ಸರ್ ಅಹ್ಮದ್ ಸಲ್ಮಾನ್ ರಶ್ದಿ.  ಇವರು ಭಾರತ ಮೂಲದ  ಬ್ರಿಟಿಷ್-ಅಮೆರಿಕನ್ ಕಾದಂಬರಿಕಾರ ಮತ್ತು ಪ್ರಬಂಧಕಾರ. ಇವರು ತಮ್ಮ ಬರವಣಿಗೆಯಿಂದ ಅನೇಕ ಬದಲಾವಣೆಗಳನ್ನು ತಂದವರು. ಪೂರ್ವ ಮತ್ತು ಪಶ್ಚಿಮ ನಾಗರಿಕತೆಗಳ ನಡುವಿನ ಅನೇಕ ಸಂಪರ್ಕಗಳು ಮತ್ತು ವಲಸೆಗಳಿಗೆ ಸಂಬಂಧಿಸಿದ ಕಾದಂಬರಿ, ಪ್ರಬಂಧಗಳನ್ನು ಇವರು ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಅಹ್ಮದ್ ಸಲ್ಮಾನ್ ಅವರ ಎರಡನೇ ಕಾದಂಬರಿ ಮಿಡ್‌ನೈಟ್ಸ್ ಚಿಲ್ಡ್ರನ್ (1981)ಗೆ ಬೂಕರ್ ಪ್ರಶಸ್ತಿ ಬಂದಿದೆ. ಅಷ್ಟೇ ಅಲ್ಲದೆ, ಈ ಕಾದಂಬರಿಯನ್ನು "ಅತ್ಯುತ್ತಮ ಕಾದಂಬರಿ" ಎಂದು ಪರಿಗಣಿಸಲಾಗಿತ್ತು. ಇನ್ನು 1988ರಲ್ಲಿ ಬರೆದ ನಾಲ್ಕನೇ ಕಾದಂಬರಿ ದಿ ಸ್ಯಾಟಾನಿಕ್ ವರ್ಸಸ್ ಹಲವಾರು ದೇಶಗಳಲ್ಲಿ ವಿವಾದ ಉಲ್ಬಣವಾಗುವಂತೆ ಮಾಡಿತ್ತು. 


ಇದನ್ನು ಓದಿ: ಕಾಬೂಲ್‌ನಲ್ಲಿ ಡಬಲ್ ಸ್ಪೋಟ: ಆರು ಸಾವು, ಹಲವರಿಗೆ ಗಾಯ


1983ರಲ್ಲಿ, ಇಂಗ್ಲೆಂಡ್‌ನ ಹಿರಿಯ ಸಾಹಿತ್ಯ ಸಂಸ್ಥೆಯಾದ ರಾಯಲ್ ಸೊಸೈಟಿ ಆಫ್ ಲಿಟರೇಚರ್‌ನ ಸಹವರ್ತಿಯಾಗಿ ರಶ್ದಿ ಆಯ್ಕೆಯಾದರು. ಜನವರಿ 1999ರಲ್ಲಿ ಫ್ರಾನ್ಸ್‌ನ ʼಕಮಾಂಡೂರ್ ಡೆ ಎಲ್'ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ʼ ಆಗಿ ನೇಮಕಗೊಂಡರು. 2008 ರಲ್ಲಿ, ಟೈಮ್ಸ್ ಪತ್ರಿಕೆ ವರದಿ ಮಾಡಿದ ಟಾಪ್‌ 50 ಶ್ರೇಷ್ಠ ಬ್ರಿಟಿಷ್ ಬರಹಗಾರರ ಪಟ್ಟಿಯಲ್ಲಿ ರಶ್ದಿ ಅವರು 13ನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು 2012ರಲ್ಲಿ ʼಜೋಸೆಫ್ ಆಂಟನ್: ಎ ಮೆಮೊಯಿರ್, ದಿ ಸೈಟಾನಿಕ್ ವರ್ಸಸ್ʼ ಎಂಬ ಬರಹ ಬರೆದಿದ್ದರು.  


ಅಹ್ಮದ್ ಸಲ್ಮಾನ್ ರಶ್ದಿ ಜೂನ್ 19, 1947 ರಂದು ಕಾಶ್ಮೀರಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕೇಂಬ್ರಿಡ್ಜ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ ಅವರು, ಪ್ರಸಿದ್ಧ ಬರಹಗಾರರಾಗಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಇವರು ಉದ್ಯಮಿ ಅನಿಸ್ ಅಹ್ಮದ್ ರಶ್ದಿ ಮತ್ತು ಶಿಕ್ಷಕಿ ನೇಗಿನ್ ಭಟ್ ಅವರ ಮಗ. ಸರ್ ಅಹ್ಮದ್ ಸಲ್ಮಾನ್ ರಶ್ದಿ ಅವರ ಜನನ ಪ್ರಮಾಣ ಪತ್ರದಲ್ಲಿ ಕೆಲವೊಂದು ಲೋಪದೋಷಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಭಾರತೀಯ ನಾಗರಿಕ ಸೇವೆಗಳಿಂದ (ICS) ವಜಾಗೊಳಿಸಲಾಗಿತ್ತು.


ರಶ್ದಿಯವರು ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ. ದಕ್ಷಿಣ ಬಾಂಬೆಯ ಫೋರ್ಟ್‌ನಲ್ಲಿರುವ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ರಶ್ದಿ, ವಾರ್ವಿಕ್‌ಷೈರ್, ವೆಸ್ಟ್ ಮಿಡ್‌ಲ್ಯಾಂಡ್ಸ್, ನಂತರ ಕೇಂಬ್ರಿಡ್ಜ್‌ಶೈರ್‌ನಲ್ಲಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ಕೇಂಬ್ರಿಡ್ಜ್‌ನಿಂದ ಪದವಿ ಪಡೆದ ನಂತರ, ರಶ್ದಿ ಅವರು ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಲ್ಲಿ ಕೆಲವು ವರ್ಷಗಳ ಕಾಲ ವಾಸಿಸುತ್ತಿದ್ದರು.  ಆ ಬಳಿಕ ಮತ್ತೆ ಇಂಗ್ಲೆಂಡ್‌ಗೆ ಅವರ ಕುಟುಂಬ ವಲಸೆ ತೆರಳಿತ್ತು. 


ರಶ್ದಿಯವರು ವಾಣಿಜ್ಯಿಕವಾಗಿ ಯಶಸ್ವಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕಾದಂಬರಿಗಳ ಪಟ್ಟಿಯನ್ನು ಹೊಂದಿದ್ದಾರೆ. ಅವರ ಕೃತಿಗಳು ಬೂಕರ್ ಪ್ರಶಸ್ತಿಗೆ ಐದು ಬಾರಿ ಶಾರ್ಟ್‌ಲಿಸ್ಟ್ ಆಗಿವೆ ಎಂಬುದು ವಿಶೇಷ. 1981 ರಲ್ಲಿ ಮಿಡ್‌ನೈಟ್ಸ್ ಚಿಲ್ಡ್ರನ್, 1983ರಲ್ಲಿ ಶೇಮ್, 1988ರಲ್ಲಿ ದಿ ಸೈಟಾನಿಕ್ ವರ್ಸಸ್, 1995ರಲ್ಲಿ ದಿ ಮೂರ್ಸ್ ಲಾಸ್ಟ್ ಸಿಗ್ ಮತ್ತು 2019 ರಲ್ಲಿ ಕ್ವಿಚೋಟ್ಟೆ ಎಂಬ ಕೃತಿಗಳು ಶಾರ್ಟ್‌ಲಿಸ್ಟ್ ಆಗಿವೆ. 1981ರಲ್ಲಿ ಅವರಿಗೆ ಬೂಕರ್‌ ಪ್ರಶಸ್ತಿ ಬಂದಿದೆ. 2005ರಲ್ಲಿ ಬರೆದ ʼಶಾಲಿಮಾರ್ ದಿ ಕ್ಲೌನ್ʼ ಕಾದಂಬರಿ ಪ್ರತಿಷ್ಠಿತ ಹಚ್ ಕ್ರಾಸ್‌ವರ್ಡ್ ಬುಕ್‌ ಪ್ರಶಸ್ತಿಯನ್ನು ಪಡೆದುಕೊಂಡಿದೆ.  


ಇದನ್ನು ಓದಿ: ಉಕ್ರೇನ್‌ ಮೇಲೆ ರಷ್ಯಾ ನಿರಂತರ ಕ್ಷಿಪಣಿ ದಾಳಿ: ನಾಲ್ಕು ಶಸ್ತ್ರಕೋಠಿಗಳು ಧ್ವಂಸ


ಪ್ರಶಸ್ತಿ ಮತ್ತು ಗೌರವಗಳು: 
ಗೋಲ್ಡನ್ ಪೆನ್ ಪ್ರಶಸ್ತಿ
ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಸಾಹಿತ್ಯ ಪ್ರಶಸ್ತಿ (2014)
ಸಾಂಸ್ಕೃತಿಕ ಮಾನವತಾವಾದದಲ್ಲಿ ಅತ್ಯುತ್ತಮ ಜೀವಮಾನದ ಸಾಧನೆ (ಹಾರ್ವರ್ಡ್ ವಿಶ್ವವಿದ್ಯಾಲಯ)
ಪಿಇಎನ್‌ ಪಿಂಟರ್ ಪ್ರಶಸ್ತಿ (ಯುಕೆ)
ಸೇಂಟ್ ಲೂಯಿಸ್ ಯೂನಿವರ್ಸಿಟಿ ಲೈಬ್ರರಿ ಅಸೋಸಿಯೇಟ್ಸ್‌ನಿಂದ ಸೇಂಟ್ ಲೂಯಿಸ್ ಸಾಹಿತ್ಯ ಪ್ರಶಸ್ತಿ
ಸಾಹಿತ್ಯಕ್ಕಾಗಿ ರಾಜ್ಯ ಪ್ರಶಸ್ತಿ (ಆಸ್ಟ್ರಿಯಾ)
ಸ್ವಿಸ್ ಫ್ರೀಥಿಂಕರ್ಸ್ ಅವಾರ್ಡ್ 2019


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.