Foreign Currency Non-Resident Swap Window: ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ರಕ್ಷಿಸಲು ಅಥವಾ ಸ್ಥಿರಗೊಳಿಸಲು ಫಾರೆನ್ ಕರೆನ್ಸಿ ನಾನ್ ರೆಸಿಡೆಂಟ್ ಸ್ವಾಪ್ ವಿಂಡೋ ಪರಿಚಯಿಸದೆ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರೀಯ ಬ್ಯಾಂಕ್ ನ ವಿದೇಶಿ ವಿನಿಮಯ ಮೀಸಲು ತನ್ನ ಗರಿಷ್ಟ ಮಟ್ಟದಿಂದ ಸಾಕಷ್ಟು ದೂರವಿದ್ದರೂ ಕೂಡ ಸಾಕಷ್ಟು ಉತ್ತಮ ಸ್ಥಿತಿಯಲ್ಲಿದೆ ಮತ್ತು ಇಂತಹ ಕ್ರಮ ದುಬಾರಿ ಸಾಬೀತಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-NRI News: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಸಾಗರೋತ್ತರ ಶಿಕ್ಷಣಕ್ಕೆ ಧಕ್ಕೆ

" ಪ್ರಸ್ತುತ ನಮಗೆ ಸ್ವಾಪ್ ರೀತಿಯ ಯಾವುದೇ ಕಿಟಕಿಯ ಅವಶ್ಯಕತೆ ಕಾಣಿಸುತ್ತಿಲ್ಲ. ಏಕೆಂದರೆ ನಮ್ಮ ಬಳಿ ವಿದೇಶಿ ವಿನಿಮಯ ಮೀಸಲು ಸಾಕಷ್ಟಿದೆ. ಹೀಗಿರುವಾಗ ಇಂತಹ ಸನ್ನಿವೇಶದಲ್ಲಿ ಸ್ವಾಪ್ ದುಬಾರಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಸಿ ಆರ್. ಫಾರೆಕ್ಸ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಹೇಳಿದ್ದಾರೆ. "ಒಂದು ವೇಳೆ ಸದ್ಯಕ್ಕೆ ಇರುವ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ 82-83 ರೂ.ಗಳಿಗೆ ಜಾರಿದರೆ, ಬಹುಶಃ ಆರ್.ಬಿ.ಐ ಇದನ್ನು ಕೊನೆಯ ಉಪಾಯವಾಗಿ ಪರಿಗಣಿಸಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ-NRI News: ಸಾಗರೋತ್ತರ ಶಿಕ್ಷಣ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎನ್ನುತ್ತಾರೆ ಭಾರತೀಯ ವಿದ್ಯಾರ್ಥಿಗಳು

ಕಳೆದ ಜುಲೈ ತಿಂಗಳಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಶೇ.1 ರಷ್ಟು ಜಾರಿದೆ. ಇದು ಜೂನ್ ನಲ್ಲಿನ ಶೇ.1.7ಕ್ಕಿಂತ ಕಡಿಮೆಯಾಗಿದ್ದರೂ ಕೂಡ ಅದು ವರ್ಷ 2022 ರಲ್ಲಿನ ಒಟ್ಟು ಕುಸಿತವನ್ನು ಶೇ.7.6ಕ್ಕೆ ತಲುಪಿಸಿದೆ ಎಂಬುದು ಬ್ಲೂಮ್ಬರ್ಗ್ ದತ್ತಾಂಶದಿಂದ ಸಾಬೀತಾಗುತ್ತದೆ. ನಿರಂತರವಾಗಿ ವಿದೇಶಿ ಬಂಡವಾಳ ಹೂಡಿಕೆದಾರರಿಂದ ಬಂಡವಾಳ ಹಿಂಪಡೆತ ಮತ್ತು ಯುಎಸ್ ಫೆಡ್ ರಿಸರ್ವ್ ನ ಆಕ್ರಮಣಕಾರಿ ನೀತಿಯ ಜೊತೆಗೆ ದಾಖಲೆಯ ಹೆಚ್ಚಿನ ವ್ಯಾಪಾರ ಕೊರತೆ ಕಾರಣ, ಡಾಲರ್ ಉತ್ತಮ ಮಟ್ಟದಲ್ಲಿ ಬಿಡ್ ನಡೆಸುತ್ತಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.