ಸುಂದರ್ ಪಿಚೈ ಎಂದರೆ ಈಗಿನ ಜನತೆಗೆ ಚಿರಪರಿಚಿತ ಹೆಸರು. ಗೂಗಲ್ ಪೇರೆಂಟ್ ಆಲ್ಫಾಬೆಟ್ ಇಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಂದರ್ ಪಿಚೈ ಭಾರತ ಮೂಲದವರು. ವಿಶ್ವದ ಅತೀ ದೊಡ್ಡ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಿಚೈ ಅವರು, ಭಾರತದ ಹೆಮ್ಮೆಯ ಪುತ್ರ ಎಂದರೆ ತಪ್ಪಾಗಲ್ಲ.  


COMMERCIAL BREAK
SCROLL TO CONTINUE READING

ಇದನ್ನು ಓದಿ: Chariot Tragedy: ರಥಕ್ಕೆ ವಿದ್ಯುತ್‌ ತಂತಿ ಸ್ಪರ್ಶ: ಮಕ್ಕಳು ಸೇರಿ 11 ಮಂದಿ ದಾರುಣ ಸಾವು


ಬಾಲ್ಯದಿಂದಲೂ ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಇದೀಗ ಆ ಉತ್ಸಾಹದಿಂದಾಗಿ ವಿಶ್ವದ ಇತಿ ದೊಡ್ಡ ಕಂಪನಿಯ ಸಿಇಒ ಆಗಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಇವರ ಆದಾಯದ ಬಗ್ಗೆ ಲೆಕ್ಕಹಾಕಿದರೆ ಕಡಿಮೆ ಎಂದರೂ ನಿವ್ವಳ ಮೌಲ್ಯ 600 ಮಿಲಿಯನ್ ಡಾಲರ್​ನಷ್ಟಿದೆ ಎಂದು ಮೂಲಗಳು ತಿಳಿಸಿವೆ.  


ಸುಂದರ್‌ ಬಾಲ್ಯ: 
ಸುಂದರ್‌ ಪಿಚೈ 1972ರಲ್ಲಿ ತಮಿಳುನಾಡಿನ ಮಧುರೆಯಲ್ಲಿ ಜನಿಸಿದರು. ತಂದೆ ರಘುನಾಥ ಪಿಚೈ ಬ್ರಿಟಿಷ್ ಕಂಪನಿ ಜಿಇಸಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮದ್ರಾಸಿನಲ್ಲಿಯೇ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಉನ್ನತ ವ್ಯಾಸಂಗಕ್ಕಾಗಿ  ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು. ಆ ಬಳಿಕ ಹೆಚ್ಚಿನ ವ್ಯಾಸಂಗಕ್ಕೆ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯಕ್ಕೆ ಹೆಜ್ಜೆಯಿಟ್ಟ ಅವರು ಅಲ್ಲಿ ಎಂಎಸ್‌ ಪದವಿಯನ್ನು ಪಡೆದರು. ಬಳಿಕ ಎಂಬಿಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು. ಮೆಕಿನ್ಸೆ ಆಂಡ್‌ ಕಂಪನಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದಾರೆ. 


ಆಸ್ತಿ ಮೌಲ್ಯ ಮತ್ತು ಸಂಬಳ: 
ಸುಂದರ್ ಪಿಚೈ ತಂತ್ರಜ್ಞಾನ ಉದ್ಯಮದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅನುಭವದ ಜೊತೆಗೆ ಆಸ್ತಿಯನ್ನು ಸಹ ಸಂಪಾದಿಸಿದ್ದಾರೆ. ಇನ್ನು ಸುಂದರ್ ಪಿಚೈ ಗೂಗಲ್‌ ಪ್ರಸ್ತುತ ಪಡಿಸಿದ ಅನೇಕ ಯೋಜನೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 2015 ರಿಂದ 2020 ರವರೆಗೆ ಪ್ರತಿವರ್ಷ 1 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಸಂಬಳವನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪಿಚೈ ಅವರ ಮೂಲ ವೇತನ ಸುಮಾರು 2 ಮಿಲಿಯನ್ ಡಾಲರ್‌. ಇದರ ಜೊತೆಗೆ ಬೋನಸ್ ಮತ್ತು ಸ್ಟಾಕ್ ಅನುದಾನವನ್ನು ಸಹ ಪಡೆದುಕೊಳ್ಳುತ್ತಾರೆ ಸುಂದರ್‌. 


ಗೂಗಲ್‌ನಲ್ಲಿ ಪಿಚೈ ಸಾಧನೆ: 
ಪಿಚೈ ಭಾರತದಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರೈಸಿದ್ದಾರೆ. ಬಳಿಕ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ ಅವರು ಸ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಪದವಿಗಳನ್ನು ಪಡೆದಿದ್ದಾರೆ. 2004 ರಲ್ಲಿ ಗೂಗಲ್‌ಗೆ ಸೇರಿದ ಸುಂದರ್‌ ಪಿಚೈ ಅವರು, ಗೂಗಲ್‌ನಲ್ಲಿ ಡ್ರೈವ್, ಜಿಮೇಲ್ ಮತ್ತು ಮ್ಯಾಪ್‌ ಸೇರಿದಂತೆ ಕೆಲವು ಅಂಶಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದರು. ಈ ಎಲ್ಲಾ ಯಶಸ್ವಿ ಸಾಧನೆಗೈದ ಅವರು  2019 ರಲ್ಲಿ ಆಲ್ಫಾಬೆಟ್ ಇಂಕ್ ಸಿಇಒ ಆಗಿ ನೇಮಕಗೊಂಡರು. 


ಭಾರತ ಮತ್ತು ಸುಂದರ್‌ ಬಾಂಧವ್ಯ: 
ಸುಂದರ್ ಪಿಚೈ ಅವರು ವಿದೇಶದಲ್ಲಿ ನೆಲೆಸಿದ್ದರೂ ಸಹ ತಾಯ್ನಾಡಿನ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಭಾರತದ ಕೋವಿಡ್‌ ಪರಿಹಾರ ನಿಧಿಗೆ ಧನಸಹಾಯವನ್ನು ಸಹ ಮಾಡಿದ್ದಾರೆ. ಅಷ್ಟೇ ಅಲ್ಲದೆ,  ಗೂಗಲ್‌ನ 1 ಮಿಲಿಯನ್  ಡಾಲರ್‌ ದೇಣಿಗೆಯನ್ನು ಹಲವಾರು ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ. 


ಇದನ್ನು ಓದಿ: ಸ್ಥಿರವಾಗಿದೆ ಇಂಧನ ಬೆಲೆ: ಸಾರ್ವಜನಿಕರಿಗೆ ಕೊಂಚ ರಿಲೀಫ್‌


ಸುಂದರ್ ಪಿಚೈ ಸದ್ಯ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊದ ​​ಕೊಲ್ಲಿ ಪ್ರದೇಶದಲ್ಲಿ ವಾಸವಾಗಿದ್ದಾರೆ. 3 ಎಕರೆ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿ ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಈ ಮನೆಯನ್ನು 2014 ರಲ್ಲಿ ಅವರು ಖರೀದಿಸಿದ್ದಾರೆ ಎಂದು ಕೆಲ ವರದಿಗಳು ತಿಳಿಸಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.