ಬೀಜಿಂಗ್ ವೀಸಾಗಳನ್ನು ನೀಡಲು ಪ್ರಾರಂಭಿಸಿದ ನಂತರ ಕೋವಿಡ್ ಪ್ರಯಾಣ ನಿಷೇಧದಿಂದಾಗಿ ಮನೆಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿನ ತಮ್ಮ ಕಾಲೇಜುಗಳಿಗೆ ಮರು-ಸೇರಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚೀನಾಗೆ ಹಿಂತಿರುಗಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಲು ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: NRI: “ಈ ಸ್ಪರ್ಧೆಯಲ್ಲಿ ಗೆದ್ದರೆ NRI ಯುವಕನನ್ನು ಮದುವೆಯಾಗುವ ಅವಕಾಶ” ಪೋಸ್ಟರ್ ವೈರಲ್-ಇಬ್ಬರ ಬಂಧನ


ಕೋವಿಡ್ ವೀಸಾ ನಿರ್ಬಂಧಗಳಿಂದಾಗಿ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಾಗಿ ವೈದ್ಯಕೀಯ ಶಿಕ್ಷಣವನ್ನು ಓದುತ್ತಿದ್ದವರು, ಮನೆಯಲ್ಲಿಯೇ ಉಳಿಯುವಂತಾಗಿದೆ ಎಂದು ವರದಿಯಾಗಿದೆ. ಇದೀಗ ಚೀನಾ ತಮ್ಮ ಚೀನೀ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ ಅನುಮತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮರು ಪ್ರಾರಂಭಿಸಲು ವೀಸಾಗಳನ್ನು ನೀಡಲು ಪ್ರಾರಂಭಿಸಿದೆ.


ಆದರೆ ಎರಡೂ ದೇಶಗಳು ಇನ್ನೂ ವಿಮಾನ ಸೇವೆಗಳನ್ನು ಪುನರಾರಂಭಿಸದ ಕಾರಣ ಅವರು ಚೀನಾಕ್ಕೆ ಪ್ರಯಾಣಿಸಲು ಕಷ್ಟಪಡುವಂತಾಗಿದೆ.


100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರನೇ ರಾಷ್ಟ್ರದ ವಿಮಾನ ಮಾರ್ಗಗಳ ಮೂಲಕ ಅಥವಾ ಹಾಂಗ್ ಕಾಂಗ್ ಮೂಲಕ ಪ್ರಯಾಣಿಸಿ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ರಾಯಭಾರ ಕಚೇರಿ ತನ್ನ ಇತ್ತೀಚಿನ ಸಲಹೆಯಲ್ಲಿ ಹಿಂದಿರುಗಿದ ವಿದ್ಯಾರ್ಥಿಗಳನ್ನು ಮಿಷನ್‌ನಲ್ಲಿ ನೋಂದಾಯಿಸಲು ಒತ್ತಾಯಿಸಿದೆ.


ಭಾರತೀಯ ರಾಯಭಾರ ಕಚೇರಿ ಅಥವಾ ಶಾಂಘೈ ಅಥವಾ ಗುವಾಂಗ್‌ಝೌನಲ್ಲಿರುವ ಭಾರತೀಯ ಕಾನ್ಸುಲೇಟ್‌ಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅದು ಹೇಳಿದೆ. ಇದು ಅಧಿಕಾರಿಗಳ ಹೆಸರುಗಳು ಮತ್ತು ಅವರ ಸಂಪರ್ಕ ವಿವರಗಳನ್ನು ಸಹ ಒದಗಿಸಿದೆ.


ಇದನ್ನೂ ಓದಿ: ತಪ್ಪಾಗಿ ಹಿಂದೂ ಪದ್ಧತಿಯಂತೆ ನಡೆಯಿತು ಮುಸಲ್ಮಾನನ ಅಂತ್ಯಕ್ರಿಯೆ! ಮುಂದೇನಾಯ್ತು ಗೊತ್ತಾ?


ಇನ್ನೂ ಚೀನಾಕ್ಕೆ ಹಿಂತಿರುಗದ ವಿದ್ಯಾರ್ಥಿಗಳು ಚೀನಾವನ್ನು ತಲುಪಿದ ನಂತರ ಮಾತ್ರ ಫಾರ್ಮ್ ಅನ್ನು ಭರ್ತಿ ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.