ವಿಕ್ರಾಂತ್ ರೋಣಾ ಮೊದಲ NFT ಪ್ರೀಮಿಯರ್ ಶೋ ಎಲ್ಲಿ ನಡೆಯುತ್ತೆ ಗೊತ್ತಾ?
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್, ಪೋಸ್ಟರ್ ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಸಿನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ವಿಕ್ರಾಂತ್ ರೋಣಾ ವಿಶ್ವದ ಮೊದಲ NFT ಪ್ರೀಮಿಯರ್ ಶೋ ನಡೆಸುತ್ತಿದೆ. ಈ ಶೋ ನಡೆಯುತ್ತಿರುವುದು ಗಲ್ಫ್ ರಾಷ್ಟ್ರವಾದ ದುಬೈನಲ್ಲಿ.
Vikrant Rona New Update: ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ಜಗತ್ತಿನೆಲ್ಲೆಡೆ ಕಾತುರದಿಂದ ಕಾಯುತ್ತಿರುವ ವಿಕ್ರಾಂತ್ ರೋಣಾ ಸಿನಿಮಾ ತೆರೆ ಮೇಲೆ ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆಯಷ್ಟೇ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಸೇರಿ ವಿಕ್ರಾಂತ್ ರೋಣಾ ಸಿನಿಮಾ ತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇನ್ನು ಸಿನಿಮಾ ತಂಡ ಮತ್ತೊಂದು ಸಂತಸದ ಸುದ್ದಿ ಹೊರಹಾಕಿದ್ದು, ಮೊದಲ NFT ಪ್ರೀಮಿಯರ್ ಶೋ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಮುಂಗಡ ಟಿಕೆಟ್ ಬುಕಿಂಗ್‌ಗಾಗಿ ಕಾಯ್ತಿದ್ದೀರಾ? ಇಲ್ಲಿದೆ ಮಹತ್ವದ ಅಪ್‌ಡೇಟ್
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್, ಪೋಸ್ಟರ್ ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಸಿನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ವಿಕ್ರಾಂತ್ ರೋಣಾ ವಿಶ್ವದ ಮೊದಲ NFT ಪ್ರೀಮಿಯರ್ ಶೋ ನಡೆಸುತ್ತಿದೆ. ಈ ಶೋ ನಡೆಯುತ್ತಿರುವುದು ಗಲ್ಫ್ ರಾಷ್ಟ್ರವಾದ ದುಬೈನಲ್ಲಿ.
ಓವರ್‌ಸೀಸ್ ಮೂವೀಸ್ ಗಲ್ಫ್ (Overseas Movies Gulf - OMG) ತಂಡವು, ಜುಲೈ 27ರಂದು ವಿಒಎಕ್ಸ್ ಸಿನಿಮಾ ಡಯೆರಾ ಸಿಟಿ ಸೆಂಟರ್‌ನಲ್ಲಿ ವಿಶ್ವದ ಮೊದಲ NFT ಪ್ರೀಮಿಯರ್ ಶೋ ನಡೆಸುತ್ತಿರುವ ತಂಡವನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಮುಂದಿನ ಎಲ್ಲಾ ತಯಾರಿಯ ಬಗ್ಗೆ ತಮ್ಮಿಂದಾಗುವ ಸಹಕಾರದ ಭರವಸೆಯನ್ನು ನೀಡುವುದಾಗಿ ಹೇಳಿದರು.
ವಿಕ್ರಾಂತ್ ರೋಣ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಬಹು ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ನೋಡಲು ಕಿಚ್ಚ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ!? ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ
ಬಹು ನಿರೀಕ್ಷಿತ ವಿಕ್ರಾಂತ್ ರೋಣಾ ಸಿನಿಮಾ ವಿಶ್ವಾದ್ಯಂತ 3200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆದ್ರೆ, ಬಾಲಿವುಡ್‌ನ 900ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ, ಈಗಾಗಲೇ ಜಗತ್ತಿನಾದ್ಯಂತ 800ಕ್ಕೂ ಹೆಚ್ಚು ಶೋ ಅಡ್ವಾನ್ಸ್ ಬುಕಿಂಗ್ ಆಗಿದ್ದು, ಕಳೆದ ದಿನದಿಂದ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.