ಮೂರು ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಗಳಿಗೆ ತಿಂಗಳು ಪೂರ್ತಿ ಸಿಗಲಿದೆ ಶುಭ ಫಲ

Mon, 02 Aug 2021-4:16 pm,

ಮೇಷ ರಾಶಿಯವರಿಗೆ ಆಗಸ್ಟ್ ತಿಂಗಳು ಶುಭಕರವಾಗಿರುತ್ತದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪಾಲುದಾರಿಕೆಯಲ್ಲಿ ಈ ರಾಶಿಯವರು, ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಸ್ಥಗಿತಗೊಂಡಿರುವ ಯಾವುದೇ ಪ್ರಮುಖ ಕೆಲಸವನ್ನು ಈ ತಿಂಗಳಲ್ಲಿ ಪೂರ್ಣಗೊಳಿಸಬಹುದು.

ವೃಷಭ ರಾಶಿಯ ಜನರು, ಈ ತಿಂಗಳು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಕಟ ಸಂಬಂಧಗಳು ಸಹಾಯ ಮಾಡುತ್ತವೆ.  

 ಮಿಥುನ ರಾಶಿಯವರಿಗೆ ಈ ತಿಂಗಳು ಅದ್ಭುತವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಕಂಡು ಬರುತ್ತದೆ. ಆರ್ಥಿಕ ಲಾಭ ಇರುತ್ತದೆ. ಭಡ್ತಿ ಪಡೆಯಬಹುದು. ಗೌರವ ಸಿಗುತ್ತದೆ.

ಸಿಂಹ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ಜೊತೆಗೆ ಅವರು ತಮ್ಮ ಸಂಗಾತಿಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನೂ ಪಡೆಯುತ್ತಾರೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.   

 ತುಲಾ ರಾಶಿಯವರಿಗೆ ಧನ ಲಾಭವಾಗುವ ಯೋಗ ಪ್ರಬಲವಾಗಿದೆ. ವೃತ್ತಿಜೀವನದಲ್ಲಿಯೂ, ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ.  ತಂದೆಗೆ ಇದು ಒಳ್ಳೆಯ ಸಮಯವಾಗಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link