ಲಿಬಿಯಾದಲ್ಲಿ ಶಸ್ತ್ರಸಜ್ಜಿತ ಗುಂಪಿನ ವಶದಲ್ಲಿದ್ದ 17 ಭಾರತೀಯರ ರಕ್ಷಣೆ: ತಾಯ್ನಾಡಿಗೆ ಬಂದಿಳಿದ ಪ್ರಜೆಗಳು
NRI News: ಟುನಿಸ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಗಮನಾರ್ಹ ಸಂಗತಿ.
NRI News: ವಿದೇಶಾಂಗ ಸಚಿವಾಲಯದ (ಎಂಇಎ) ನಿರಂತರ ಪ್ರಯತ್ನಗಳ ಬಳಿಕ ಲಿಬಿಯಾದಲ್ಲಿ ಶಸ್ತ್ರಸಜ್ಜಿತ ಗುಂಪಿನ ವಶದಲ್ಲಿದ್ದ 17 ಭಾರತೀಯ ಪ್ರಜೆಗಳನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿದುಬಂದಿದೆ. ಪಂಜಾಬ್ ಮತ್ತು ಹರಿಯಾಣ ಮೂಲದ ಭಾರತೀಯ ಪ್ರಜೆಗಳು ಭಾನುವಾರ ಸಂಜೆ ದೆಹಲಿ ತಲುಪಿದ್ದಾರೆ.
ಇದನ್ನೂ ಓದಿ: Chandrayaan 3 :ಚಂದ್ರನ ಮೇಲೈ ಸ್ಪರ್ಶಕ್ಕೆ ಕ್ಷಣಗಣನೆ ! ಈ ಅದ್ಬುತದ ನೇರ ದೃಶ್ಯಗಳನ್ನು ಇಲ್ಲಿ ವೀಕ್ಷಿಸಿ
ಟುನಿಸ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಗಮನಾರ್ಹ ಸಂಗತಿ.
ಶಸ್ತ್ರಸಜ್ಜಿತ ಗುಂಪಿನ ವಶದಲ್ಲಿದ್ದ ಭಾರತೀಯ ಪ್ರಜೆಗಳ ಕುಟುಂಬದ ಸದಸ್ಯರು ಮೇ 26 ರಂದು ಟುನಿಸ್’ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಗಮನಕ್ಕೆ ಈ ಪ್ರಕರಣವನ್ನು ತಂದಿದ್ದರು. ಕಳ್ಳಸಾಗಣೆ ಬಳಿಕ ಭಾರತೀಯರನ್ನು ಲಿಬಿಯಾದ ಜ್ವಾರಾ ನಗರದಲ್ಲಿ ಸಶಸ್ತ್ರ ಗುಂಪಿನ ವಶದಲ್ಲಿ ಇರಿಸಲಾಗಿತ್ತು ಎಂದು ಬಿಡುಗಡೆಗೊಂಡ 17 ಮಂದಿ ಭಾರತೀಯರು ಹೇಳಿದ್ದಾರೆ.
ಟ್ಯುನಿಸ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೇ ಮತ್ತು ಜೂನ್’ನಲ್ಲಿ ನಿಯಮಿತವಾಗಿ ಲಿಬಿಯಾ ಅಧಿಕಾರಿಗಳೊಂದಿಗೆ ಮತ್ತು ಅನೌಪಚಾರಿಕ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸಿತ್ತು. ಈ ಮೂಲಕ ಲಿಬಿಯಾದ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ರಕ್ಷಿಸಲು ಸಾಧ್ಯವಾಯಿತು. ಆದರೆ ಆ ಬಳಿಕ ಅವರನ್ನು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪ ಹೊರಿಸಿ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಯಿತು.
ಟ್ಯುನಿಸ್’ನಲ್ಲಿರುವ ನಮ್ಮ ರಾಯಭಾರಿ ಮತ್ತು ನವದೆಹಲಿಯ ಹಿರಿಯ MEA ಅಧಿಕಾರಿಗಳ ಉನ್ನತ ಮಟ್ಟದ ಮಧ್ಯಸ್ಥಿಕೆಯ ನಂತರ, ಲಿಬಿಯಾ ಅಧಿಕಾರಿಗಳು ಅವರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡರು ಎಂದು ಭಾರತೀಯ ಪ್ರಜೆಗಳು ಹೇಳಿದ್ದಾರೆ.
ಇದನ್ನೂ ಓದಿ: ಗಗನಸಖಿಗೆ ʼನಿನ್ನ ರೇಟ್ ಎಷ್ಟು..ʼ ಎಂದು ಕೇಳಿದ ʼಅಕ್ರಂ ಅಹಮದ್ʼ ಎಂಬಾತನ ಬಂಧನ..!
“ಲಿಬಿಯಾದಲ್ಲಿ ಭಾರತೀಯ ರಾಯಭಾರ ಕಚೇರಿಯು ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸುವುದು ಸೇರಿದಂತೆ ನಮ್ಮ ಅಗತ್ಯಗಳನ್ನು ನೋಡಿಕೊಂಡಿದೆ. ಔಷಧಗಳು ಮತ್ತು ಬಟ್ಟೆಗಳನ್ನು ಸಹ ನೀಡಿದೆ. ನಮ್ಮ ಬಳಿ ಪಾಸ್’ಪೋರ್ಟ್‌ಗಳಿಲ್ಲದ ಕಾರಣ, ಭಾರತಕ್ಕೆ ಪ್ರಯಾಣಿಸಲು ತುರ್ತು ಪ್ರಮಾಣಪತ್ರಗಳನ್ನು ನೀಡಿದೆ. ಟಿಕೆಟ್’ಗಳನ್ನು ಸಹ ಒದಗಿಸಿದ್ದು, ಅದಕ್ಕೆ ಭಾರತೀಯ ರಾಯಭಾರ ಕಚೇರಿಯೇ ಹಣ ಪಾವತಿ ಮಾಡಿದೆ” ಎಂದು ಅವರು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.