದಲ್ಲಿ ತಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುತ್ತಾರೆ. ಇವರು ಸಂಬಂಧವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಾರೆ, ಆದರೆ ಸಂಗಾತಿ ಕೈಬಿಡುತ್ತಿದ್ದಾನೆ ಅಂತ ಗೊತ್ತಾದರೆ ಸಾಕು, ಇವರು ಸಂಬಂಧದಿಂದ ಹೊರಬರಲು ತಡಮಾಡುವುದಿಲ್ಲ. ಈ ಜನರು ಸಹ ಸಂಬಂಧದಲ್ಲಿ ಕಹಿ ತುಂಬಲು ಇಷ್ಟಪಡುವುದಿಲ್ಲ ಮತ್ತು ಶೀಘ್ರದಲ್ಲೇ ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರೆ.


ಇದನ್ನೂ ಓದಿ-ಈ ಸಂಕೇತಗಳು ನಿಮಗೂ ಸಿಕ್ಕರೆ ಶನಿ ಮಹಾತ್ಮನ ಕೃಪೆ ನಿಮ್ಮ ಮೇಲಿದೆ ಎಂದರ್ಥ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.