Turmeric And Ghee For Diabetes: ಸಾಮಾನ್ಯವಾಗಿ ಬೆಳಗಿನ ಉಪಾಹಾರ ಅಥವಾ ಊಟ ದಿನವಿಡೀ ಶರೀರದ ಶಕ್ತಿಯನ್ನು ಕಾಪಾಡುತ್ತದೆ ಎನ್ನಲಾಗುತ್ತದೆ. ಆದರೆ ಮಧುಮೇಹದ ವಿಷಯಕ್ಕೆ ಬಂದರೆ, ಮಧುಮೇಹಿಗಳು ತಮ್ಮ ಆಹಾರದ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ಏಕೆಂದರೆ ಬೆಳಗ್ಗೆ ಸೇವಿಸಿದ ಆಹಾರ ಹೊಟ್ಟೆಯಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ನಿಧಾನವಾಗಿ ಗ್ಲುಕೋಸ್ ಬಿಡುಗಡೆ ಮಾಡುತ್ತದೆ. ಹೇಗಿರುವಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದೆ, ಶಕ್ತಿ ಹೆಚ್ಚಿಸುವ ಅವಶ್ಯಕತೆ ಬೀಳುತ್ತದೆ. ಹಿಗೀರುವಾಗ ಮಧುಮೇಹ ರೋಗಿಗಳು ಬೆಳಂಬೆಳಗ್ಗೆ ಶರೀರದ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಇನ್ಸುಲಿನ್ ಹೆಚ್ಚಿಸುವ ಆಹಾರ ಪದಾರ್ಥ ಸೇವಿಸುವ ಅವಶ್ಯಕತೆ ಬೀಳುತ್ತದೆ. 

COMMERCIAL BREAK
SCROLL TO CONTINUE READING

ಬೆಳಗ್ಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಹೀಗಿರುವಾಗ ಮಧುಮೇಹಿಗಳು ತಮ್ಮ ದಿನದಾರಂಭವನ್ನು ದಿನವಿಡೀ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರುವಂತೆ ಆರಂಭಿಸಬೇಕು. ಇದಕ್ಕಾಗಿ ನೀವು ಅರಿಷಿಣ ಮತ್ತು ದೇಸೀ ತುಪ್ಪವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಶಾಮೀಲುಗೊಳಿಸಬಹುದು. ಹಾಗಾದರೆ ಬನ್ನಿ ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ತುಪ್ಪ ಹಾಗೂ ಅರಿಷಿಣವನ್ನು ಹೇಗೆ ಸೇವಿಸಬೇಕು ಮತ್ತು ಅದು ಮಧುಮೆಹಿಗಳಿಗೆ ಹೇಗೆ ಲಾಭವನ್ನು ಕೊಡುತ್ತದೆ ತಿಳಿದುಕೊಳ್ಳೋಣ ಬನ್ನಿ, 

ಬೆಳಂಬೆಳಗ್ಗೆ ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಒಂದು ಸಾಮಾನ್ಯ ಸಂಗತಿ. ಇದು ದಿನದ ಏಕಮಾತ್ರ ಸಮಯವಿದ್ದು, ಈ ಸಮಯದಲ್ಲಿ ನಾವು ದಿನವಿಡೀ ನಮ್ಮ ಶರೀರವನ್ನು ರೀಚಾರ್ಜ್ ಮಾಡಬಹುದು. ಅದರಲ್ಲಿಯೂ ವಿಶೇಷವಾಗಿ ಮಧುಮೇಹಿಗಳ ಪಾಲಿಗೆ  ಬೆಳಗಿನ ಸಮಯ ತುಂಬಾ ಮಹತ್ವದ್ದಾಗಿದೆ ಎಂದು ಭಾವಿಸಲಾಗುತ್ತದೆ. ಏಕೆಂದರೆ ಮಧುಮೇಹಿಗಳು ಬೆಳಗ್ಗೆ ಹೊಟ್ಟೆ ತುಂಬುವ ರೀತಿಯಲ್ಲಿ ಏನನ್ನಾದರೂ ಸೇವಿಸುವ ಸಮಯ ಇದಾಗಿದೆ. ಇದರಿಂದ ಶರೀರದಲ್ಲಿ ಗ್ಲುಕೋಸ್ ನಿಧಾನಗತಿಯಲ್ಲಿ ಬಿಡುಗಡೆಯಾಗಿ ದಿನವಿಡೀ ಸಕ್ಕರೆ ಪ್ರಮಾಣ ಹೆಚ್ಚಾಗದೆ, ಶರೀರಕ್ಕೆ ಶಕ್ತಿ ಸಿಗುತ್ತದೆ. 

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕರಿಸುತ್ತವೆ ಅರಿಶಿಣ ಮತ್ತು ತುಪ್ಪ
ಒಂದು ವೇಳೆ ನೀವೂ ಕೂಡ ಮಧುಮೇಹ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಅರಿಶಿಣ ಹಾಗೂ ತುಪ್ಪ ಸೇವನೆ ನಿಮಗೆ ಸಾಕಷ್ಟು ಲಾಭ ನೀಡಲಿದೆ. ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸಾಮಾನ್ಯವಾಗುತ್ತದೆ. ಇದರ ಜೊತೆಗೆ ದಿನವಿಡೀ ಸಿಹಿ ತಿನ್ನುವ ಕಡುಬಯಕೆಯಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಅರಿಶಿಣ ಶರೀರದಲ್ಲಿನ ಉರಿಯೂತ ಕಡಿಮೆ ಮಾಡಲು ಸಹಕರಿಸುತ್ತದೆ. 

ಹೇಗೆ ಸೇವಿಸಬೇಕು ಮತ್ತು ಅದು ರಕ್ತದಲ್ಲಿನ ಸಕ್ಕರೆ ಮಟ್ಟ ಹೇಗೆ ನಿಯಂತ್ರಿಸುತ್ತದೆ
ಮಧುಮೇಹಿಗಳು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆ ಒಂದು ಚಮಚ ಹಸುವಿನ ತುಪ್ಪದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅರಿಶಿಣವನ್ನು ಬೆರೆಸಿ ಸೇವಿಸಬೇಕು. ಈ ರೀತಿ ಮಾಡುವುದರಿಂದ ದಿನವಿಡೀ ಬ್ಲಡ್ ಶುಗರ್  ಮಟ್ಟ ನಿಯಂತ್ರಣದಲ್ಲಿರುತ್ತದೆ. 


ಇದನ್ನೂ ಓದಿ-Neem Leaves: ಹಲವು ಕಾಯಿಲೆಗಳ ಚಿಕಿತ್ಸೆಗೆ ರಾಮಬಾಣ ಈ ಎಲೆಗಳು, ಇಲ್ಲಿದೆ ಉಪಯೋಗಿಸುವ ಸರಿಯಾದ ವಿಧಾನ!

ಆರೋಗ್ಯ ತಜ್ನರ ಪ್ರಕಾರ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಹಸುವಿನ ತುಪ್ಪ ಲಾಭಕಾರಿ ಸಾಬೀತಾಗುವ ಸಾಧ್ಯತೆ ಇದೆ. ಇದರಲ್ಲಿ ವಿಟಮಿನ್ ಎ, ಡಿ ಹಾಗೂ ಕೆ ಜೊತೆಗೆ ಆಂಟಿಆಕ್ಸಿಡೆಂಟ್ ಗಳು ಕಂಡುಬರುತ್ತವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿವೆ. ಇದರ ಜೊತೆಗೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ನಾರಿನಾಂಶ, ಪ್ರೊಟೀನ್ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಚಯಪಚಯ ವ್ಯವಸ್ಥೆ ಹಾಗೂ ಹೃದಯವನ್ನು ಉತ್ತಮವಾಗಿಡುವ ಫ್ಯಾಟ್ ಇರುತ್ತದೆ. ಇನ್ನೊಂದೆಡೆ ಅರಿಶಿಣದ ಕುರಿತು ಹೇಳುವುದಾದರೆ. ಅರಿಶಿಣ ಆಂಟಿಆಕ್ಸಿಡೆಂಟ್ ಹಾಗೂ ಆಂಟಿಇನ್ಫ್ಲೆಮೆಟರಿ ಗುಣಗಳು ಕಂಡುಬರುತ್ತವೆ ಮತ್ತು ಇವು ಶರೀರದಲ್ಲಿ ಇನ್ಸುಲಿನ್ ಸೃವಿಕೆಯನ್ನು ಹೆಚ್ಚಿಸುತ್ತವೆ. 


ಇದನ್ನೂ ಓದಿ-Bad Cholesterol: ಹಳಸಿದ ಬಾಯಿ ನೆನೆಹಾಕಿದ 5 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ) 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.