ENG vs PAK World Record: ಟೆಸ್ಟ್ ಇತಿಹಾಸದಲ್ಲಿ 101 ವರ್ಷಗಳ ಹಳೆಯ ವಿಶ್ವದಾಖಲೆ ಉಡೀಸ್! ಈ ಸಾಧನೆ ಮಾಡಿದ್ದು ಇವರೇ
ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 74 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವಿನ ಜೊತೆಗೆ 101 ವರ್ಷಗಳ ಹಳೆಯ ವಿಶ್ವ ದಾಖಲೆ ಉಡೀಸ್ ಮಾಡಿದೆ.
ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಇದೀಗ ಇಂಗ್ಲೆಂಡ್-ಪಾಕಿಸ್ತಾನ ತಂಡಗಳ ಪಾಲಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 1768 ರನ್ ಗಳಿಸಿದೆ. ಇದು ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಈ ವಿಶ್ವ ದಾಖಲೆ ಮೊದಲು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಹೆಸರಿನಲ್ಲಿತ್ತು. 1921 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 1753 ರನ್ ಕಲೆಹಾಕಲಾಗಿತ್ತು.
ಇದೀಗ 101 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಪಾಕಿಸ್ತಾನವನ್ನು ಮಣಿಸಿ ಈ ವಿಶ್ವ ದಾಖಲೆಯನ್ನು ಬರೆದಿದೆ. ಈ ಟೆಸ್ಟ್‌ನಲ್ಲಿ ಒಟ್ಟು 7 ಶತಕ ಬಾರಿಸಲಾಗಿದ್ದು, 4 ಶತಕ ಇಂಗ್ಲೆಂಡ್ ತಂಡದ್ದಾದರೆ, 3 ಶತಕ ಪಾಕಿಸ್ತಾನದ್ದಾಗಿದೆ. ಇದು ಟೆಸ್ಟ್ ಇತಿಹಾಸದಲ್ಲೇ ಒಂದು ಪಂದ್ಯದಲ್ಲಿ ಮೂಡಿಬಂದ ಅತ್ಯಧಿಕ ಶತಕವಾಗಿದೆ. ಈ ಮೂಲಕ ಇದೂ ಕೂಡ ವಿಶ್ವ ದಾಖಲೆ ಪಟ್ಟಿ ಸೇರಿದೆ.
ಈ ಮೊದಲು 1921ರಲ್ಲಿ ಆಡಿಲೇಡ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ 5 ಶತಕಗಳು ಮೂಡಿಬಂದಿತ್ತು. ಇನ್ನೊಂದೆಡೆ 17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಆಡಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನವನ್ನು ತವರು ನೆಲದಲ್ಲಿ ಮಣಿಸಿ ಟೆಸ್ಟ್ ಪಂದ್ಯವನ್ನು ಗೆದ್ದಿದ್ದಾರೆ.