ಭಾರತದಿಂದ ಸಿಂಗಾಪುರಕ್ಕೆ ತೆರಳುವ ಜನರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರ್ ಏರ್‌ಲೈನ್ಸ್, ಭಾರತಕ್ಕೆ ಹಾರಾಟ ನಡೆಸುವ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜಗತ್ತಿಗೆ ಅಪ್ಪಳಿಸುವ ಮುನ್ನ ಶೇ. 75 ರಷ್ಟು ವಿಮಾನಯಾನ ಸಿಂಗಾಪುರದಿಂದ ಭಾರತಕ್ಕೆ ಕಾರ್ಯ ನಿರ್ವಹಿಸುತ್ತಿತ್ತು. 


COMMERCIAL BREAK
SCROLL TO CONTINUE READING

ಸಿಂಗಾಪುರ್ ಏರ್‌ಲೈನ್ಸ್ (SIA) ಗ್ರೂಪ್ ಸಂಪೂರ್ಣ ಸೇವಾ ವಾಹಕ ಸಿಂಗಾಪುರ್ ಏರ್‌ಲೈನ್ಸ್ ಮತ್ತು ಕಡಿಮೆ-ವೆಚ್ಚದ ಏರ್‌ಲೈನ್ ಸ್ಕೂಟ್ ಅನ್ನು ಒಳಗೊಂಡಿದೆ. ಪ್ರಸ್ತುತ ಭಾರತದ 13 ಸ್ಥಳಗಳಿಗೆ ಸಿಂಗಾಪುರದಿಂದ ವಿಮಾನಗಳು ಆಗಮಿಸುತ್ತವೆ. 


ಇದನ್ನು ಓದಿ: ಮೊಹಲ್ಲಾ ಕೇಂದ್ರಗಳನ್ನು ಆರಂಭಿಸಿದ್ದಕ್ಕೆ ಸತ್ಯೇಂದ್ರ ಜೈನ್ ಗೆ ಪದ್ಮವಿಭೂಷಣ ನೀಡಬೇಕು


ಮೇ 31ರಂದು ಹಿರಿಯ ಸಿಂಗಾಪುರ್ ಏರ್‌ಲೈನ್ಸ್ ಕಾರ್ಯನಿರ್ವಾಹಕರು, ಮುಂಬರುವ ತಿಂಗಳುಗಳಲ್ಲಿ ಭಾರತಕ್ಕೆ ಹೆಚ್ಚಿನ ವಿಮಾನಗಳನ್ನು ಹಾರಾಟ ನಡೆಸುವ ನಿರೀಕ್ಷೆಯಿದೆ ಎಂದು ಹೇಳಿದರು.


"ಭಾರತೀಯ ಮಾರುಕಟ್ಟೆಯು ತುಂಬಾ ಬಲವಾಗಿ ಚೇತರಿಸಿಕೊಳ್ಳುತ್ತಿದೆ. ಮುಂದಿನ ಎರಡು ವೇಳಾಪಟ್ಟಿಗಳಲ್ಲಿ (ಅಕ್ಟೋಬರ್‌ನಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿ ಅಥವಾ ಮುಂದಿನ ವರ್ಷದಿಂದ) ನಾವು ಆಶಾದಾಯಕವಾಗಿ ವಿಮಾನ ಹಾರಾಟವನ್ನು ಹೆಚ್ಚಳ ಮಾಡಲಿದ್ದೇವೆ" ಎಂದು ಸಿಂಗಾಪುರ್ ಏರ್‌ಲೈನ್ಸ್‌ನ ವಾಣಿಜ್ಯ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಲೀ ಲಿಕ್ ಹ್ಸಿನ್, ಚಾಂಗಿ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ. 


ಪ್ರಸ್ತುತ ಭಾರತೀಯ ನಗರಗಳಿಂದ ಸಿಂಗಾಪುರಕ್ಕೆ 73 ವಿಮಾನಗಳು ಹಾರಾಟ ನಡೆಸುತ್ತಿವೆ. ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಅಹಮದಾಬಾದ್, ಕೊಚ್ಚಿ ಮತ್ತು ಹೈದರಾಬಾದ್ ನಗರಗಳಿಂದ ಸಿಂಗಾಪುರಕ್ಕೆ ಸಿಂಗಾಪುರ್‌ ಏರ್‌ಲೈನ್ಸ್‌ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಅಮೃತಸರ, ಕೊಯಂಬತ್ತೂರು, ಹೈದರಾಬಾದ್, ತಿರುಚಿರಾಪಳ್ಳಿ, ತಿರುವನಂತಪುರಂ ಮತ್ತು ವಿಶಾಖಪಟ್ಟಣಂ ಎಂಬ ಆರು ನಗರಗಳಿಂದ ಸ್ಕೂಟ್ 38 ವಿಮಾನಗಳನ್ನು ನಿರ್ವಹಿಸುತ್ತದೆ.


ಏರ್‌ಲೈನ್ ವಕ್ತಾರರ ಪ್ರಕಾರ, ಎಸ್‌ಐಎ ಗ್ರೂಪ್‌ನ ಕೊರೊನಾ ಪೂರ್ವದಲ್ಲಿ ಶೇ.75ರಷ್ಟು ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಆ ಬಳಿಕ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು, ಈ ವರ್ಷ ಮಾರ್ಚ್ 27 ರಿಂದ ಪುನಾರಂಭಗೊಂಡಿದೆ. ಅಲ್ಲಿಂದೀಚೆಗೆ, ವಿಮಾನ ಪ್ರಯಾಣಕ್ಕೆ ಬಲವಾದ ಬೇಡಿಕೆಯಿದೆ. 


ಇದನ್ನು ಓದಿ: ಸತ್ಯೇಂದ್ರಗೆ ಕ್ಲೀನ್ ಚಿಟ್ ನೀಡಿದ ಕೇಜ್ರಿವಾಲ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ


ಮುಂಬೈ ಮತ್ತು ದೆಹಲಿಯಿಂದ ಏರ್‌ಬಸ್ A380 ವಿಮಾನ ಸೇವೆಗಳನ್ನು ಪುನರಾರಂಭಿಸುವುದರ ಹೊರತಾಗಿ, ವಿಮಾನಯಾನ ಸಂಸ್ಥೆಯು ಜನವರಿಯಲ್ಲಿ ತನ್ನ ಹೊಸ ಬೋಯಿಂಗ್ 737-8 ಉತ್ಪನ್ನವನ್ನು ಹೈದರಾಬಾದ್, ಕೊಚ್ಚಿ ಮತ್ತು ಕೋಲ್ಕತ್ತಾದಿಂದ ಪ್ರಾರಂಭಿಸಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.