ಸರ್ಕಾರಿ ನೌಕರರ ಖಾತೆ ಸೇರಲಿದೆ 18 ತಿಂಗಳ ಬಾಕಿ ಡಿಎ!ಇಂದು ಬಿಡುಗಡೆಯಾಗಲಿದೆ ಮೊದಲ ಕಂತು!ಕೈ ಸೇರುವ ಒಟ್ಟು ಮೊತ್ತ ಇಷ್ಟಿರಲಿದೆ !
ಕರೊನಾ ಅವಧಿಯಲ್ಲಿ 18 ತಿಂಗಳ ಡಿಎಯನ್ನು ಸಾಕಾರ ತಡೆ ಹಿಡಿದಿತ್ತು. ಇದೀಗ ಈ ಬಾಕಿ ಡಿಎಯನ್ನು ಸರ್ಕಾರ ನೌಕರರಿಗೆ ಪಾವತಿಸಾಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ಮೊತ್ತಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, COVID-19 ಸಾಂಕ್ರಾಮಿಕ ಸಮಯದಲ್ಲಿ ತಡೆಹಿಡಿಯಲಾದ 18 ತಿಂಗಳ ಡಿಎ ಮತ್ತು ಡಿಆರ್ ಬಾಕಿಯನ್ನು ಬಿಡುಗಡೆ ಮಾಡುವ ಕಾಲ ಹತ್ತಿರವಾಗಿದೆ. ಈ ಮೊತ್ತವನ್ನು ಅರ್ಹ ಉದ್ಯೋಗಿಗಳ ಖಾತೆಗೆ ಸರ್ಕಾರ ಮೂರು ಕಂತುಗಳಲ್ಲಿ ಜಮಾ ಮಾಡಲಿದೆ ಎಂದೂ ಮೂಲಗಳು ತಿಳಿಸಿವೆ.
ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಮೂರನೇ ಅವಧಿಯ ಸರ್ಕಾರದ ನಂತರ ಮಂಡಿಸಿದ ಮೊದಲ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗ ಅಂಥದ್ದೇನೂ ನಡೆದಿರಲಿಲ್ಲ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 18 ತಿಂಗಳ ಡಿಎ ಬಾಕಿ ನೀಡಬೇಕು ಎಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರ ವರ್ಷಾಂತ್ಯದಲ್ಲಿ ನೌಕರರಿಗೆ ಡಿಎ ಅರಿಯರ ಮೊತ್ತವನ್ನು ನೀಡಲಿದೆ ಎನ್ನಲಾಗಿದೆ.
ಇಲಾಖೆಯ ಮೂಲಗಳ ಪ್ರಕಾರ, ಕರೋನಾ ಅವಧಿಯಲ್ಲಿ ಅಮಾನತುಗೊಳಿಸಲಾದ ಡಿಎಯ ಮೊದಲ ಕಂತು ಇಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ, ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.