NRI woman commits suicide in Bengaluru: ಆಸ್ಟ್ರೇಲಿಯಾದಲ್ಲಿ ಐಟಿ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದ 45 ವರ್ಷದ ಎನ್‌ ಆರ್‌ ಐ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ವರ್ಷಗಳಿಂದ ಕಸ್ಟಡಿಯಲ್ಲಿರುವ ತಮ್ಮ ಇಬ್ಬರು ಮಕ್ಕಳನ್ನು ಬಿಡುಗಡೆ ಮಾಡುವ ಹೋರಾಟದಲ್ಲಿ ನೊಂದ ಮಹಿಳೆ ಆಗಸ್ಟ್ 20 ರಂದು ಬೆಂಗಳೂರಿಗೆ ಬಂದಿದ್ದಳು. ಮಕ್ಕಳ ಪಾಲನೆ ಹೋರಾಟದ ಆನ್‌ಲೈನ್ ವಿಚಾರಣೆಯನ್ನು ನವೆಂಬರ್‌’ಗೆ ಮುಂದೂಡಲಾಗಿದೆ ಎಂದು ತಿಳಿದ ಕೂಡಲೇ ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಸ್ಟ್ 22 ರಂದು ಘಟನೆ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೃತ್ತಿಜೀವನದಲ್ಲಿ ಕೇವಲ 2 ಪಂದ್ಯ ಆಡಿದ ಕ್ರಿಕೆಟಿಗನಿಗೆ ಏಷ್ಯಾಕಪ್ ತಂಡದಲ್ಲಿ ಅವಕಾಶ ಕೊಟ್ಟ ಸಮಿತಿ


ಆಗಸ್ಟ್ 20 ರಂದು ಸಿಡ್ನಿಯಿಂದ ಬೆಂಗಳೂರಿಗೆ ಬಂದ ಟೆಕ್ಕಿ ಮಹಿಳೆ ಧಾರವಾಡದಲ್ಲಿರುವ ತನ್ನ ಮನೆಗೂ ಹೋಗಿರಲಿಲ್ಲ. ಆಸ್ಟ್ರೇಲಿಯನ್ ಸಮುದಾಯಗಳು ಮತ್ತು ನ್ಯಾಯ ಇಲಾಖೆಯು ತನ್ನ 17 ವರ್ಷದ ಮಗ ಮತ್ತು 13 ವರ್ಷದ ಮಗಳನ್ನು  ಕಸ್ಟಡಿಯಲ್ಲಿ ಇರಿಸಿಕೊಂಡಿದೆ. ಅವರನ್ನು ಮರಳಿ ಪಡೆಯಲು ಸಾಧ್ಯವಾಗದಿರುವ ಕಾರಣ ನೊಂದು ತನ್ನ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಧಾರವಾಡದಲ್ಲಿರುವ ತನ್ನ ಹೆತ್ತವರಿಗೆ ಪತ್ರವನ್ನು ಕಳುಹಿಸಿದ್ದಾರೆ.


ತನ್ನ ತಂದೆಗೆ ಕೊರಿಯರ್ ಮಾಡಿದ ಪತ್ರದಲ್ಲಿ ಎನ್‌ಆರ್‌ಐ ಮಹಿಳೆ ಆತ್ಮಹತ್ಯೆಯ ಬಗ್ಗೆ ಬರೆದಿದ್ದಾರೆ. “ನ್ಯೂ ಸೌತ್ ವೇಲ್ಸ್ ಸಮುದಾಯಗಳು ಮತ್ತು ನ್ಯಾಯ ಇಲಾಖೆ ಹಾಗೂ ನೆರೆಹೊರೆಯವರ ಒಂದು ವಿಭಾಗವು ತನ್ನ ಜೀವನವನ್ನು ಹಾಳುಮಾಡಿದೆ” ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.


ಎನ್ ಆರ್ ಐ ಮಹಿಳೆಯ ಮಗ ಅಲ್ಸರೇಟಿವ್ ಕೊಲೈಟಿಸ್‌ ನಿಂದ ಬಳಲುತ್ತಿದ್ದ. ಈ ಸಂಬಂಧ ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆರು ತಿಂಗಳು ಚಿಕಿತ್ಸೆ ನೀಡಿದರೂ ಮಗು ಚೇತರಿಸಿಕೊಳ್ಳದಿದ್ದಾಗ, ಸರಿಯಾದ ಚಿಕಿತ್ಸೆ ನೀಡದ ಕಾರಣ ವೈದ್ಯರ ವಿರುದ್ಧ ಕಾನೂನು ದೂರು ದಾಖಲಿಸಲಾಯಿತು. ಇದರಿಂದ ಕುಪಿತಗೊಂಡ ವೈದ್ಯೆ, ಮನೆಯಲ್ಲಿ ಸರಿಯಾಗಿ ಆರೈಕೆ ಮಾಡದಿರುವುದು ರೋಗಕ್ಕೆ ಕಾರಣ ಎಂದು ಆಕೆಯ ವಿರುದ್ಧ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿ ಸೇಡು ತೀರಿಸಿಕೊಂಡಿದ್ದಾಳೆ. ಸಮುದಾಯಗಳು ಮತ್ತು ನ್ಯಾಯ ಇಲಾಖೆಯು ಮೂರು ವರ್ಷಗಳ ಹಿಂದೆ ಇಬ್ಬರು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿತು. ಮಕ್ಕಳನ್ನು ಕಸ್ಟಡಿಯಿಂದ ಮರಳಿ ಪಡೆಯಲು ಮಹಿಳೆ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಳು. ಆದರೆ ಸತತ ವೈಫಲ್ಯದಿಂದ ಅಸಮಾಧಾನ ಮತ್ತು ಅವಮಾನವನ್ನು ಅನುಭವಿಸುತ್ತಿದ್ದಳು. ಅಲ್ಲಿನ ವ್ಯವಸ್ಥೆಗಳು ಚೆನ್ನಾಗಿಲ್ಲ ಎಂದು ಭಾವಿಸಿದ್ದರಿಂದ ಭಾರತ ಬರಲು ಬಯಸಿದ್ದಳು. ಮಕ್ಕಳನ್ನು ಕರೆತಂದು ಇಲ್ಲಿಯೇ ಅಂತರರಾಷ್ಟ್ರೀಯ ಶಾಲೆಗೆ ದಾಖಲಾತಿ ಮಾಡಬೇಕೆಂದಿದ್ದಳು ಎಂದು ಮೃತರ ತಂದೆ ಹೇಳಿದ್ದಾರೆ.


ಇದನ್ನೂ ಓದಿ: Rain Alert: ರಾಜ್ಯದ 16 ಜಿಲ್ಲೆಗಳಲ್ಲಿ 5 ದಿನಗಳ ಕಾಲ ಬಿಡುವಿಲ್ಲದೆ ಸುರಿಯಲಿದೆ ಭಾರೀ ಮಳೆ


ಆಗಸ್ಟ್‌ ನಲ್ಲಿ, ಮಕ್ಕಳನ್ನು ಕಸ್ಟಡಿಯಿಂದ ಬಿಡಿಸಲು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದ್ದರು. ಈ ವಿಚಾರಣೆಯನ್ನು ಆಗಸ್ಟ್ 22 ರಂದು ನಿಗದಿಪಡಿಸಲಾಗಿತು. ಆದರೆ ಸಿದ್ಧತೆ ಮಾಡಲೆಂದು ಭಾರತಕ್ಕೆ ಬಂದ ಸಂದರ್ಭದಲ್ಲಿ ವಿಚಾರಣೆಯನ್ನು ನವೆಂಬರ್‌’ಗೆ ಮುಂದೂಡಲಾಗಿದೆ ಎಂದು ತಿಳಿದು ಅಸಮಾಧಾನಗೊಂಡಿದ್ದಳು. ಮಕ್ಕಳ ಪಾಲನೆಯನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಈ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಬೇಸರಗೊಂಡ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಷ್ಟೇ ಅಲ್ಲದೆ, ಡೆತ್ ನೋಟ್’ನಲ್ಲಿ "ಡಿಸಿಜೆ ಸಿಡ್ನಿ ನಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.