ಕೇವಲ 11 ರೂ.ಗೆ 10GB ಡೇಟಾ ಪ್ಲ್ಯಾನ್; ಜಿಯೋ ಬಳಕೆದಾರರಿಗೆ ಹೊಸ ಯೋಜನೆ
ಜಿಯೋದ ಈ 11 ರೂ. ರೀಚಾರ್ಜ್ ಬೇಸ್ ಪ್ಲಾನ್ ಇಲ್ಲದೆಯೂ ಕೆಲಸ ಮಾಡುತ್ತದೆ. 11 ರೂ. ರೀಚಾರ್ಜ್‌ನೊಂದಿಗೆ ಜಿಯೋ ಗ್ರಾಹಕರು 10GB 4G ಡೇಟಾವನ್ನು ಪಡೆಯುತ್ತಾರೆ. ಇದರ ಅವಧಿ ಕೇವಲ ಒಂದು ಗಂಟೆ ಇರುತ್ತದೆ. ಇದರಲ್ಲಿ ಇಂಟರ್ನೆಟ್ ಮಾತ್ರ ಲಭ್ಯವಿರುತ್ತದೆ ಮತ್ತು ಬೇರೆ ಯಾವುದೇ ಪ್ರಯೋಜನಗಳಿರುವುದಿಲ್ಲ ಎಂಬುದನ್ನು ಗಮನಿಸಬೇಕು.
ನಿಮ್ಮ ಇಂಟರ್ನೆಟ್ ಬಳಕೆಯು ದೀರ್ಘಾವಧಿಯವರೆಗೆ ಇರಬೇಕೆಂದು ಬಯಸಿದರೆ ಈ 11 ರೂ. ಯೋಜನೆಯು ಹೆಚ್ಚು ಉಪಯುಕ್ತವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಡೇಟಾ ರೀಚಾರ್ಜ್ ವೋಚರ್ಗಳನ್ನು ಒಂದು ದಿನ ಅಥವಾ 30 ದಿನಗಳ ವ್ಯಾಲಿಡಿಟಿ ಅಥವಾ ಬೇಸ್ ಪ್ಲಾನ್ ಅವಧಿಯವರೆಗೆ ವ್ಯಾಲಿಡಿಟಿಯೊಂದಿಗೆ ಖರೀದಿಸಬಹುದು.
49 ರೂ. ಡೇಟಾ ವೋಚರ್‌ನಲ್ಲಿ ನಿಮಗೆ ಬೇಕಾದಷ್ಟು 4G ಡೇಟಾವನ್ನು ನೀವು ಬಳಸಬಹುದು. ಆದರೆ ಇದರ ಮಾನ್ಯತೆಯ ಅವಧಿಯು ಒಂದು ದಿನ ಮಾತ್ರವಿರುತ್ತದೆ. ಬೂಸ್ಟರ್ ಪ್ಯಾಕ್ 19 ರೂ.ನಿಂದ ಆರಂಭವಾಗಿ 139 ರೂ.ವರೆಗೆ ವಿವಿಧ ಯೋಜನೆಗಳಿವೆ. ಇದು ಮೂಲ ಯೋಜನೆ ಅವಧಿಗೆ ಮಾನ್ಯವಾಗಿರುತ್ತದೆ.
ನೀವು 219 ರೂ. ವೋಚರ್ ಅನ್ನು ರೀಚಾರ್ಜ್ ಮಾಡಿದರೆ, ಇದು 30 ದಿನಗಳ ವ್ಯಾಲಿಡಿಟಿಯೊಂದಿಗೆ 30 GB ಡೇಟಾವನ್ನು ಒದಗಿಸುತ್ತದೆ.
ನಿಮಗೆ ಹೆಚ್ಚಿನ ಡೇಟಾ ಬೇಕಾದರೆ, ನೀವು 359 ರೂ. ರೀಚಾರ್ಜ್ ಪ್ಲ್ಯಾನ್ ಬಳಸಬಹುದು. ಇದು 50GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯ ತೆ 30 ದಿನಗಳು.