UK ಮುಂದಿನ ಪ್ರಧಾನಿ ಆಗ್ತಾರಾ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್!
ಬೊರಿಸ್ ಜಾನ್ಸನ್ ವಿರುದ್ಧ ಸರಣಿ ರಾಜಿನಾಮೆಗಳ ನಂತರ ರಿಷಿ ಸುನಕ್, ಮುಂದಿನ ಯುಕೆ ಪ್ರಧಾನಿ ಸ್ಥಾನದ ಸ್ಪರ್ಧಿ ಎಂದು ನಂಬಲಾಗಿದೆ.
ಲಂಡನ್ (ಯುಕೆ): ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಅವರು ನಿನ್ನೆ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಬೊರಿಸ್ ಜಾನ್ಸನ್ ವಿರುದ್ಧ ಸರಣಿ ರಾಜಿನಾಮೆಗಳ ನಂತರ ರಿಷಿ ಸುನಕ್, ಮುಂದಿನ ಯುಕೆ ಪ್ರಧಾನಿ ಸ್ಥಾನದ ಸ್ಪರ್ಧಿ ಎಂದು ನಂಬಲಾಗಿದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ರಾಜೀನಾಮೆ ಸಲ್ಲಿಸುವ ಸಾಧ್ಯತೆ!!
ಮಂಗಳವಾರ ರಿಷಿ ಸುನಕ್ ರಾಜೀನಾಮೆ ನಂತರ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸರ್ಕಾರ ಪತನದ ಅಂಚಿಗೆ ತಲುಪಿದೆ ಎಂದು ಹೇಳಲಾಗ್ತಿದೆ. ರಿಷಿ ಸುನಕ್ ಜೊತೆಗೆ ಪಾಕಿಸ್ತಾನ ಮೂಲದ ಸಚಿವ ಸಾಜಿದ್ ಜಾವಿದ್ ಸಹ ರಾಜೀನಾಮೆ ನೀಡಿದ್ದಾರೆ. ಕ್ಯಾಬಿನೆಟ್‌ನಿಂದ ಅವಿಶ್ವಾಸ ಮತ ಪ್ರದರ್ಶಿಸುವ ಸಂಘಟಿತ ಪ್ರಯತ್ನಗಳು ಕಂಡುಬಂದ ಅರ್ಧ ಗಂಟೆಯೊಳಗೆ ಇವರು ಸರ್ಕಾರಕ್ಕೆ ರಾಜೀನಾಮೆ ನೀಡಿದ್ದು, ಮಹತ್ವದ ಬೆಳವಣಿಗೆಯಾಗಿದೆ.
ಸಾಕಷ್ಟು ಹೈಡ್ರಾಮಾ ಮತ್ತು ಸತತ ರಾಜೀನಾಮೆಗಳ ನಂತರ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಲು ಸಿದ್ಧರಾಗಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಈ ಬೆನ್ನಲ್ಲೇ ಭಾರತೀಯ ಮೂಲದ ರಿಷಿ ಸುನಕ್ ಯುಕೆ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಾಗ್ತಿದೆ. ಒಂದು ವೇಳೆ ಇದು ಸಂಭವಿಸಿದಲ್ಲಿ, ಅವರು ಬ್ರಿಟಿಷ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಲಿದ್ದಾರೆ.
ಇದನ್ನೂ ಓದಿ: ಅಮೃತಾ ಫಡ್ನವಿಸ್ ಗೆ ಬ್ರಿಟಿಷ್ ಸಂಸತ್ತಿನಲ್ಲಿ ಇಂಡಿಯನ್ ಆಫ್ ದಿ ವರ್ಲ್ಡ್ ಪ್ರಶಸ್ತಿ
ರಿಷಿ ಸುನಕ್ ಅವರ ಅಜ್ಜಿ ಪಂಜಾಬ್‌ನಿಂದ ಬಂದವರು. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಇವರ ಪತ್ನಿ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.