ಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸು

Mon, 12 Aug 2024-8:44 am,

ಜ್ಯೋತಿಷ್ಯದಲ್ಲಿ ಬೇರೆ ಬೇರೆ ಲೋಹಗಳಿಗೆ ತನ್ನದೇ ಆದ ಮಹತ್ವವಿದೆ.ರಾಶಿಗನುಗುಣವಾಗಿ ಯಾರು ಯಾವ  ಲೋಹವನ್ನು ಧರಿಸಿದರೆ ಅದೃಷ್ಟ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ.  ಅದೇ ರೀತಿ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಮಾತ್ರ ಅದೃಷ್ಟ ಅವರ ಕೈ ಹಿಡಿಯುವುದು. 

ಸಿಂಹ ರಾಶಿ :ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿಯು ಬೆಂಕಿಯ ಅಂಶದ ಸಂಕೇತವಾಗಿದೆ. ಈ ರಾಶಿಯ ಅಧಿಪತಿ ಸೂರ್ಯ.ಆದ್ದರಿಂದ,ಈ ರಾಶಿಯವರು ಚಿನ್ನದ ಉಂಗುರವನ್ನು ಧರಿಸಲೇಬೇಕು. ಚಿನ್ನದ ಉಂಗುರ ಧರಿಸಿದಾಗ ಮಾತ್ರ ಇವರ ಪಾಲಿನ ಅದೃಷ್ಟದ ಫಲ ಇವರಿಗೆ ಸಿಗುವುದು.  

ಕನ್ಯಾ ರಾಶಿ : ಈ ರಾಶಿಯ ಜನರು ಸುಖ ಸಮೃದ್ದಿಯ ಜೀವನವನ್ನು ಇಷ್ಟ ಪಡಿಸುತ್ತಾರೆ.  ಕನ್ಯಾ ರಾಶಿಯ ಜನರು ಚಿನ್ನದ ಉಂಗುರ,ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆ  ಇವರ ಜೀವನದಲ್ಲಿ ಎಲವೂ ಶುಭ. ಒಟ್ಟಿನಲ್ಲಿ ಚಿನ್ನವೇ ಇವರ ಪಾಲಿನ ಅದೃಷ್ಟ.     

ತುಲಾ ರಾಶಿ : ತುಲಾ ರಾಶಿಯವರ ಅದೃಷ್ಟ ಬದಲಾಯಿಸುವುದು ಕೂಡಾ ಚಿನ್ನ. ಇವರು ಚಿನ್ನದ ಉಂಗುರ ಹಾಕಿದ ಕೂಡಲೇ ಅದೃಷ್ಟ ಇವರನ್ನು ಹಿಂಬಾಲಿಸಲು ಶುರು ಮಾಡುತ್ತದೆ.   ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಹಾಗಾಗಿ ನಿಮ್ಮ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಚಿನ್ನದ ಉಂಗುರು ಧರಿಸಬೇಕು.  

ಧನು ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಧನು ರಾಶಿಯವರಿಗೆ  ಅತ್ಯಂತ ಶುಭ.ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.  

ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link