31st July Deadline : ಜುಲೈ 31 ರೊಳಗೆ ತಪ್ಪದೆ ಮಾಡಿ ಈ ಕೆಲಸ, ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ!
ಪಿಎಂ ಕಿಸಾನ್ ಯೋಜನೆಗಾಗಿ ಇ-ಕೆವೈಸಿ ಮಾಡುವುದು, ಸಬ್ಸಿಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವುದು, ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು, ಅಂತ್ಯೋದಯ ಪಡಿತರ ಚೀಟಿದಾರರನ್ನು ಗ್ಯಾಸ್ ಸಂಪರ್ಕ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ತಪಪಡೆ ಮಾಡಬೇಕಾದ ಕೆಲಸಗಳು. ಆಗಸ್ಟ್ 1 ರಿಂದ, ಇವುಗಳ ನಿಯಮಗಳು ಬದಲಾಗುತ್ತಿವೆ.
ಸರ್ಕಾರ ಬಿಡುಗಡೆ ಮಾಡಿರುವ ಡೆಡ್ ಲೈನ್ ಪ್ರಕಾರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಈ ದಿನದೊಳಗೆ ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ, ನಂತರ ನೀವು ದಂಡದ ಜೊತೆಗೆ ಅದನ್ನು ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸರ್ಕಾರ ಇನ್ನೂ ಯಾವುದೇ ವಿಸ್ತರಣೆಯನ್ನು ನೀಡಿಲ್ಲ. ಗಡುವಿನ ನಂತರ ಐಟಿಆರ್ ಸಲ್ಲಿಸುವ ಜನರು 5,000 ರೂಪಾಯಿಗಳನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ನೀವು ಸಿಲಿಂಡರ್ ಅನ್ನು ಅಗ್ಗವಾಗಿ ಪಡೆಯಲು ಬಯಸಿದರೆ, ಅದನ್ನು ಮೊದಲೇ ಬುಕ್ ಮಾಡಿ. ವಾಸ್ತವವಾಗಿ, ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾ ಗುತ್ತದೆ. ಆಗಸ್ಟ್ 1 ರಂದು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ದರಗಳನ್ನು ನಿರ್ಧರಿಸಲಿವೆ. ಈ ಬಾರಿ ಕಂಪನಿಗಳು ದರ ಹೆಚ್ಚಿಸಬಹುದು.
ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಯಾವುದೇ ಸಂದರ್ಭದಲ್ಲಿ ಜುಲೈ 31 ರ ಮೊದಲು KYC ಮಾಡಿ. ಇದರ ಕೊನೆಯ ದಿನಾಂಕ ಕೂಡ ಜುಲೈ 31 ಆಗಿದೆ. ಇ-ಕೆವೈಸಿ ಮಾಡಿಸಿಕೊಳ್ಳಲು ಸಾಧ್ಯವಾಗದ ರೈತರು 12ನೇ ಕಂತಿನಿಂದ ವಂಚಿತರಾಗಬೇಕಾಗುತ್ತದೆ.
ನೀವು ಸಬ್ಸಿಡಿಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸಿದರೆ ಗೋವಾ ಸರ್ಕಾರವು ನಿಮಗೆ ಸಬ್ಸಿಡಿಯನ್ನು ನೀಡುತ್ತಿದೆ. ವಾಸ್ತವವಾಗಿ, ಗೋವಾ ಸರ್ಕಾರವು ಜುಲೈ 31 ರವರೆಗೆ ಖರೀದಿಸುವ ಎಲೆಕ್ಟ್ರಿಕ್ ವಾಹನಕ್ಕೆ ಮಾತ್ರ ಸಬ್ಸಿಡಿ ನೀಡುತ್ತದೆ. ದ್ವಿಚಕ್ರ ವಾಹನದಲ್ಲಿ 30,000, ತ್ರಿಚಕ್ರ ವಾಹನದಲ್ಲಿ 60,000 ಮತ್ತು ನಾಲ್ಕು ಚಕ್ರದ ವಾಹನದಲ್ಲಿ 3 ಲಕ್ಷದವರೆಗೆ. ಇದಕ್ಕಾಗಿ ಜುಲೈ 31ರೊಳಗೆ ಎಲೆಕ್ಟ್ರಿಕ್ ವಾಹನ ಖರೀದಿಸಿ ಸಬ್ಸಿಡಿಗೆ ಅರ್ಜಿ ಸಲ್ಲಿಸಬೇಕು.