ದ್ವಾದಶ ಜ್ಯೋತಿರ್ಲಿಂಗಗಳು - ಒಂದು ನೋಟ
ಸೋಮನಾಥ ಜ್ಯೋತಿರ್ಲಿಂಗ : 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಗುಜರಾತ್ ನ ಕಾಥೆವಾಡ ಜಿಲ್ಲೆಯ ವೆರಾವಲ್ ನಲ್ಲಿರುವ ಸೋಮನಾಥ ದೇವಸ್ಥಾನ. ಇದು ದೇಶದ ಅತ್ಯಂತ ಪೂಜ್ಯ ಯಾತ್ರಾ ಸ್ಥಳ.
ಮಲ್ಲಿಕಾರ್ಜುನ ಜ್ಯೋತಿರ್ಲಿಂಗ : ಮಲ್ಲಿಕಾರ್ಜುನ ದೇವಾಲಯವು ಆಂಧ್ರಪ್ರದೇಶದ ದಕ್ಷಿಣ ಭಾಗದಲ್ಲಿರುವ ಶ್ರೀ ಶೈಲ ಪರ್ವತದ ಮೇಲಿರುವ ಕೃಷ್ಣ ನದಿಯ ದಡದಲ್ಲಿದೆ. ಇದನ್ನು 'ದಕ್ಷಿಣ ಕೈಲಾಸ' ಎಂದೂ ಕರೆಯುತ್ತಾರೆ. ಈ ದೇವಾಲಯದ ದೇವತೆಗಳೆಂದರೆ ಮಲ್ಲಿಕಾರ್ಜುನ (ಶಿವ) ಮತ್ತು ಭ್ರಾಮರಂಬ (ದೇವಿ).
ಮಹಾಕಾಳೇಶ್ವರ ಜ್ಯೋತಿರ್ಲಿಂಗ : ಈ ಪ್ರಸಿದ್ಧ ದೇವಾಲಯವು ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿದೆ. ಜನರು ಇಲ್ಲಿ ತಮ್ಮ ಮರಣದ ಭಯವನ್ನು ತೊಡೆದುಹಾಕಲು ಪ್ರಾರ್ಥಿಸುತ್ತಾರೆ.
ಓಂಕಾರೇಶ್ವರ ಜ್ಯೋತಿರ್ಲಿಂಗ : ಓಂಕಾರೇಶ್ವರ ದೇವಸ್ಥಾನವು ಅತ್ಯಂತ ಪೂಜ್ಯ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಮಧ್ಯಪ್ರದೇಶದ ನರ್ಮದಾ ನದಿಯ ಶಿವಪುರಿ ದ್ವಿಪದಲ್ಲಿದೆ. ಓಂಕರೇಶ್ವರ್ ಎಂಬ ಪದ ಓಂ ಪದದ ಪ್ರಭು ಎಂಬ ಅರ್ಥವನ್ನು ನೀಡುತ್ತದೆ. ಸಿವಾನ್ ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಜೀವನದ ಕಷ್ಟಗಳ ನಿವಾರಣೆಗಾಗಿ ಪ್ರಾರ್ಥಿಸುತ್ತಾರೆ.
ವೈದ್ಯನಾಥ ಜ್ಯೋತಿರ್ಲಿಂಗ : ವೈದ್ಯನಾಥ ದೇವಾಲಯವು ವೈದ್ಯನಾಥ್ ಅಥವಾ ಬೈದ್ಯನಾಥ್ ಎಂದೂ ಕರೆಯಲ್ಪಡುತ್ತದೆ. ಇದು ಜಾರ್ಖಂಡ್ ನ ಸಂತಾಲ್ ಪರ್ಗಣಾಸ್ ಪ್ರದೇಶದಲ್ಲಿದೆ. ಇದು ಅತ್ಯಂತ ಪೂಜ್ಯ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಅತ್ಯಂತ ಭಕ್ತಿ ಹಾಗೂ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸುವರು ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳಿಂದ ಹೊರಬರುತ್ತಾರೆ ಎಂಬ ನಂಬಿಕೆಯಿದೆ.
ಭೀಮಾಶಂಕರ ಜ್ಯೋತಿರ್ಲಿಂಗ : ಭೀಮಾಶಂಕರ ದೇವಾಲಯವು ಮಹಾರಾಷ್ಟ್ರದ ಪುಣೆಯ ಸಹ್ಯಾದ್ರಿ ಪ್ರದೇಶದಲ್ಲಿದೆ. ಇದು ಭೀಮಾ ನದಿಯ ದಂಡೆ ಮೇಲಿದ್ದು, ಈ ನದಿಯ ಮೂಲವೆಂದು ಪರಿಗಣಿಸಲಾಗಿದೆ.
ರಾಮೇಶ್ವರ ಜ್ಯೋತಿರ್ಲಿಂಗ : ದಕ್ಷಿಣದ ರಾಮೇಶ್ವರ ದೇವಸ್ಥಾನವು ತಮಿಳುನಾಡಿನ ಸೇತು ದ್ವೀಪದಲ್ಲಿದೆ. ಈ ದೇವಾಲಯವು ತನ್ನ ವಾಸ್ತುಶಿಲ್ಪ, ಹೆಚ್ಚು ಪ್ರಮುಖವಾಗಿ ದೀರ್ಘ ಅಲಂಕೃತ ಪ್ರಾಂಗಣ, ಗೋಪುರಗಳು ಮತ್ತು 36 ತೀರ್ಥಂಗಲಿಂದ ಪ್ರಸಿದ್ಧಿ ಹೊಂದಿದೆ.
ನಾಗೇಶ್ವರ ಜ್ಯೋತಿರ್ಲಿಂಗ : ನಾಗೇಶ್ವರ ದೇವಸ್ಥಾನವು ನಾಗನಾಥ ದೇವಸ್ಥಾನ ಎಂದೂ ಕರೆಯಲ್ಪಡುತ್ತದೆ. ಇದು ಗುಜರಾತ್ನ ಸೌರಾಷ್ಟ್ರದ ಕರಾವಳಿ ತೀರದ ಗೋಮತಿ ದ್ವಾರಕ ಮತ್ತು ಬೀಟ್ ದ್ವಾರಕ ದ್ವೀಪಗಳ ನಡುವೆ ಇದೆ. ಈ ದೇವಾಲಯದಲ್ಲಿ ಪ್ರಾರ್ಥಿಸಿದರೆ ಎಲ್ಲ ವಿಷಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಕಾಶಿ ವಿಶ್ವನಾಥ ದೇವಾಲಯ : ಕಾಶಿ ವಿಶ್ವನಾಥ ದೇವಾಲಯವು ಪ್ರಪಂಚದ ಅತ್ಯಂತ ಪೂಜ್ಯ ಸ್ಥಳವಾದ ಕಾಶಿಯಲ್ಲಿದೆ. ಇದು ಪವಿತ್ರ ಗಂಗಾ ನದಿಯ ತಟದಲ್ಲಿರುವ ವಾರಣಾಸಿ ನಗರದಲ್ಲಿದೆ. ಪ್ರಪಂಚದ ಜನರು ಈ ದೇವಾಲಯಕ್ಕೆ ಬಂದು 'ಮೋಕ್ಷ'ಕ್ಕಾಗಿ ಪ್ರಾರ್ಥಿಸುತ್ತಾರೆ.
ತ್ರಿಯಂಬಕೇಶ್ವರ ಜ್ಯೋತಿರ್ಲಿಂಗ : ಮಹಾರಾಷ್ಟ್ರದ ನಾಸಿಕ್ನಿಂದ 30 ಕಿ.ಮೀ ದೂರದ, ಗೋದಾವರಿ ನದಿ ಹರಿಯುವ ಬ್ರಹ್ಮಗಿರಿ ಪರ್ವತದ ಬಳಿ ತ್ರಿಯಂಬಕೇಶ್ವರ ದೇವಾಲಯವಿದೆ. ಈ ದೇವಾಲಯವು 'ಗೌತಮಿ ಗಂಗಾ' ಎಂದು ಕರೆಯಲ್ಪಡುವ ಗೋದಾವರಿ ನದಿಯಾ ಮೂಲವೆಂದು ಪರಿಗಣಿಸಲ್ಪಟ್ಟಿದ್ದು, ದಕ್ಷಿಣ ಭಾರತದ ಅತ್ಯಂತ ಪವಿತ್ರ ನದಿಯಾಗಿದೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಜನರು ತಮ್ಮ ಎಲ್ಲಾ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ.
ಕೇದಾರನಾಥ ಜ್ಯೋತಿರ್ಲಿಂಗ : ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ದೇವಾಲಯವು ರುದ್ರ ಹಿಮಾಲಯ ವಲಯದಲ್ಲಿ, 12000 ಅಡಿ ಎತ್ತರದಲ್ಲಿರುವ ಕೇದಾರ್ ಪರ್ವತದ ಮೇಲಿದೆ. ಹರಿದ್ವಾರದಿಂದ ಸುಮಾರು 150 ಕಿ.ಮೀ. ದೂರದಲ್ಲಿದೆ. ಈ ದೇವಾಲಯವು ವರ್ಷದಲ್ಲಿ ಒಂದು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ತೆರೆಯುತ್ತದೆ.
ಘೃಷ್ಣೇಶ್ವರ ಜ್ಯೋತಿರ್ಲಿಂಗ : ಘೃಷ್ಣೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ದೌಲತಾಬಾದ್ ಇಂದ 20 ಕಿ.ಮೀ. ದೂರದಲ್ಲಿರುವ ವೆರುಲ್ ಎಂಬ ಗ್ರಾಮದಲ್ಲಿದೆ. ಈ ದೇವಾಲಯದ ಬಲಿ ಪ್ರಸಿದ್ಧ ಯಾತ್ರಾ ಸ್ಥಳವಾದ ಅಜಂತಾ ಮತ್ತು ಎಲ್ಲೋರಾ ಗುಹೆಗಳೂ ಇವೆ. ಈ ದೇವಾಲಯವು ಕುಸುಮೇಶ್ವರ, ಘುಶ್ಮೇಶ್ವರ, ಗ್ರುಷ್ಮೆಶ್ವರ ಮತ್ತು ಘೃಷ್ಣೇಶ್ವರ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.