ಲಂಡನ್:  ಸಮೃದ್ದಿಯ ಸಂಕೇತವಾಗಿರುವ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 20 ರಂದು ಇಂಡಿಯನ್ ಹೆರಿಟೇಜ್ ಸೆಂಟರ್ ಯುಕೆ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.


COMMERCIAL BREAK
SCROLL TO CONTINUE READING

ಕಾರ್ಯಕ್ರಮದಲ್ಲಿ ಯುಫೋನಿಕ್ಸ್ ಬ್ಯಾಂಡ್ ತಂಡದ ಸದಸ್ಯರು 90 ರ ದಶಕದ ಬಾಲಿವುಡ್ ಹಾಡುಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರೆ,ಇನ್ನೊಂದೆಡೆಗೆ ಭರತನಾಟ್ಯ ನೃತ್ಯ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ತಂದವು.ಇಂಡಿಯನ್ ಹೆರಿಟೇಜ್ ಸೆಂಟರ್ ಯುಕೆ ಸಂಸ್ಥಾಪಕರು ಮತ್ತು ಸಿಇಒ ಆಗಿರುವ ತೃಪ್ತಿ ಮೆಗೇರಿಯವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಇದೇ ವೇಳೆ ಇಂಡಿಯನ್ ಹೆರಿಟೇಜ್ ಸೆಂಟರ್ ಉದ್ದೇಶದ ಕುರಿತು ಮಾತನಾಡಿದ ಅವರು "ತಳಮಟ್ಟದಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವುದಾಗಿದೆ ಅದರಲ್ಲಿ ಮುಖ್ಯವಾಗಿ ಯುವ ಯುವಕರ ಭಾಗವಹಿಸುವಿಕೆ ವೆಲ್ಷ್ ಸರ್ಕಾರದ ಜನಾಂಗೀಯ ವಿರೋಧಿ ವೇಲ್ಸ್ ಕ್ರಿಯಾ ಯೋಜನೆ, ಮಹಿಳಾ ಸಬಲೀಕರಣ ಮತ್ತು ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು ಎಂದು ಅವರು ವಿವರಿಸಿದರು.ಇದೇ ವೇಳೆ ಸಮಿತಿಯ ಸದಸ್ಯರು ಮತ್ತು ಪ್ರಾಯೋಜಕರಿಗೆ ತಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.