WHO ವರದಿ :ವಿಶ್ವದ 20 ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳ ಹೆಸರು!
WHO ಬಿಡುಗಡೆ ಮಾಡಿದ 2016ರ 20ಮಾಲಿನ್ಯ ನಗರ ಪಟ್ಟಿಯಲ್ಲಿ ಭಾರತದ 14 ನಗರಗಳು ಸ್ಥಾನ ಪಡೆದಿದ್ದು, ಅದರಲ್ಲಿ ವಾರಣಾಸಿ ಮತ್ತು ದೆಹಲಿ ನಗರಗಳೂ ಒಳಗೊಂಡಿವೆ. ಈ ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮೊದಲ ಸ್ಥಾನದಲ್ಲಿ ದೆಹಲಿ, ಕೈರೋ, ಢಾಕಾ, ಮುಂಬೈ, ಬೀಜಿಂಗ್ ಕ್ರಮವಾಗಿ ಐದು ಸ್ಥಾನಗಳನ್ನು ಪಡೆದಿದೆ. (ಪಿಟಿಐ)
ವಿಶ್ವದ 10 ಜನರಲ್ಲಿ 9 ಮಂದಿ ಅತಿ ಹೆಚ್ಚು ಮಾಲಿನ್ಯಕಾರಕ ಗಾಳಿಯನ್ನು ಉಸಿರಾಡುತ್ತಾರೆ ಎಂದು WHO ಡೇಟಾ ಹೇಳಿದೆ.
ಭಾರತದ ಇತರ ನಗರಗಳಾದ ಕಾನ್ಪುರ್, ಫರಿದಾಬಾದ್, ಗಯಾ, ಪಾಟ್ನಾ, ಆಗ್ರಾ, ಮುಜಫರ್ ಪುರ್, ಶ್ರೀನಗರ, ಗುರ್ಗಾಂವ್, ಜೈಪುರ್, ಪಟಿಯಾಲಾ ಮತ್ತು ಜೋಧ್ಪುರ್ ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ಹೇಳಿದೆ.
2016 ವರದಿಯ ಪ್ರಕಾರ ಭಾರತದ ಒಟ್ಟು 13 ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 10ಕ್ಕೂ ಹೆಚ್ಚಿದೆ.
ಕೆಳ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ವಾಯುಮಾಲಿನ್ಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಏಷ್ಯಾದಲ್ಲಿನ ಭಾರತ, ಆಫ್ರಿಕಾ ರಾಷ್ಟ್ರಗಳು ವಾಯುಮಾಲಿನ್ಯದ ದುಷ್ಪಪರಿಣಾಮಗಳನ್ನು ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ.
ಜಾಗತಿಕವಾಗಿ ಮನೆಯ ಮಾಲಿನ್ಯದಿಂದ 3.8 ಮಿಲಿಯನ್ ಜನ ಸಾವನ್ನಪ್ಪಿದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.