18 ತಿಂಗಳು ಕಾದರೂ ಸಿಗದ ಅವಕಾಶ! 33ರ ಹರೆಯದ ಟೀಂ ಇಂಡಿಯಾದ ಸ್ಟಾರ್ ಸ್ವಿಂಗ್ ಬೌಲರ್ ನಿವೃತ್ತಿ ಘೋಷಣೆ!

Wed, 04 Oct 2023-5:39 pm,

ಭಾರತ ಈ ಬಾರಿ ವಿಶ್ವಕಪ್ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 5 ರಂದು ಅಹಮದಾಬಾದ್‌’ನಲ್ಲಿ ಟೂರ್ನಿ ಆರಂಭವಾಗಲಿದೆ. ಭಾರತದ ಆಯ್ಕೆ ಸಮಿತಿಯು ಎರಡು ಬಾರಿ ತಂಡವನ್ನು ಪ್ರಕಟಿಸಿತ್ತು. ಮೊದಲ ಪಟ್ಟಿಯಲ್ಲಿ ಅಕ್ಸರ್ ಪಟೇಲ್ ಹೆಸರಿತ್ತಾದರೂ, ಆ ಬಳಿಕ ಪ್ರಕಟಿಸಿ ಪಟ್ಟಿಯಲ್ಲಿ ಅವರ ಬದಲಿಗೆ ಆರ್ ಅಶ್ವಿನ್ ಅವರಿಗೆ ಸ್ಥಾನ ನೀಡಲಾಯಿತು.

ಇನ್ನು ಈ ಲೇಖನದಲ್ಲಿ, ವಿಶ್ವಕಪ್ ತಂಡದಿಂದ ಹೊರಗುಳಿದ ಮತ್ತು ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸುವ ಯೋಚನೆಯಲ್ಲಿರುವ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಟೀಂ ಇಂಡಿಯಾದ ಪ್ರಮುಖ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಶಿಖರ್ ಧವನ್ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ODI ಪಂದ್ಯವನ್ನು ಆಡಿದ್ದರು. ಅಂದಿನಿಂದ ಇಂದಿನವರೆಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅತೀ ಶೀಘ್ರವೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.

ಧವನ್ ಅವರಂತೆಯೇ, ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ODI ವಿಶ್ವಕಪ್ 2023ರ ಆಯ್ಕೆ ಸಮಿತಿ ನಿರ್ಲಕ್ಷಿಸಿದೆ. ಭುವಿ ತಮ್ಮ ಕೊನೆಯ ODI ಪಂದ್ಯವನ್ನು ಜನವರಿ 2022 ರಲ್ಲಿ ಆಡಿದ್ದರು. ಆದರೆ ಸುಮಾರು 18 ತಿಂಗಳ ಕಾಲ ಅಂದರೆ ಇದುವರೆಗೆ ಈ ಸ್ವರೂಪದಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಟೀಂ ಇಂಡಿಯಾದ ಸ್ಟಾರ್ ಸ್ವಿಂಗ್ ಬೌಲರ್ ಭುವಿ, ಏಷ್ಯಾಕಪ್ ಬಳಿಕ ತಮ್ಮ ನಿವೃತ್ತಿ ಘೋಷಣೆ ಮಾಡುವ ಯೋಜನೆಯಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಎರಡನೇ ಬಾರಿ ಪ್ರಕಟವಾದ ಪರಿಷ್ಕೃತ ಪಟ್ಟಿಯಲ್ಲಿ, ಅಕ್ಸರ್ ಪಟೇಲ್ ಬದಲಿಗೆ ಅನುಭವಿ ಆಫ್-ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ಇತ್ತೀಚೆಗೆ ಅವರು ನೀಡಿದ ಹೇಳಿಕೆ ಪ್ರಕಾರ, ಇದು ಅವರ ಕೊನೆಯ ವಿಶ್ವಕಪ್ ಆಗಿರಬಹುದು. ಇನ್ನು 2022 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಶ್ವಿನ್ ತಮ್ಮ ಕೊನೆಯ ODI ಆಡಿದ್ದರು. ಆ ಬಳಿಕ ಇದೀಗ ಮತ್ತೆ ತಂಡಕ್ಕೆ ಆಗಮಿಸಿದ್ದಾರೆ.

ಅಜಿಂಕ್ಯ ರಹಾನೆ ಕೂಡ ವಿಶ್ವಕಪ್ ತಂಡದಿಂದ ನಿರ್ಲಕ್ಷಿಸಲ್ಪಟ್ಟ ಅನುಭವಿ ಆಟಗಾರ ಎನ್ನಬಹುದು. ಇತರ ಕಿರಿಯ ಬ್ಯಾಟ್ಸ್‌ಮನ್‌’ಗಳು ಉತ್ತಮ ಪ್ರದರ್ಶನ ನೀಡಿದ್ದರಿಂದ ಈ ಆಟಗಾರ ತಂಡದಿಂದ ಹೊರಗುಳಿಯುವ ಪರಿಸ್ಥಿತಿ ಬಂದಿದೆ. ಇನ್ನು ಇವರು, 2019 ರ ODI ವಿಶ್ವಕಪ್‌’ನ ಭಾಗವಾಗಿರಲಿಲ್ಲ. ಅದಕ್ಕೂ ಮುನ್ನ ಫೆಬ್ರವರಿ 2018 ರಲ್ಲಿ ತಮ್ಮ ಕೊನೆಯ ODI ಆಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link