Home Loan: 30 ಲಕ್ಷ ಸಾಲದ ಮೇಲೆ ನೀಡಬೇಕೇ 25 ಲಕ್ಷ ಬಡ್ಡಿ, ನಷ್ಟವನ್ನು ಹೇಗೆ ತಪ್ಪಿಸಬಹುದು ತಿಳಿದುಕೊಳ್ಳಿ
ನೀವು 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ಗೃಹ ಸಾಲದ ಮೇಲಿನ ಬಡ್ಡಿದರ ಶೇಕಡಾ 6.80 ರ ಪ್ರಕಾರ, ಮಾಸಿಕ ಇಎಂಐ ರೂ 22900 ಆಗಿರುತ್ತದೆ. ಅಂದರೆ ನೀವು ಪಾವತಿಸುವ ಒಟ್ಟು ಬಡ್ಡಿ ರೂ 24,96,045 ಆಗಿರುತ್ತದೆ.
ನೀವು 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ICICI ಬ್ಯಾಂಕಿನ ಗೃಹ ಸಾಲದ ಬಡ್ಡಿ ದರ ಶೇ 7.50 ರ ಪ್ರಕಾರ, ಮಾಸಿಕ ಇಎಂಐ ರೂ 24,168 ಪಾವತಿಸಬೇಕಾಗುತ್ತದೆ. ಅಂದರೆ ಒಟ್ಟು ಬಡ್ಡಿ ರೂ 28,00,271 ಆಗಿರುತ್ತದೆ.
HDFC ಯಲ್ಲಿ 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡರೆ, ಬ್ಯಾಂಕಿನ ಗೃಹ ಸಾಲದ ಬಡ್ಡಿ ದರ ಶೇಕಡಾ 7.25 ರ ಪ್ರಕಾರ, ಮಾಸಿಕ ಇಎಂಐ ರೂ 23,711 ಸಂದಾಯ ಮಾಡಬೇಕಾಗುತ್ತದೆ. ಒಟ್ಟು ಬಡ್ಡಿ ರೂ 26,90,707 ಪಾವತಿಸಬೇಕು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 25 ವರ್ಷಗಳವರೆಗೆ 30 ಲಕ್ಷ ಗೃಹ ಸಾಲವನ್ನು ಪಡೆದರೆ ಬ್ಯಾಂಕಿನ ಗೃಹ ಸಾಲದ ಬಡ್ಡಿ ದರ ಶೇ .7 ರ ಪ್ರಕಾರ, ಮಾಸಿಕ 22,259 ಇಎಂಐ ಕಟ್ಟಬೇಕಾಗುತ್ತದೆ. ಹಾಗಾದಾಗ ಒಟ್ಟು ಬಡ್ಡಿ ಸೇರಿದರೆ ರೂ .25,82,152 ಆಗಿರುತ್ತದೆ.