Health Tips: ಒಂದಲ್ಲ, ಎರಡಲ್ಲ…11 ಔಷಧೀಯ ಗುಣವುಳ್ಳ ಈ ಬಣ್ಣದ ಅಕ್ಕಿಯ ಗಂಜಿ ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತುಹಾಕುತ್ತೆ!

Sun, 23 Apr 2023-4:20 pm,

ಕಪ್ಪು ಅಕ್ಕಿಯ ಗಂಜಿ ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಪ್ರಾಚೀನ ಚೀನಾದಲ್ಲಿ, ಕಪ್ಪು ಅಕ್ಕಿಯನ್ನು ತುಂಬಾ ವಿಶಿಷ್ಟ ಮತ್ತು ಪೌಷ್ಟಿಕವೆಂದು ಪರಿಗಣಿಸಲಾಗಿದ್ದಲ್ಲದೆ, ಈ ಅಕ್ಕಿಯನ್ನು ರಾಜಮನೆತನದವರಿಗೆ ಹೊರತುಪಡಿಸಿ ಬೇರೆ ಯಾರೂ ಸಹ ಬಳಕೆ ಮಾಡುವಂತಿರಲಿಲ್ಲ.

ಇತರ ವಿಧದ ಅಕ್ಕಿಗಳಿಗೆ ಹೋಲಿಸಿದರೆ, ಕಪ್ಪು ಅಕ್ಕಿಯು ಹೆಚ್ಚಿನ ಪ್ರೋಟೀನ್‌ಗಳಲ್ಲಿ ಒಂದಾಗಿದೆ. ಹೀಗಾಗಿ ಇದರ ಗಂಜಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿರುವುದರ ಜೊತೆಗೆ, ಕಪ್ಪು ಅಕ್ಕಿಯು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. .

ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ ಎಂದು ಕರೆಯಲ್ಪಡುವ ಅಣುಗಳಿಂದ ಉಂಟಾಗುವ ಆಕ್ಸಿಡೇಟಿವ್ ಪ್ರೆಶರ್’ಗಳಿಂದ ನಿಮ್ಮ ಕೋಶಗಳನ್ನು ರಕ್ಷಣೆ ಮಾಡುತ್ತವೆ.

ಹೃದಯದ ಆರೋಗ್ಯದ ಮೇಲೆ ಕಪ್ಪು ಅಕ್ಕಿಯ ಪರಿಣಾಮಗಳ ಕುರಿತು ಸಂಶೋಧನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಪ್ಪು ಅಕ್ಕಿಯ ಗಂಜಿಯು ಹೃದ್ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ತೋರಿಸಿತ್ತು.

ಕಪ್ಪು ಅಕ್ಕಿಯಲ್ಲಿ ಕಂಡು ಬರುವ ಆಂಥೋಸಯಾನಿನ್‌’ಗಳು ಪ್ರಬಲವಾದ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಬುಡದಿಂದಲೇ ನಿಧಾನವಾಗಿ ಮಾಯವಾಗಿಸುತ್ತದೆ ಎಂದು ತಿಳಿದುಬಂದಿದೆ.

ಕಪ್ಪು ಅಕ್ಕಿಯಲ್ಲಿ ಕಂಡು ಬರುವ ಆಂಥೋಸಯಾನಿನ್‌’ಗಳು ಪ್ರಬಲವಾದ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದು ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಬುಡದಿಂದಲೇ ನಿಧಾನವಾಗಿ ಮಾಯವಾಗಿಸುತ್ತದೆ ಎಂದು ತಿಳಿದುಬಂದಿದೆ.

ಕಪ್ಪು ಅಕ್ಕಿಯು ಹೆಚ್ಚಿನ ಪ್ರಮಾಣದಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅನ್ನು ಹೊಂದಿರುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಕಪ್ಪು ಅಕ್ಕಿ ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ, ಇವೆರಡೂ ಹಸಿವನ್ನು ಕಡಿಮೆ ಮಾಡುವ ಮೂಲಕ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ, ಇದು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ, ಕಪ್ಪು ಅಕ್ಕಿ ಮತ್ತು ಇತರ ಆಂಥೋಸಯಾನಿನ್-ಒಳಗೊಂಡಿರುವ ಆಹಾರಗಳನ್ನು ತಿಂದರೆ ಟೈಪ್ 2 ಮಧುಮೇಹ ಹೊಂದಿರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

ಯಕೃತ್ತಿನಲ್ಲಿ ಶೇಖರಣೆಯಾಗಿರುವಂತಹ ಕೊಬ್ಬುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಕಪ್ಪು ಅಕ್ಕಿಯ ಗಂಜಿ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಮನೆಮದ್ದು ಮತ್ತು ಇತರ ಮಾಹಿತಿಗಳನ್ನು ಅನುಸರಿದೆ. ಅಳವಡಿಸಿಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link