ಒಂದೇ ಎಸೆತಕ್ಕೆ ಬರೋಬ್ಬರಿ 286 ರನ್...‌ ಇಡೀ ಕ್ರಿಕೆಟ್‌ ಇತಿಹಾಸದಲ್ಲೇ ಕಂಡು ಕೇಳರಿಯದ ದಾಖಲೆ ಇದು! ಈ ಚಿತ್ರವಿಚಿತ್ರ ದಾಖಲೆ ಬರೆದವರು ಯಾರು ಗೊತ್ತಾ?

Mon, 23 Sep 2024-1:59 pm,

ಕ್ರಿಕೆಟ್‌ ಇತಿಹಾಸದಲ್ಲಿ ಅದೆಷ್ಟೋ ವಿಶೇಷ ದಾಖಲೆಗಳಿವೆ. ಅವುಗಳ ಬಗ್ಗೆ ನಾವೆಲ್ಲರೂ ಕೇಳಿಯೂ ಇರುತ್ತೇವೆ, ಆದರೆ ನಾವಿಂದು ಹೇಳಹೊರಟಿರುವ ವಿಶೇಷ ದಾಖಲೆಯನ್ನು ಇಂದಿನ ಪೀಳಿಗೆಯ ಜನರು ನಂಬುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಏನೆಂಬುದನ್ನು ಮುಂದೆ ತಿಳಿಯೋಣ.

 

ಕ್ರಿಕೆಟ್‌ ಅಂದ್ರೆ ಸಿಕ್ಸರ್‌-ಬೌಂಡರಿಗಳ ಕಾರುಬಾರು ಇದ್ದೇ ಇರುತ್ತದೆ. ಅದರಲ್ಲೂ ಟಿ20, ಏಕದಿನ ಅಂದ್ರೆ ಸಾಕು ಅಬ್ಬರವೋ ಅಬ್ಬರ... ಆದರೆ ಕ್ರಿಕೆಟ್‌ ತಂಡವೊಂದು ಒಂದೇ ಒಂದು ಸಿಕ್ಸರ್‌ ಆಗಲಿ ಬೌಂಡರಿ ಆಗಲಿ ಬಾರಿಸದೆ ದ್ವಿಶತಕ ಕಲೆಹಾಕಿರುವುದು ನಿಮಗೆ ಗೊತ್ತಾ? ಇದು ಅಚ್ಚರಿ ಎನಿಸಿದ್ರೂ ನಿಜ. ಅಂದಹಾಗೆ ಈ ದಾಖಲೆ ಇಂದಿನದಲ್ಲ, ಬದಲಾಗಿ ಸುಮಾರು 130 ವರ್ಷಗಳಷ್ಟು ಹಳೆಯದ್ದು.

 

1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತ್ತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಬೃಹತ್‌ ರನ್‌ ಕಲೆ ಹಾಕಿದ್ದರು. ಈ ಅಸಂಭವ ದಾಖಲೆ ಬಗ್ಗೆ, ಜನವರಿ 1894 ರಲ್ಲಿ ಲಂಡನ್‌ʼನಿಂದ ಪ್ರಕಟವಾದ 'ಪಾಲ್-ಮಾಲ್ ಗೆಜೆಟ್' ನಲ್ಲಿ ಉಲ್ಲೇಖಿಸಲಾಗಿದೆ ಎಂದು ESPN Cricinfo ಹೇಳಿದೆ.

 

1894ರ ಈ ಪಂದ್ಯದ ದೃಶ್ಯಗಳು ಯಾವುದೇ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಅನುಸಾರ, 1894 ರ ಜನವರಿ 15 ರಂದು ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಮತ್ತು 'ಸ್ಕ್ರ್ಯಾಚ್-ಇಲೆವೆನ್' ಹೆಸರಿನ ಎರಡು ತಂಡಗಳ ನಡುವೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ವಿಶೇಷ ಸಾಧನೆ ಕಂಡುಬಂದಿತ್ತು.

 

ವಿಕ್ಟೋರಿಯಾ ತಂಡದ ಬ್ಯಾಟ್ಸ್‌ಮನ್‌ʼಗಳು ಕ್ರೀಸ್‌ʼನಲ್ಲಿದ್ದರು. ಒಬ್ಬ ಬ್ಯಾಟ್ಸ್‌ಮನ್ ಚೆಂಡನ್ನು ಮರದ ಮೇಲೆ ಸಿಲುಕಿಕೊಳ್ಳುವ ರೀತಿಯಲ್ಲಿ ಬಾರಿಸಿದ್ದನು. ಆ ಬಾಲ್‌ ತೆಗೆಯಲೆಂದು ಎದುರಾಳಿ ತಂಡ ಪ್ರಯತ್ನಿಸುತ್ತಿದ್ದರೆ, ಈ ಬ್ಯಾಟ್ಸ್‌ʼಮನ್‌ʼಗಳು ಕ್ರೀಸ್‌ʼನಲ್ಲಿ ರನ್ ಗಳಿಸಲು ಓಡಿದ್ದಾರೆ. ಮರದಲ್ಲಿ ಸಿಕ್ಕಿಬಿದ್ದ ಚೆಂಡನ್ನು ತೆಗೆಯುವುದು ಬಹುತೇಕ ಅಸಾಧ್ಯವಾಗಿತ್ತು. ಇದರಿಂದಾಗಿ ಬೌಲಿಂಗ್ ತಂಡವು ಚೆಂಡನ್ನು ಕಳೆದುಕೊಂಡಿದೆ ಎಂದು ಘೋಷಿಸಲು ಅಂಪೈರ್‌ʼಗಳಿಗೆ ಮನವಿ ಮಾಡಿತು. ಹೀಗೆ ಘೋಷಣೆ ಮಾಡಿದರೆ ಬ್ಯಾಟ್ಸ್‌ಮನ್‌ʼಗಳು ರನ್ ಗಳಿಸುವುದನ್ನು ತಡೆಯಬಹುದು ಎಂಬುದು ಅದರ ಉದ್ದೇಶವಾಗಿತ್ತು.

 

ಆದರೆ ಅಂಪೈರ್‌ʼಗಳು ಆ ಮನವಿಯನ್ನು ತಿರಸ್ಕರಿಸಿದರು. ಫೀಲ್ಡಿಂಗ್ ತಂಡವು ಮರವನ್ನು ಕತ್ತರಿಸಲು ನಿರ್ಧರಿಸಿತು. ಆದರೆ ಕೊಡಲಿ ಸಿಗದೆ ಆ ಪ್ರಯತ್ನವೂ ವಿಫಲವಾಯಿತು. ಕೊನೆಗೆ ಹಲವಾರು ಗಂಟೆಗಳ ನಂತರ, ರೈಫಲ್‌ʼನಲ್ಲಿ ಗುರಿಯಿಟ್ಟು ಚೆಂಡನ್ನು ಮರದಿಂದ ಬೀಳಿಸಲಾಯಿತು. ಇಷ್ಟು ಹೊತ್ತಿಗಾಗಲೇ  ಬ್ಯಾಟ್ಸ್‌ಮನ್‌ʼಗಳು 286 ರನ್ ಗಳಿಸಿದ್ದರು. ಅಷ್ಟೇ ಅಲ್ಲದೆ ಇಷ್ಟೊಂದು ರನ್‌ ಕಲೆಹಾಕಲಿ ಆ ಬ್ಯಾಟ್ಸ್‌ಮನ್‌ʼಗಳು 6 ಕಿಲೋಮೀಟರ್‌ʼಗಳಷ್ಟು ಪಿಚ್‌ʼನಲ್ಲಿ ಓಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link