ಮಧ್ಯರಾತ್ರಿಯಲ್ಲಿ ಆಗೋ ಈ ಆಸೆಗಳಿಗೆ ಹೀಗೆ ಮಾಡಿದ್ರೆ ಸಖತ್ ಮಜಾ ಸಿಗುತ್ತೆ!
1. ತರಕಾರಿಗಳ ಸ್ನಾಕ್ಸ್:
ಕೆಲವರಿಗೆ ಫಿಟ್ನೆಸ್ ಹಾಳಾಗುತ್ತದೆ ಎಂಬ ಭಯದಿಂದ ಸ್ನಾಕ್ ಗಳನ್ನು ತಿನ್ನಲು ಹಿಂಜರಿಯುತ್ತಾರೆ. ಆದರೆ ತರಕಾರಿಗಳಿಂದ ತಯಾರಿಸಿದ ಸ್ನಾಕ್ ಗಳನ್ನು ಮನೆಯಲ್ಲಿಯೇ ನೀವು ತಯಾರಿಸಿ ತಿನ್ನಬಹುದು. ಮಾರುಕಟ್ಟೆಯಲ್ಲಿ ಅಂತಹ ಸ್ನಾಕ್ ಗಳು ಇವೆ. ಅದನ್ನು ತಂದಿಟ್ಟುಕೊಂಡು, ಮಧ್ಯರಾತ್ರಿ ಉಂಟಾಗೋ ಕಡುಬಯಕೆಗಳನ್ನು ತೀರಿಸಿಕೊಳ್ಳಬಹುದು.
2. ಓಟ್ ಮೀಲ್:
ಸಾಮಾನ್ಯವಾಗಿ ಓಟ್ ಮೀಲ್ ನ್ನು ಬೆಳಿಗ್ಗಿನ ಉಪಹಾರಕ್ಕೆ ಸೇವಿಸುವುದನ್ನು ಕಂಡಿರಬಹುದು. ಆದರೆ ರಾತ್ರಿಯಲ್ಲಿ ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಓಟ್ಸ್ ಒಂದು ಸಂಕೀರ್ಣ ಕಾರ್ಬೋಹೈಡ್ರೇಟ್ ಆಗಿದ್ದು, ಇತರ ವಿಷಯಗಳ ಜೊತೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳವನ್ನು ನಿಯಂತ್ರಿಸುತ್ತದೆ.
3. ಹುರಿದ ಕಡಲೆ
ಕಡಲೆಯು ಒಂದು ಜನಪ್ರಿಯ ಆರೋಗ್ಯಕರ ಆಹಾರದ ಆಯ್ಕೆಯಾಗಿದ್ದು ಅದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಏಕೆಂದರೆ ಅವುಗಳು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ.
4. ಮೊಟ್ಟೆಗಳು: ಸಣ್ಣದಾಗಿ ಉದ್ದುದ್ದನೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ನ್ನು ಮೆಣಸಿನ ಪುಡಿಯೊಂದಿಗೆ ಮಿಕ್ಸ್ ಮಾಡಿ, ಬೇಯಿಸಿದ ಮೊಟ್ಟೆಯೊಂದಿಗೆ ತಿನ್ನಬಹುದು. ಇದರಿಂದ ನಿಮಗೆ ಉತ್ತಮ ಪ್ರೊಟೀನ್ ಜೊತೆಗೆ ಮನಸ್ಸಿಗೆ ತೃಪ್ತಿಯೂ ಸಿಗುತ್ತದೆ.
5. ಫ್ರೂಟ್ ಮಿಲ್ಕ್ ಶೇಕ್:
ನಿಮಗೆ ಸ್ವೀಟ್ ಆಗಿ ಏನಾದರೂ ತಿನ್ನಬೇಕು ಎಂದು ಮನಸ್ಸಾಗಿದ್ದರೆ ತಾಜಾ ಹಣ್ಣುಗಳು ಮತ್ತು ಕುರುಕುಲಾದ ಚಿಯಾ ಬೀಜಗಳನ್ನು ಹೆಪ್ಪುಗಟ್ಟಿದ ಗ್ರೀಕ್-ಮೊಸರಿನೊಂದಿಗೆ ಮಿಕ್ಸ್ ಮಾಡಿ ಸೇವಿಸಿ.
6. ಬಾಳೆಹಣ್ಣು ಮತ್ತು ಪೀನಟ್ ಬಟರ್:
ಬಾಳೆಹಣ್ಣಿನಲ್ಲಿ ಇರುವ ಪೊಟ್ಯಾಸಿಯಮ್ ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅದನ್ನು ಪೀನಟ್ ಬಟರ್ ಜೊತೆಗೆ ಸಂಯೋಜಿಸಿ ತೃಪ್ತಿಕರವಾದ ಆಹಾರವಾಗಿ ಸೇವಿಸಬಹುದು.
7. ಮಿಕ್ಸ್ ಸೀಡ್:
ಇನ್ನು ಮಾರುಕಟ್ಟೆಯಲ್ಲಿ ಕೆಲ ಆರೋಗ್ಯಕರ ಒಣ ಬೀಜಗಳು ಲಭಿಸುತ್ತವೆ. ಅದರಲ್ಲಿ ಅಗಸೆ ಬೀಜಗಳು ಕೂಡ ಒಂದು. ಇದನ್ನೂ ಹಾಗೆಯೇ ತಿನ್ನಬಹುದು. ಇಲ್ಲವಾದಲ್ಲಿ ಬೇರೆ ಕೆಲ ಆಹಾರ ಜೊತೆ ಸೇವಿಸಿದರೆ ನಿಮಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.
8. ಸ್ಯಾಂಡ್ವಿಚ್
ಹ್ಯಾಮ್ ಅಥವಾ ಕಾಟೇಜ್ ಚೀಸ್‌ನೊಂದಿಗೆ ಲೇಯರ್ಡ್ ಇನ್-ಹೌಸ್ ಸಾಸ್‌ಗಳೊಂದಿಗೆ ಸ್ಯಾಂಡ್‌ವಿಚ್ ಗಳನ್ನು ತಯಾರಿಸಿ ಮನೆಯಲ್ಲಿ ಸಖತ್ ಟೇಸ್ಟಿ ಫುಡ್ ತಯಾರಿಸಿ.
9. ಪಾಪ್ ಕಾರ್ನ್
ನೀವು ಮಲಗುವ ಮುನ್ನ ಏನಾದರೂ ತಿನ್ನಬೇಕು ಎಂದು ಬಯಸಿದರೆ ಪಾಪ್ ಕಾರ್ನ್ ಸೇವಿಸಿ. ಇದು ಉತ್ತಮ ಆಯ್ಕೆ. ಆದರೆ ಹೆಚ್ಚು ತಿಂದರೆ ಹೊಟ್ಟೆ ಉಬ್ಬುವಂತಹ ಅನುಭವ ನೀಡಬಹುದು ಎಚ್ಚರಿಕೆ ವಹಿಸಿ.
10. ಒಣ ಹಣ್ಣುಗಳು
ತಡರಾತ್ರಿಯ ಕಡುಬಯಕೆಗಳಿಗೆ ಯಾವಾಗಲೂ ಸುರಕ್ಷಿತ ಆಹಾರ ಸೇವನೆ ಮಾಡಬೇಕೆಂದು ಪ್ರೇರೇಪಿಸುತ್ತದೆ. ಅವುಗಳ ಹೆಚ್ಚಿನ ಪ್ರೊಟೀನ್ ಅಂಶ ಮತ್ತು ಉತ್ತಮ ಕೊಬ್ಬಿನಂಶಗಳು ದೇಹಕ್ಕೆ ಆರೋಗ್ಯವನ್ನು ನೀಡುತ್ತದೆ.