NRI News: ಜರ್ಮನಿಗೆ ವ್ಯಾಸಂಗಕ್ಕಾಗಿ ತೆರಳಲು ಬಯಸುವ ವಿದ್ಯಾರ್ಥಿಗಳಿಗೆ ಇನ್ಮುಂದೆ APS ಸರ್ಟಿಫಿಕೇಟ್ ಅನಿವಾರ್ಯ
Study Abroad: ಅರ್ಥಾತ್ ನವೆಂಬರ್ 1 ರಿಂದ ನಿಮ್ಮ ವಿಸಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ APS ಪ್ರಮಾಣ ಪತ್ರ ಪಡೆದುಕೊಳ್ಳುವುದು ಅನಿವಾರ್ಯದ ಭಾಗವಾಗಿರಲಿದೆ ಎಂದು ಭಾರತದಲ್ಲಿನ ಜರ್ಮನ್ ಮಿಷನ್ಸ್ ಹೇಳಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಜರ್ಮನಿಗೆ ತೆರಳ ಬಯಸುವ ಆಕಾಂಕ್ಷಿಗಳಿವೆ ವಿಸಾ ಅರ್ಜಿ ಭರ್ತಿ ಮಾಡುವ ಮುನ್ನ ಎಪಿಎಸ್ ಪ್ರಮಾಣಪತ್ರ ಹೊಂದಿರಬೇಕು. ಅಕ್ಟೋಬರ್ 1, 2022 ರಿಂದ ಅಪ್ಲಿಕೇಶನ್ ಗಳಿಗೆ APS ತೆರೆದುಕೊಳ್ಳಲಿದೆ
Study In Germany: ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ಹೋಗ ಬಯಸುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು ಶೈಕ್ಷಣಿಕ ಮೌಲ್ಯಮಾಪನ ಕೇಂದ್ರದಿಂದ ಮೌಲ್ಯಮಾಪನ ಮಾಡಿಸಿ, ದೃಢೀಕರಣ ಪ್ರಮಾಣಪತ್ರ ಪಡೆದುಕೊಳ್ಳುವುದನ್ನು ಜರ್ಮನಿ ಕಡ್ಡಾಯಗೊಳಿಸಿದೆ.
ಅರ್ಥಾತ್ ನವೆಂಬರ್ 1 ರಿಂದ ನಿಮ್ಮ ವಿಸಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳಿಗೆ APS ಪ್ರಮಾಣ ಪತ್ರ ಪಡೆದುಕೊಳ್ಳುವುದು ಅನಿವಾರ್ಯದ ಭಾಗವಾಗಿರಲಿದೆ ಎಂದು ಭಾರತದಲ್ಲಿನ ಜರ್ಮನ್ ಮಿಷನ್ಸ್ ಹೇಳಿದೆ.
ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಜರ್ಮನಿಗೆ ತೆರಳ ಬಯಸುವ ಆಕಾಂಕ್ಷಿಗಳಿವೆ ವಿಸಾ ಅರ್ಜಿ ಭರ್ತಿ ಮಾಡುವ ಮುನ್ನ ಎಪಿಎಸ್ ಪ್ರಮಾಣಪತ್ರ ಹೊಂದಿರಬೇಕು. ಅಕ್ಟೋಬರ್ 1, 2022 ರಿಂದ ಅಪ್ಲಿಕೇಶನ್ ಗಳಿಗೆ APS ತೆರೆದುಕೊಳ್ಳಲಿದೆ.
ಇದನ್ನೂ ಓದಿ-NRI News: ಅಧ್ಯಯನದ ದೃಷ್ಟಿಯಿಂದ ಆಸ್ಟ್ರೇಲಿಯಾ ವಿದ್ಯಾರ್ಥಿಗಳ ಜನಪ್ರೀಯ ತಾಣವಾಗುತ್ತಿರುವುದೇಕೆ?
ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿರಲಿದೆ
>> www.aps-india.de ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿ ಪೂರ್ಣಗೊಂಡ ಅರ್ಜಿ ನಮೂನೆಯನ್ನು ಪ್ರಿಂಟ್ ಹಾಕಿ ಮತ್ತು ಸಹಿ ಮಾಡಿ. ನಮೂದಿಸಿದ ಡೇಟಾ ಸರಿಯಾಗಿದೆಯೇ ಮತ್ತು ಅರ್ಜಿದಾರರಿಂದ ಫಾರ್ಮ್ ಅನ್ನು ವೈಯಕ್ತಿಕವಾಗಿ ಸಹಿ ಮಾಡಲಾಗಿದೆಯೇ ಎಂಬುದನ್ನು ಒಮ್ಮೆ ಪರಿಶಿಲೀಸಿಕೊಳ್ಳಿ. ಅಪೂರ್ಣ ಮತ್ತು ತಪ್ಪಾದ ಮಾಹಿತಿಯು ನಿಮ್ಮ ಅರ್ಜಿ ಅಮಾನ್ಯಕ್ಕೆ ಕಾರಣವಾಗುತ್ತದೆ.
>> APS ಕಾರ್ಯವಿಧಾನದ ಶುಲ್ಕ 18,000/- INR ಅನ್ನು APS ಬ್ಯಾಂಕ್ ಖಾತೆಗೆ ವರ್ಗಾಯಿಸಿ.
>> ಸಂಪೂರ್ಣ ಭರ್ತಿ ಮತ್ತು ಸಹಿ ಮಾಡಲಾದ ಅರ್ಜಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಖುದ್ದಾಗಿ ಅಥವಾ ಕೊರಿಯರ್ ಮೂಲಕ APS ರಿಸೆಪ್ಶನ್ ಡೆಸ್ಕ್ ಗೆ ತಲುಪಿಸಿ.
>> ಬಳಿಕ APS ಇಂಡಿಯಾ ಕೇಂದ್ರದಲ್ಲಿ ನಿಮ್ಮ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಪೂರ್ಣ ಪ್ರಮಾಣದ ಅರ್ಜಿಗಳನ್ನು ಮಾತ್ರ ಮುಂದಕ್ಕೆ ಕಳುಹಿಸಲಾಗುವುದು.
>> ಈ ಪರಿಶೀಲನೆಯ ಬಳಿಕ ನಿಮ್ಮ ಆನ್ಲೈನ್ ಪ್ರೊಫೈಲ್ ನಲ್ಲಿ ನಿಮ್ಮ ದಾಖಲೆಗಳ ಪರೀಶೀಲನೆಯ ಫಲಿತಾಂಶ ಬಿತ್ತರಗೊಳ್ಳಲಿದೆ. ನಂತರ APS ವತಿಯಿಂದ ನೀಡಲಾಗುವ ಐದು ಒರಿಜಿನಲ್ ಪ್ರಮಾಣ ಪತ್ರಗಳು ಕೊರಿಯರ್ ಮೂಲಕ ನಿಮ್ಮ ಬಳಿಗೆ ಬಂದು ಸೇರಲಿವೆ.
>> ಈಗ ಅರ್ಹ ಅಭ್ಯರ್ಥಿಗಳು ವಿದ್ಯಾರ್ಥಿ ವಿಸಾಗಾಗಿ ವಿಎಫ್ಎಸ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ-NRI News: ಬ್ರಿಟನ್ ನಲ್ಲಿ ಭಾರತೀಯ ಸಮುದಾಯದ ವಿರುದ್ಧ ಹಿಂಸಾಚಾರ, ಹೈಕಮಿಷನ್ ಕಠಿಣ ಕ್ರಮಕ್ಕೆ ಆಗ್ರಹ
ಯಾವ ಯಾವ ದಾಖಲೆಗಳು ಬೇಕು?
>> ಸಂಪೂರ್ಣ ಭರ್ತಿ ಹಾಗೂ ಸಹಿ ಮಾಡಲಾದ ಅರ್ಜಿಯ ಪ್ರಿಂಟ್ ಔಟ್ (6 ತಿಂಗಳುಗಳ ಒಳಗೆ ತೆಗೆಯಿಸಲಾದ ಪಾಸ್ಪೋರ್ಟ್ ಸೈಜ್ ಫೋಟೋ ಸೇರಿದಂತೆ)
>> APS ಶುಲ್ಕ ಪಾವತಿಸಿದ ಪಾವತಿಯ ಪ್ರತಿ
>> ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಆಧಾರ್ ಕಾರ್ಡ್ ಪ್ರತಿ
>> ಪಾಸ್ಪೋರ್ಟ್ ಪ್ರತಿ
>> ಸಂಬಂಧಿಸಿದ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣಪತ್ರಗಳು
>> ಭಾಷೆ ಪ್ರಮಾಣಪತ್ರದ ಕಾಪಿ - ಜರ್ಮನಿ ಮತ್ತು/ಅಥವಾ ಇಂಗ್ಲಿಷ್
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.