ಎಲ್ಲಿಗೆ ತಲುಪಿದೆ ಚಂದ್ರಯಾನ-3? ಚಂದ್ರನ ಮೇಲೆ ಕಾಲಿಡಲು ಇನ್ನೆಷ್ಟು ದಿನವಿದೆ? ಇಸ್ರೋ ನೀಡಿದೆ ಪಿನ್ ಟು ಪಿನ್ ಮಾಹಿತಿ
Chandrayaan-3: ಚಂದ್ರಯಾನ-3 ಜುಲೈ 25 ರ ಸಂಜೆ ಐದನೇ ಕಕ್ಷೆಯನ್ನು ಪ್ರವೇಶಿಸಿತು. ಈ ಬಳಿಕ ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ದಾಟಿ, ವೇಳಾಪಟ್ಟಿಯಂತೆ ಆಗಸ್ಟ್ 1 ರಂದು ಚಂದ್ರನ ಕಡೆಗೆ ಚಲಿಸುತ್ತದೆ.
Chandrayaan-3 News Latest Update: 14 ಜುಲೈ 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸದ್ಯ ತನ್ನ ಗಮ್ಯಸ್ಥಾನದತ್ತ ಸಾಗುತ್ತಿದೆ. ಭಾರತ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಜನರು ಮತ್ತು ಬಾಹ್ಯಾಕಾಶದ ಆಳವನ್ನು ಮೇಲ್ವಿಚಾರಣೆ ಮಾಡುವ ವಿಜ್ಞಾನಿಗಳು ಚಂದ್ರಯಾನ -3ರ ಬಗ್ಗೆ ಭಾರೀ ಕುತೂಹಲ ಹೊಂದಿದ್ದಾರೆ. ಸದ್ಯ ಇಸ್ರೋ ತನ್ನ ಕನಸಿನ ಕೂಸು ಯಾವ ಕಕ್ಷೆಗೆ ತಲುಪಿದೆ, ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದರ ಕ್ಷಣ ಕ್ಷಣದ ಮಾಹಿತಿಯನ್ನು ಕಲೆ ಹಾಕುತ್ತಿದೆ.
ಇದನ್ನೂ ಓದಿ: Viral Video: ಜನನಿಬಿಡ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಐಷಾರಾಮಿ BMW ಕಾರು..!
ಭೂಮಿಯ 5ನೇ ಕಕ್ಷೆ ಪ್ರವೇಶಿಸಿದ ಚಂದ್ರಯಾನ-3:
ಚಂದ್ರಯಾನ-3 ಪ್ರಸ್ತುತ ಭೂಮಿಯ ಐದನೇ ಕಕ್ಷೆಯಲ್ಲಿದ್ದು, ನಿರಂತರವಾಗಿ ಭೂಮಿಯನ್ನು ಸುತ್ತುತ್ತಿದೆ. ಇಸ್ರೋದಿಂದ ಪಡೆದ ಮಾಹಿತಿಯ ಪ್ರಕಾರ, ಚಂದ್ರಯಾನ-3 ಜುಲೈ 25 ರ ಸಂಜೆ ಐದನೇ ಕಕ್ಷೆಯನ್ನು ಪ್ರವೇಶಿಸಿತು. ಈ ಬಳಿಕ ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ದಾಟಿ, ವೇಳಾಪಟ್ಟಿಯಂತೆ ಆಗಸ್ಟ್ 1 ರಂದು ಚಂದ್ರನ ಕಡೆಗೆ ಚಲಿಸುತ್ತದೆ.
ಆಗಸ್ಟ್ 1ರ ವೇಳೆಗೆ ಚಂದ್ರನ ಕಕ್ಷೆಗೆ ಪ್ರವೇಶ:
ಇಸ್ರೋದಿಂದ ಪಡೆದ ಮಾಹಿತಿಯ ಪ್ರಕಾರ, ಚಂದ್ರಯಾನ-3 ವೇಳಾಪಟ್ಟಿಯ ಪ್ರಕಾರ ಚಾಲನೆಯಲ್ಲಿದೆ. ಅದನ್ನು ಜುಲೈ 31 ಮತ್ತು ಆಗಸ್ಟ್ 1 ರ ರಾತ್ರಿ ಚಂದ್ರನ ಕಡೆಗೆ ಕಳುಹಿಸಲಾಗುತ್ತದೆ. ಅಂದು ಚಂದ್ರಯಾನ-3 ಭೂಮಿಯ ಕಕ್ಷೆಯಿಂದ ನಿರ್ಗಮಿಸಿ ಚಂದ್ರನ ಕಕ್ಷೆ ಸೇರಲಿದೆ. ಇದರ ನಂತರ, ಚಂದ್ರಯಾನ-3 ಚಂದ್ರನ ಸುತ್ತ ಸುತ್ತಿ, ಆಗಸ್ಟ್ 23 ರಂದು ಚಂದ್ರನ ಮೇಲ್ಮೈಗೆ ಕಾಲಿಡಲಿದೆ.
ಇದನ್ನೂ ಓದಿ: Rs 99,999 Lost In One Click! ಒಂದೇ ಕ್ಲಿಕ್‌ನಿಂದ 99,999 ರೂಪಾಯಿ ಕಳೆದುಕೊಂಡ ವ್ಯಕ್ತಿ!
ಚಂದ್ರಯಾನ-3 ಅನ್ನು ಜುಲೈ 14, 2023 ರಂದು ಮಧ್ಯಾಹ್ನ 2.35 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸುಮಾರು 40 ದಿನಗಳ ಪ್ರಯಾಣದ ನಂತರ ಚಂದ್ರನನ್ನು ತಲುಪುತ್ತದೆ. ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ಪ್ರತಿಯೊಂದು ಚಟುವಟಿಕೆಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ