ಮಧುಮೇಹ ನಿಮ್ಮ ದೇಹವನ್ನು ಆವರಿಸುವ ಮುನ್ನ ಕಾಣಿಸಿಕೊಳ್ಳುವ 3 ಲಕ್ಷಣಗಳಿವು..!
Early symptoms of Diabetes: ಮಧುಮೇಹ ಎಂಬುದು ಒಂದು ಸೈಲೆಂಟ್ ಕಿಲ್ಲರ್ ಎನ್ನುವುದು ಗೊತ್ತಿರುವ ವಿಚಾರ. ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಶುಗರ್ ಅನ್ನು ನೀವು ಕಾಂಟ್ರೋಲ್‌ನಲ್ಲಿ ಇಡದೆ ಹೋದರೆ, ಇದು ನಿಮ್ಮ ದೇಹದ ಇತರ ಅಂಗಗಳನ್ನು ದುರ್ಬಲ ಗೊಲಿಸುತ್ತದೆ, ಇದರಿಂದ ಕಿಡ್ನಿ ಹಾಗೂ ಹ್ರದಯ ಸಂಬಂಧಿ ಕಾಯಿಲೆಗಳು ಕೂಡ ನಿಮ್ಮ ದೇಹವನ್ನು ಆವರಿಸಿಕೊಳ್ಳಬಹುದು.
ಹೆಚ್ಚಿದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ, ಇದು ಬಾಯಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನಿರ್ದಿಷ್ಟವಾಗಿ ಮೂರು ವಿಧದ ಬಾಯಿಯ ಸಮಸ್ಯೆಗಳು ಮಧುಮೇಹದ ಮುಖ್ಯ ಅಲಕ್ಷಣಗಳಾಗಿವೆ. ಅಷ್ಟಕ್ಕೂ ಆ ಲಕ್ಷಣಗಳು ಯಾವುದು ತಿಳಿಯಲು ಮುಂದೆ ಓದಿ...
ಒಣ ಬಾಯಿ ನಿಮ್ಮ ಬಾಯಿ ಪದೇ ಪದೇ ತೇವಾಂಶ ಕಳೆದುಕೊಂಡು ಒಣಗಿದಂತೆ ಬಾಸವಾಗುತ್ತಿದೆಯೇ? ಎಷ್ಟೇ ನೀರು ಕುಡಿದರೂ ಪದೇ ಪದೇ ದಾಹವಾಗುತ್ತಿದೆಯೇ? ಹಾಗಾದರೆ ಇದು ಕೇವಲ ಬಾಯಾರಿಕೆಯಲ್ಲ. ಒಣ ಬಾಯಿ ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಲಾಲಾರಸದ ಉತ್ಪಾದನೆಯು ಕಡಿಮೆಯಾಗುತ್ತದೆ. ಇದು ಪದೇ ಪದೇ ಬಾಯಿ ಒನಗುವುದಕ್ಕೆ ಕಾರಣವಾಗುತ್ತದೆ.
ವಸಡು ಕಾಯಿಲೆ ವಸಡು ಸಮಸ್ಯೆಗಳು ಸಹ ಮಧುಮೇಹದ ಸೂಚನೆಯಾಗಿರಬಹುದು. ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಒಸಡುಗಳು ಪೋಷಕಾಂಶಗಳನ್ನು ಸರಿಯಾಗಿ ಸ್ವೀಕರಿಸುವಲ್ಲಿ ವಿಫಲವಾಗುತ್ತದೆ. ಒಸಡುಗಳು ಕೆಂಪಾಗುವುದು, ಊದಿಕೊಳ್ಳುವುದು, ಹಲ್ಲುಜ್ಜಿದಾಗ ರಕ್ತಸ್ರಾವ ಇವೆಲ್ಲವೂ ವಸಡು ಕಾಯಿಲೆಯ ಲಕ್ಷಣಗಳಾಗಿವೆ.
ದಂತಕ್ಷಯ ವಸಡು ರೋಗವನ್ನು ನಿರ್ಲಕ್ಷಿಸಿದರೆ ಹಲ್ಲು ಉದುರಬಹುದು. ಹಲ್ಲಿನ ಮೇಲೆ ಸಂಗ್ರಹವಾದ ಪ್ಲೇಕ್, ಲಾಲಾರಸದ ಹರಿವನ್ನು ಕಡಿಮೆ ಮಾಡುತ್ತದೆ. ಇದು ಕೂಡ ಮಧುಮೇಹದ ಲಕ್ಷಣಗಳಲ್ಲಿ ಒಂದಾಗಿರಬಹುದು.
ಹಲ್ಲಿನ ಸಮಸ್ಯೆಗಳ ಹೊರತಾಗಿ, ಇತರ ಕೆಲವು ಬಾಯಿಯ ಸಮಸ್ಯೆಗಳು ಸಹ ಮಧುಮೇಹದ ಸೂಚನೆಗಳಾಗಿರಬಹುದು. ಶಿಲೀಂಧ್ರಗಳ ಸೋಂಕು ಆಗಿದ್ದು ಅದು ಬಾಯಿಯಲ್ಲಿ ಬಿಳಿ ಚುಕ್ಕೆಗಳ ರಚನೆಗೆ ಕಾರಣವಾಗುತ್ತದೆ. ಬಾಯಿಯಲ್ಲಿ ಬಿಳಿ ಚುಕ್ಕೆಗಳು, ನೋವು, ಹುಣ್ಣುಗಳು ತಡವಾಗಿ ಗುಣವಾಗುವುದು ಮತ್ತು ರುಚಿಯಲ್ಲಿನ ಬದಲಾವಣೆಗಳನ್ನು ಒಳಗೊಂಡಿರುತ್ತದೆ.