Maryland Lieutenant Governor Aruna Miller: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ತೆಲುಗು ಮಹಿಳೆಯೊಬ್ಬರು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಅರುಣಾ ಮಿಲ್ಲರ್ (58) ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: NRI News: ವಿದೇಶದಲ್ಲಿ ಲೈಫ್ ಸೆಟಲ್ ಮಾಡ್ಕೋಬೇಕು ಅನ್ನೋರಿಗೆ ಇಲ್ಲಿದೆ ಗುಡ್ ನ್ಯೂಸ್


ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಲೆಫ್ಟಿನೆಂಟ್ ಗವರ್ನರ್ ಆಗಿರುವುದು ಇತಿಹಾಸದಲ್ಲಿ ಇದೇ ಮೊದಲು. ಯುಎಸ್ ಮಧ್ಯಂತರ ಚುನಾವಣೆಯ ಭಾಗವಾಗಿ, ಡೆಮಾಕ್ರಟಿಕ್ ನಾಯಕ ವೆಸ್ ಮೂರ್ ಮೇರಿಲ್ಯಾಂಡ್‌ನ ಗವರ್ನರ್ ಹುದ್ದೆಗೆ ಸ್ಪರ್ಧಿಸಿದರೆ, ಅರುಣಾ ಮಿಲ್ಲರ್ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಇಬ್ಬರೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ವಿರುದ್ಧ ಗೆದ್ದಿದ್ದಾರೆ. ಗವರ್ನರ್ ನಂತರದ ಸ್ಥಾನದಲ್ಲಿ ಲೆಫ್ಟಿನೆಂಟ್ ಗವರ್ನರ್ ಇರುತ್ತಾರೆ. ಅಂತಹ ಜಾಗಕ್ಕೆ ತೆಲುಗು ಮೂಲದ ಮಹಿಳೆಯೊಬ್ಬಳು ಸೇರಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೇರಿಲ್ಯಾಂಡ್ ಪ್ರವಾಸ ಮಾಡಿದ್ದು, ಚುನಾವಣೆಯಲ್ಲಿ ಗೆಲ್ಲಲು ವ್ಯಾಪಕ ಪ್ರಚಾರ ಮಾಡಿದ್ದರು.


1972ರಲ್ಲಿ ಅರುಣಾ ಅವರ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿತ್ತು. ಇವರ ಹುಟ್ಟೂರು ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಮಂಡಲದ ವೆಂಟ್ರಪ್ರಗಡ ಗ್ರಾಮ. ಅರುಣಾ ಕಾತ್ರಗಡ್ಡ ವೆಂಕಟರಾಮ ರಾವ್ ಅವರ ಎರಡನೇ ಮಗು. ಅವಳು ಅಮೆರಿಕಾದಲ್ಲಿ ತನ್ನ ಶಿಕ್ಷಣವನ್ನು ಮುಂದುವರೆಸಿದಳು. ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮುಗಿಸಿರುವ ಅರುಣಾ, ಸಾರಿಗೆ ಇಂಜಿನಿಯರಿಂಗ್‌ನಲ್ಲಿಯೂ ಪರಿಣಿತಿ ಹೊಂದಿದ್ದಾರೆ. ಅವರು 1990 ರಲ್ಲಿ ಡೇವಿಡ್ ಮಿಲ್ಲರ್ ಅವರನ್ನು ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.


ಇದನ್ನೂ ಓದಿ: ಸೌದಿಯಲ್ಲಿ ಭಾರತೀಯ ಕುವರನ ಸಾಧನೆ: ಬ್ಯಾಡ್ಮಿಂಟನ್ ನಲ್ಲಿ ಕೋಟಿ ಬಹುಮಾನ ಗೆದ್ದ ಬಾಲಕ


ಅರುಣಾ ಅವರು ಹಲವು ವರ್ಷಗಳಿಂದ ಡೆಮಾಕ್ರಟಿಕ್ ಪಕ್ಷದ ಸದಸ್ಯೆಯಾಗಿದ್ದಾರೆ. ಸದ್ಯ ಅರುಣಾ ಅವರು ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಆಗುತ್ತಿದ್ದಂತೆ, ಅವರ ಸಂಬಂಧಿಕರು ಮತ್ತು ಗ್ರಾಮಸ್ಥರು ಅವರ ತವರಿನಲ್ಲಿ ಸಂಭ್ರಮಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ