US Visa Waiting Time: ಅಮೆರಿಕಕ್ಕೆ ಹೋಗಲು ವೀಸಾ ಪಡೆಯಲು ಪ್ರಯತ್ನಿಸುತ್ತಿರುವ ಭಾರತೀಯರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಭಾರತದಲ್ಲಿ ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡಲು ಅಮೆರಿಕ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ವಿಶೇಷ ಸಂದರ್ಶನಗಳನ್ನು ನಿಗದಿಪಡಿಸುವುದು ಮತ್ತು ದೂತಾವಾಸದ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವಂತಹ ಉಪಕ್ರಮಗಳನ್ನು ಜಾರಿಗೊಳಿಸುವುದಾಗಿ ಬಿಡೆನ್ ಸರ್ಕಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Budget 2023: ಈ ಬಾರಿಯ ಬಜೆಟ್ ಮೇಲಿದೆ NRIಗಳ ಕಣ್ಣು: ಈ ಬೇಡಿಕೆಗಳು ಈಡೇರುತ್ತಾ?


ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್‌ಗಳು ಜನವರಿ 21 ರಂದು 'ವಿಶೇಷ ಶನಿವಾರ ಸಂದರ್ಶನ ದಿನಗಳನ್ನು' ಆಯೋಜಿಸಿವೆ.


ಯುಎಸ್ ರಾಯಭಾರ ಕಚೇರಿ ಏನು ಹೇಳಿದೆ?


ಯುಎಸ್ ರಾಯಭಾರ ಕಚೇರಿಯು ಭಾನುವಾರ, "ಜನವರಿ 21 ರಂದು, ಭಾರತದಲ್ಲಿನ ಯುಎಸ್ ಮಿಷನ್ ಮೊದಲ ಬಾರಿಗೆ ವೀಸಾ ಅರ್ಜಿದಾರರಿಗೆ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಮುಖ ಪ್ರಯತ್ನದಲ್ಲಿ 'ವಿಶೇಷ ಶನಿವಾರ ಸಂದರ್ಶನ ದಿನಗಳು' ಸರಣಿಯಲ್ಲಿ ಮೊದಲ ವಿಶೇಷ ಸಂದರ್ಶನವನ್ನು ನಡೆಸಿತು" ಎಂದು ಹೇಳಿಕೊಂಡಿದೆ.


"ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್‌ಗಳು ವೀಸಾ ಸಂದರ್ಶನಗಳ ಅಗತ್ಯವಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಶನಿವಾರದಂದು ಕಾನ್ಸುಲರ್ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ:  NRI News: ಕ್ಯಾನ್ಸರ್ ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿ ಎಂದಿದಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿ!


ಮುಂಬರುವ ತಿಂಗಳುಗಳಲ್ಲಿ ಕೆಲವು ಶನಿವಾರಗಳಂದು ನಡೆಯುವ ಸಂದರ್ಶನಗಳಿಗೆ 'ಹೆಚ್ಚುವರಿ ಸ್ಲಾಟ್‌ಗಳನ್ನು' ಒದಗಿಸುವುದನ್ನು ಮಿಷನ್ ಮುಂದುವರಿಸುತ್ತದೆ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.