35 ವರ್ಷ ಬಿಟ್ಟು ಭಾರತಕ್ಕೆ ಬಂದಾಗ ಆಸ್ತಿಯೇ ನಾಪತ್ತೆ! ಕೇಸ್ ದಾಖಲಿಸೋಕೆ ಪರದಾಡಿದ ಎನ್‌ಆರ್‌ಐ
ಏಕೆಂದರೆ ಪ್ರಕರಣ ದಾಖಲಿಸಿಕೊಳ್ಳದೆ ಸ್ಥಳೀಯ ಪೊಲೀಸರು ಎರಡೂವರೆ ತಿಂಗಳ ಕಾಲ ಮಾತುಕತೆ ನಡೆಸುತ್ತೇವೆ ಎಂದು ಸಮಯ ಮುಂದೂಡಿದ್ದಾರೆ. ಇದರಿಂದ ನೊಂದ ಜಸ್ವಂತ್ ಅಂತಿಮವಾಗಿ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವರ ಗಮನಕ್ಕೆ ತಂದರು. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
35 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನೊಬ್ಬರಿಗೆ ಭಾರೀ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ. ಅನೇಕ ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದ ಕುಟುಂಬ ಭಾರತಕ್ಕೆ ಆಗಮಿಸಿದಾಗ, ತಮ್ಮ ಜಾಗವನ್ನು ಬೇರೆ ಯಾರೋ ಕಬ್ಜ ಮಾಡಿರುವುದು ತಿಳಿದುಬಂದಿದೆ. ಇನ್ನು ಈ ವಿಚಾರ ಸಂಬಂಧ ಕೇಸ್ ದಾಖಲಿಸಲು ಪೊಲೀಸರು ಸುಮಾರು 2 ತಿಂಗಳು ಸಮಯ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: 'ಮಹಾರಾಷ್ಟ್ರ ಸರ್ಕಾರದ ಆಪರೇಷನ್ ವಿಚಾರದ ಹಿಂದೆ ಅಮಿತ್ ಶಾ ಇದ್ದಾರೆ'
ಜಸ್ವಂತ್ ಸಿಂಗ್ ಅವರು ಮೂರು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಯುಎಸ್‌ಎ ಕಡೆ ಮುಖ ಮಾಡಿದ ಸಿಂಗ್ ಮೂಲತಃ ಪಂಜಾಬ್‌ಮ ಅಮೃತಸರ ಜಿಲ್ಲೆಯ ಸಂಘನಾ ಗ್ರಾಮದವರು. ಈ ಗ್ರಾಮದಲ್ಲಿ ಇವರಿಗೆ ಕೃಷಿ ಭೂಮಿ ಇತ್ತು. ಅದನ್ನು ಯಾರೋ ಇತ್ತೀಚೆಗಷ್ಟೇ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದ ಅವರು ತಕ್ಷಣವೇ ಭಾರತಕ್ಕೆ ಆಗಮಿಸಿದ್ದಾರೆ. ವಂಚಕರು ಅತಿಕ್ರಮಣ ಮಾಡಿಕೊಂಡ ಜಾಗವನ್ನು ಮರಳಿ ಪಡೆಯಲು ಪೊಲೀಸರ ಮೊರೆಯನ್ನೂ ಸಹ ಹೋಗಿದ್ದಾರೆ. ಆದರೆ ಸಹಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಶೆ ಉಂಟಾಗಿದೆ.
ಏಕೆಂದರೆ ಪ್ರಕರಣ ದಾಖಲಿಸಿಕೊಳ್ಳದೆ ಸ್ಥಳೀಯ ಪೊಲೀಸರು ಎರಡೂವರೆ ತಿಂಗಳ ಕಾಲ ಮಾತುಕತೆ ನಡೆಸುತ್ತೇವೆ ಎಂದು ಸಮಯ ಮುಂದೂಡಿದ್ದಾರೆ. ಇದರಿಂದ ನೊಂದ ಜಸ್ವಂತ್ ಅಂತಿಮವಾಗಿ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವರ ಗಮನಕ್ಕೆ ತಂದರು. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಸ್ ದಾಖಲಿಸದೆ ಜಸ್ವಂತ್‌ರನ್ನು ಆಟವಾಡಿಸಿದ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ಭಾರತಕ್ಕೆ ಬಂದಾಗಲೆಲ್ಲಾ ನನ್ನ ಮನಸ್ಸು ಶಾಂತವಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಅಷ್ಟೊಂದು ಅನುಕೂಲಕರವಾಗಿಲ್ಲ. ಬಾಲ್ಯದಲ್ಲಿ ಅಮೆರಿಕಾ ಬಿಟ್ಟ ನನಗೆ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇರಲಿಲ್ಲ. ಪೊಲೀಸ್ ಕೇಸ್ ದಾಖಲಿಸಲು ನನಗೆ ಸುಮಾರು ಎರಡೂವರೆ ತಿಂಗಳು ಬೇಕಾಯಿತು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೇವಲ ಒಂದು ಫೋನ್ ಕರೆ ಮಾಡಿದರೆ ಪೊಲೀಸರು ದೂರು ದಾಖಲಿಸುತ್ತಾರೆ. ನಾನು ವಿದೇಶದಲ್ಲಿ ನೆಲೆಸಿರುವುದನ್ನು ತಿಳಿದ ಆರೋಪಿಗಳು ಜಾಗವನ್ನು ಕಬಳಿಕೆ ಮಾಡಿದ್ದಾರೆ" ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪುರುಷರಲ್ಲಿ ಬಂಜೆತನ ಸಮಸ್ಯೆ: ಭಾರತದಲ್ಲಿ ಈ ಸಮಸ್ಯೆ ಹೆಚ್ಚಾಗಲು ಇದೆ 5 ಕಾರಣ!
ಅನಿವಾಸಿ ಭಾರತೀಯರ ದೂರುಗಳಿಗಾಗಿಯೇ ವಿಶೇಷವಾಗಿ ಸ್ಥಾಪಿಸಿರುವ ಎನ್‌ಆರ್‌ಐ ಸೆಲ್ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಹೇಳಿದರು. ಅನಿವಾಸಿ ಭಾರತೀಯರ ಆಸ್ತಿ ದುರ್ಬಳಕೆಯಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಸ್ವಂತ್ ಒತ್ತಾಯಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.