ಕರೋನಾ ವಿರುದ್ಧ ಅಭೇದ್ಯ ರಕ್ಷಾಕವಚ ಒದಗಿಸಲಿವೆ ಈ 4 ಸೂಪರ್ ಹಣ್ಣುಗಳು
ವಿಟಮಿನ್ ಸಿಯ ಅತ್ಯಂತ ಸಮೃದ್ಧ ಮೂಲ ನೆಲ್ಲಿಕಾಯಿ. ಕಿತ್ತಳೆಗಿಂತ 20 ಪಟ್ಟು ಅಧಿಕ ಪ್ರಮಾಣದ ವಿಟಮಿನ್ ಸಿ ನೆಲ್ಲಿಕಾಯಿಯಲ್ಲಿದೆ. ನೆಲ್ಲಿಕಾಯಿ ತಿಂದರೆ ಮೆಟಬಾಲಿಸಂ ಕೂಡಾ ಹೆಚ್ಚಾಗುತ್ತದೆ. ಇದರಿಂದ ತೂಕ ಕೂಡಾ ಕಡಿಮೆಯಾಗುತ್ತದೆ. ಬೇಕಾದರೆ ದಿನಕ್ಕೆ ಒಂದು ನೆಲ್ಲಿಕಾಯಿ ತಿನ್ನಬಹುದು. ಅಥವಾ ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯಬಹುದು.
ಮಧ್ಯಮಗಾತ್ರದ ಒಂದು ಕಿತ್ತಳೆಯಲ್ಲಿ 53.2 ಮಿಲಿ ಗ್ರಾಂ ವಿಟಮಿನ್ ಸಿ ಇರುತ್ತದೆ. ಇದು ನಮ್ಮಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಶೀತ, ತಲೆನೋವಿನಿಂದಲೂ ನಮ್ಮನ್ನು ರಕ್ಷಿಸುತ್ತದೆ.
ಕಿವಿ ಹಣ್ಣನ್ನು ನಿಮ್ಮ ಡಯಟ್ ನಲ್ಲಿ ಖಂಡಿತಾ ಇಟ್ಟುಕೊಳ್ಳಿ. ಒಂದು ಕಿವಿ ಹಣ್ಣಿನ್ಲಲಿ 83 ಮಿಲಿಗ್ರಾಂ ವಿಟಮಿನ್ ಸಿ ಸಿಗುತ್ತದೆ. ಜೊತೆಗೆ ವಿಟಮಿನ್ ಕೆ ಮತ್ತು ವಿಟಮಿನ್ ಇ ಕೂಡಾ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತವೆ.
ಅನಾನಸ್ ಪೋಷಕಾಂಶಗಳ ಪವರ್ ಹೌಸ್. ಇದರಲ್ಲಿ ವಿಟಮಿನ್ ಸಿ ಕೂಡಾ ಭರಪೂರವಾಗಿರುತ್ತದೆ. ಮ್ಯಾಂಗನೀಸ್ ಯಥೇಚ್ಚವಾಗಿರುತ್ತದೆ. ಕ್ಯಾಲರಿ ಕಡಿಮೆ ನೀಡುತ್ತದೆ. ನಿಯಮಿತವಾಗಿ ಅನಾನಸ್ ತಿನ್ನುತ್ತಿದ್ದರೆ ಬ್ಯಾಕ್ಟೀರಿಯಾ ಮತ್ತು ವೈರಸ್ ನಿಂದ ಆಗುವ ಸೋಂಕು ತಡೆಯಬಹುದು.