Ashwin Ramaswami: ಅಮೆರಿಕದಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಭಾರತೀಯ ಮೂಲ ಅಶ್ವಿನ್ ರಾಮಸ್ವಾಮಿ..!
Ashwin Ramaswamy: ರಾಮಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದರೆ, ಅವರು ಜಾರ್ಜಿಯಾದ ಮೊದಲ ಜನರೇಷನ್ Z ರಾಜ್ಯ ಸೆನೆಟರ್ ಮತ್ತು ಇಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಪಡೆದ ಮೊದಲ ಸೆನೆಟರ್ ಆಗಲಿದ್ದಾರೆ.
Georgia Senate Elections: ಯುಎಸ್‌ನಲ್ಲಿ ರಾಜ್ಯ ಅಥವಾ ಫೆಡರಲ್ ಶಾಸಕಾಂಗಕ್ಕೆ ಚುನಾವಣೆಯಲ್ಲಿ ಅಶ್ವಿನ್ ರಾಮಸ್ವಾಮಿ ಅವರು ಸ್ಪರ್ಧಿಸಲಿದ್ದಾರೆ. ಇವರು ಭಾರತೀಯ-ಅಮೆರಿಕನ್ ಆಗಿದ್ದು 'ಜನರೇಷನ್ Z' ನಿಂದ ಮೊದಲ ಭಾರತೀಯ-ಅಮೆರಿಕನ್ ಆಗಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಈ ಚುನಾವಣೆಗೆ ಜನರೇಷನ್ Z (ಜೂಮರ್ಸ್ ಎಂದೂ ಕರೆಯುತ್ತಾರೆ) 1997 ಮತ್ತು 2012 ರ ನಡುವೆ ಜನಿಸಿದ ಜನರನ್ನು ಮಾತ್ರ ಭಾಗವಹಿಸಲು ಸಾಧ್ಯ.
'ರಾಮಾಯಣ-ಮಹಾಭಾರತ'ದಂತಹ ಮಹಾಕಾವ್ಯಗಳನ್ನು ಓದಿದ ರಾಮಸ್ವಾಮಿ
ಅಶ್ವಿನ್ ರಾಮಸ್ವಾಮಿ ಅವರ ಪೋಷಕರು 1990ರಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ಬಂದಿದ್ದರು. ಇಬ್ಬರೂ ತಮಿಳುನಾಡಿನವರು. ನನ್ನ ತಾಯಿ ಚೆನ್ನೈನವರು, ನನ್ನ ತಂದೆ ಕೊಯಮತ್ತೂರಿನವರು. ನಾನು ಭಾರತೀಯ ಮತ್ತು ಅಮೇರಿಕನ್ ಸಂಸ್ಕೃತಿಯ ನಡುವೆ ಬೆಳೆದಿದ್ದೇನೆ. ನಾನೊಬ್ಬ ಹಿಂದೂ. ನನ್ನ ಜೀವನದುದ್ದಕ್ಕೂ ನಾನು ಭಾರತೀಯ ಸಂಸ್ಕೃತಿ ಮತ್ತು ತತ್ವಶಾಸ್ತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದೇನೆ. ತಾನು ಚಿನ್ಮಯ ಮಿಷನ್ ಕಿಂಡರ್ ಗಾರ್ಟನ್‌ಗೆ ಹೋಗಿ ಅಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಮಹಾಕಾವ್ಯಗಳ ಬಗ್ಗೆ ಓದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: World Record: ನೋಬಲ್ ವಿಶ್ವ ದಾಖಲೆಯಲ್ಲಿ ನಾಲ್ಕು ತಿಂಗಳ ಮಗು ಹೆಸರು ಸೇರ್ಪಡೆ ...!
ರಾಮಸ್ವಾಮಿ ಅವರ ವೃತ್ತಿಜೀವನ
ರಾಮಸ್ವಾಮಿ ಎರಡನೇ ತಲೆಮಾರಿನ ಭಾರತೀಯ-ಅಮೆರಿಕನ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್, ಚುನಾವಣಾ ಭದ್ರತೆ, ತಂತ್ರಜ್ಞಾನ ಕಾನೂನು ಮತ್ತು ನೀತಿ ಸಂಶೋಧನೆಯಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಿದ್ದಾರೆ. ಅವರ ಪೋಷಕರು ಸಹ ಮಾಹಿತಿ ತಂತ್ರಜ್ಞಾನ (ಐಟಿ) ವಲಯದೊಂದಿಗೆ ಸಂಬಂಧ ಹೊಂದಿದ್ದಾರೆ.
ರಾಮಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದರೆ, ಅವರು ಜಾರ್ಜಿಯಾದ ಮೊದಲ ಜನರೇಷನ್ Z ರಾಜ್ಯ ಸೆನೆಟರ್ ಮತ್ತು ಇಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಪಡೆದ ಮೊದಲ ಸೆನೆಟರ್ ಆಗಲಿದ್ದಾರೆ.
ಇದನ್ನೂ ಓದಿ: ದುಬೈ ವಿಮಾನ ನಿಲ್ದಾಣ : ಈ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಅಗ್ರಸ್ಥಾನದಲ್ಲಿ
ರಾಮಸ್ವಾಮಿ ಅವರು ಡೆಮಾಕ್ರಟಿಕ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ರಾಮಸ್ವಾಮಿ ಅವರು ಜಾರ್ಜಿಯಾದ ಜಿಲ್ಲೆ-48 ರಲ್ಲಿ ರಾಜ್ಯ ಸೆನೆಟ್‌ಗೆ ಡೆಮಾಕ್ರಟಿಕ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಲ್ಲದೇ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಾಮಸ್ವಾಮಿ, 'ಜನರು ಉದ್ಯೋಗ ಮತ್ತು ಆರ್ಥಿಕತೆ, ಉದ್ಯಮಶೀಲತೆ ಜೊತೆಗೆ ಆರೋಗ್ಯ ರಕ್ಷಣೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ನಮಗೆ ಮುಖ್ಯವಾದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೇ ನಾನು ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.