ಆತ್ಮಹತ್ಯೆಗೂ ಮುನ್ನ ಸಿಖ್ ಮಹಿಳೆ ವಿಡಿಯೋ, ಪತಿಯ ಕ್ರೌರ್ಯ ಕೇಳಿದ್ರೆ ಬೆಚ್ಚಿಬೀಳ್ತೀರಾ!
Viral Video: ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ ಸಿಖ್ ಮಹಿಳೆಯೊಬ್ಬರು, ತಮ್ಮ ಪತಿಯ ಕ್ರೌರ್ಯವನ್ನು ಅದರಲ್ಲಿ ವಿವರಿಸಿದ್ದಾರೆ. ಅವರು ತಮ್ಮ ಪತಿ ರಂಜೋಧ್ಬೀರ್ ಸಿಂಗ್ ಸಂಧು ಅವರ ಕುಟುಂಬ ನೀಡಿದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.
Suicide Video: ನ್ಯೂಯಾರ್ಕ್ ನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಪತಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಹಿಳೆ ವಿಡಿಯೋ ಮಾಡಿ ಪತಿ ನೀಡಿದ ಕಿರುಕುಳವನ್ನು ಹೇಳಿದ್ದಾರೆ. ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಕಾರಣಕ್ಕಾಗಿಯೇ ಪತಿ ತನ್ನನ್ನು ಪ್ರತಿದಿನ ಹೊಡೆಯುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಜನರು ಇದನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ಆರು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳ ತಾಯಿ, ಈ ವಿಡಿಯೋದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯು ಪತಿ ನೀಡಿದ ಚಿತ್ರಹಿಂಸೆಯನ್ನು ಪರಿ ಪರಿಯಾಗಿ ವಿವರಿಸಿದ್ದಾರೆ.
ಇದನ್ನೂ ಓದಿ: BBK OTT : ಭಿಕ್ಷೆ ಬೇಡುತ್ತಿದ್ದ ಇವರು ಈಗ ಬಿಗ್ ಬಾಸ್ ಸ್ಪರ್ಧಿ.. ಕಣ್ಣೀರು ತರಿಸುತ್ತೆ ಈ ಕಲಾವಿದ
ಮಹಿಳೆಯ ಭಾವನಾತ್ಮಕ ವಿಡಿಯೋ ವೈರಲ್ :
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, 30 ವರ್ಷದ ಮನ್‌ದೀಪ್ ಕೌರ್, "ನಾನು ಇದನ್ನೆಲ್ಲ ಸಹಿಸಿಕೊಂಡಿದ್ದೇನೆ. ಮುಂದೊಂದು ದಿನ ಅವನು ಬದಲಾಗುತ್ತಾನೆ ಎಂಬ ಭರವಸೆಯಲ್ಲಿದ್ದೆ" ಎಂದು ಹೇಳುತ್ತಾ ಆರು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳ ತಾಯಿ, ಮತ್ತೆ ಮತ್ತೆ ಅಳುತ್ತಾರೆ. "ಮದುವೆಯಾಗಿ ಎಂಟು ವರ್ಷಗಳು ಕಳೆದಿವೆ. ಈಗ ನನಗೆ ಪ್ರತಿದಿನವೂ ಹೊಡೆತ ತಿನ್ನಲು ಸಾಧ್ಯವಿಲ್ಲ" ಎನ್ನುತ್ತಾರೆ. ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಾ, "ತನ್ನ ಪತಿ ಮತ್ತು ಅತ್ತೆ ಆತ್ಮಹತ್ಯೆಗೆ ಒತ್ತಾಯಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. "ಅಪ್ಪಾ, ನಾನು ಸಾಯಲಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸು" ಎಂದು ತಮ್ಮ ತಂದೆ ಬಳಿ ಕೇಳಿಕೊಂಡಿದ್ದಾರೆ.
ಮಹಿಳೆಯ ತಂದೆ ನೋವು ತೋಡಿಕೊಂಡರು :
ಮಹಿಳೆಯ ತಂದೆ ಜಸ್ಪಾಲ್ ಸಿಂಗ್ ಅವರು ಅಮೆರಿಕದಲ್ಲಿ ನೆಲೆಸಿರುವ ಪತಿ ಮತ್ತು ಭಾರತದಲ್ಲಿ ನೆಲೆಸಿರುವ ಮಗಳ ಅತ್ತೆಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ. ನಮ್ಮ ಸಂಬಂಧಿಕರು ಈ ವಿಷಯವನ್ನು ನ್ಯೂಯಾರ್ಕ್‌ನಲ್ಲಿ ಪೊಲೀಸರ ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದು ಅವರು ಹೇಳಿದರು.
2015 ರಲ್ಲಿ ವಿವಾಹವಾದ ದಂಪತಿ :
ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿಗಳಾದ ಮನ್‌ದೀಪ್ ಕೌರ್ ಮತ್ತು ರಂಜೋಧ್ಬೀರ್ ಸಿಂಗ್ ಸಂಧು ಅವರು 2015 ರಲ್ಲಿ ಮದುವೆಯಾದರು. ಇದುವರೆಗೂ ಪತಿಯಿಂದಾಗಲಿ, ಕುಟುಂಬದವರಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: Viral Video: ತರಗತಿಯಲ್ಲಿಯೇ ಜುಟ್ಟು ಹಿಡಿದು ಜಗಳವಾಡಿದ ವಿದ್ಯಾರ್ಥಿನಿಯರು
'ದಿ ಕೌರ್ ಮೂವ್ಮೆಂಟ್' ಧ್ವನಿ ಎತ್ತಿತು :
ಈ ವಿಡಿಯೋವನ್ನು ಕೌರ್ ಮೂವ್‌ಮೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ಸಂಸ್ಥೆಯು ಸಿಖ್ ಸಮುದಾಯವನ್ನು ಕೇಂದ್ರೀಕರಿಸುವ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಿಗಾಗಿ ಕಾರ್ಯನಿರ್ವಹಿಸುತ್ತದೆ. ಕ್ಲಿಪ್‌ಗಳನ್ನು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕ ಜನರು ಹಂಚಿಕೊಂಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.