ಬೇಸಿಗೆ ರಜೆಯ ನಂತರ ಶಾಲೆಗಳು ಪುನರಾರಂಭವಾಗಿದ್ದರೂ ಸಹ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಕುಟುಂಬಗಳು ಮತ್ತೆ ಹೊರದೇಶಗಳಿಗೆ ಪ್ರಯಾಣ ಬೆಳೆಸುವ ಯೋಜನೆ ಮಾಡುತ್ತಿಲ್ಲ. ಇದಕ್ಕೆ ಕಾರಣ ಗಲ್ಫ್ ವಲಯಕ್ಕೆ ವಿಮಾನ ದರಗಳಲ್ಲಿ ಹೆಚ್ಚಳ ಮಾಡಿರುವುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘NRI ಗ್ರಾಮ’ದ ಕೃಷ್ಣಾಷ್ಟಮಿಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ: 200 ವರ್ಷ ಹಳೆಯ ಈ ದೇವಾಲಯಕ್ಕಿದೆ ‘ವಿದೇಶಿ’ ನಂಟು


ಮಧ್ಯಪ್ರಾಚ್ಯದಲ್ಲಿ ಈಗಷ್ಟೇ ಮುಕ್ತಾಯಗೊಂಡ ಬೇಸಿಗೆ ರಜೆಯ ಸಮಯದಲ್ಲಿ ತಮ್ಮ ತಾಯ್ನಾಡಿಗೆ ಹಿಂದಿರುಗಿದ ಹಲವಾರು ಕುಟುಂಬಗಳು ಇದೀಗ ವಿಮಾನ ದರ ಹೆಚ್ಚಳದಿಂದ ಕಂಗೆಟ್ಟು, ಇಲ್ಲಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಶಾಲೆಗಳು ಪುನರಾರಂಭಗೊಂಡಿವೆ. ಆದರೆ ಕೇರಳದಿಂದ ಯುಎಇಗೆ ತೆರಳುವ ಅನೇಕ ಕುಟುಂಬಗಳು ಪ್ರಯಾಣ ದರ ಕಡಿಮೆಯಾಗುತ್ತವೆಯೋ ಏನೋ ಎಂದು ಕಾಯುತ್ತಿದ್ದಾರೆ.


ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಿಗೆ ನಾಲ್ಕು ಸದಸ್ಯರ ಕುಟುಂಬದ ವಿಮಾನ ದರವು ರೂ 1.6 ಲಕ್ಷದಿಂದ ರೂ 3.5 ಲಕ್ಷದವರೆಗೆ ಆಗಿರುತ್ತದೆ. ಅಷ್ಟೇ ಅಲ್ಲದೆ, ಟಿಕೆಟ್ ದರ ಸುಮಾರು 5,000 ರೂ.ಗಳಿಂದ 10,000 ರೂ.ಗಳಷ್ಟು ಹೆಚ್ಚಿರುವುದರಿಂದ ಅಬುಧಾಬಿಗೆ ಪ್ರಯಾಣಿಸಲು ಇನ್ನೂ ಹೆಚ್ಚಿನ ವೆಚ್ಚವಾಗುತ್ತದೆ. ಒಬ್ಬ ವ್ಯಕ್ತಿಗೆ ಏಕಮುಖದ ಟಿಕೆಟ್ ಈಗ ರೂ. 40,000 ಕ್ಕಿಂತ ಹೆಚ್ಚು. ನೇರ ವಿಮಾನಗಳಲ್ಲಿ ಕೆಲವೇ ಸೀಟುಗಳು ಲಭ್ಯವಿವೆ. ಹೆಚ್ಚಿನ ದರದ ಟಿಕೆಟ್‌ಗಳಿಗಾಗಿ ಅನೇಕ ಟೇಕರ್‌ಗಳು ಇರುವುದರಿಂದ ವಿಮಾನ ದರಗಳು ಶೀಘ್ರದಲ್ಲೇ ಕಡಿಮೆಯಾಗುವ ಸಾಧ್ಯತೆ ಕಾಣುತ್ತಿಲ್ಲ.


ವಾಸ್ತವವಾಗಿ, ಹೆಚ್ಚಿನ ದರದ ಹೊರತಾಗಿಯೂ ಈಗ ನೇರ ವಿಮಾನಗಳಲ್ಲಿ ಯಾವುದೇ ಸೀಟುಗಳು ಲಭ್ಯವಿಲ್ಲ. ಅನೇಕ ಯುಎಇ-ಬೌಂಡ್ ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಂಪರ್ಕ ವಿಮಾನಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಭಾರತದಿಂದ ನೇರ ಯುಎಇ ವಿಮಾನವು ಕೇವಲ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆಯಾದರೂ ಅವರು ಪ್ರವಾಸವನ್ನು ಮಾಡಲು ಇನ್ನೂ ಹಲವು ಗಂಟೆಗಳನ್ನು ವ್ಯಯಿಸಬೇಕಾಗುತ್ತದೆ.


ಇದನ್ನೂ ಓದಿ: ಖಾಸಗಿ ಬ್ಯಾಂಕ್ ಗಳಲ್ಲಿಯೇ NRIಗಳು ಹೂಡಿಕೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ ಉತ್ತರ


ಕುವೈಟ್‌ಗೆ ವೈಯಕ್ತಿಕ ಏಕಮುಖ ಟಿಕೆಟ್‌ಗೆ 52,000 ರೂ. ಅದೇ ನಾಲ್ಕು ಕುಟುಂಬದ ನಾಲ್ಕು ಸದಸ್ಯರಿಗೆ ಸುಮಾರು 2.3 ಲಕ್ಷದಿಂದ 5 ಲಕ್ಷ ರೂ.ಆಗುತ್ತದೆ. ಇನ್ನು ಕತಾರ್‌ಗೆ ಟಿಕೆಟ್ ದರವು 1.5 ಲಕ್ಷದಿಂದ 4.2 ಲಕ್ಷದವರೆಗೆ ಇರುತ್ತದೆ. ವೈಯಕ್ತಿಕ ಏಕಮುಖ ಟಿಕೆಟ್‌ಗೆ ಕನಿಷ್ಠ 35,000 ರೂ.ಆಗುತ್ತದೆ. ಒಮಾನ್‌ನ ರಾಜಧಾನಿಯಾದ ಮಸ್ಕತ್‌ಗೆ ವೈಯಕ್ತಿಕ ಏಕಮುಖ ಟಿಕೆಟ್‌ಗೆ 35,000 ರೂ.ಗಳಿದ್ದರೆ, ಕುಟುಂಬಕ್ಕೆ ಕನಿಷ್ಠ 1.25 ಲಕ್ಷ ರೂ. ಬೇಕಾಗುತ್ತದೆ. ಬಹ್ರೇನ್‌ಗೆ ವಿಮಾನ ದರವು ರೂ 1.7 ಲಕ್ಷದಿಂದ ರೂ 5.5 ಲಕ್ಷದವರೆಗೆ ಇರುತ್ತದೆ. ವೈಯಕ್ತಿಕ ಏಕಮುಖ ಟಿಕೆಟ್ ಬೆಲೆ ರೂ 44,000 ಕ್ಕಿಂತ ಹೆಚ್ಚಾಗಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ಗೆ ಒಬ್ಬ ವ್ಯಕ್ತಿಗೆ ಏಕಮುಖ ಟಿಕೆಟ್ ದರ 50,000 ರೂ. ಇದೆ. ರಿಯಾದ್ ತಲುಪಲು ನಾಲ್ಕು ಸದಸ್ಯರ ಕುಟುಂಬವು 1.8 ಲಕ್ಷದಿಂದ 9.4 ಲಕ್ಷ ರೂಪಾಯಿ ಖರ್ಚು ಮಾಡಬೇಕು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.