Flipkart Big Billion Days 2022: 10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ 43 ಇಂಚಿನ ಸ್ಮಾರ್ಟ್ ಟಿವಿಗಳು ಲಭ್ಯ..!

Mon, 26 Sep 2022-12:25 pm,

ಥಾಮ್ಸನ್ 9ಆರ್ ಪ್ರೊ  43 ಇಂಚಿನ ಸ್ಮಾರ್ಟ್ ಟಿವಿಯ ಪ್ರಾರಂಭಿಕ ಬೆಲೆ  47,990 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯನ್ನು 17,999ರೂ. ಗೆ ಖರೀದಿಸಬಹುದು.   ಅಂದರೆ ಈ ಟಿವಿ ಮೇಲೆ ಶೇ.62ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಟಿವಿಯಲ್ಲಿ 11,000 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ. ಹಳೆಯ ಸ್ಮಾರ್ಟ್ ಟಿವಿಯನ್ನು ವಿನಿಮಯ ಮಾಡಿಕೊಂಡರೆ ತುಂಬಾ ರಿಯಾಯಿತಿ ಪಡೆಯಬಹುದು. ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ ಟಿವಿಯನ್ನು ಕೇವಲ  8,999 ರೂ.ಗೆ ಖರೀದಿಸಬಹುದು.   

ಬ್ಲಾಪುಂಕ್ಟ್ ಸೈಬರ್ ಸೌಂಡ್ 43 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 41,999 ರೂ. ಫ್ಲಿಪ್‌ಕಾರ್ಟ್‌ನಲ್ಲಿ  ಇದು, 24,999 ರೂ,ಗೆ ಲಭ್ಯವಿದೆ.  ಆಕ್ಸೆಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, 2,250 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.  ಅಲ್ಲದೆ,  11,000 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಇದೆ.  ಈ ಎಲ್ಲಾ ರಿಯಾಯಿತಿಗಳನ್ನು ಸೇರಿಸಿದರೆ,  ಟಿವಿಯನ್ನು  11,749 ರೂ.ಗೆ  ಖರೀದಿಸಿ ತರಬಹುದು. 

ಕೊಡಾಕ್  7ಎಕ್ಸ್ ಪ್ರೊ 43 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 33,999 ರೂ. ಫ್ಲಿಪ್‌ಕಾರ್ಟ್‌ನಲ್ಲಿ 19,999 ರೂ.ಗೆ ಲಭ್ಯವಿದೆ. ಟಿವಿಯಲ್ಲಿ 11 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ಇದೆ.  ಈ ಮೂಲಕ ಟಿವಿಯನ್ನು  8,999 ರೂ.ಗೆ ಖರೀದಿಸಬಹುದು.

ಏಸರ್ ಐ ಸರಣಿಯ 43 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 34,990 ರೂ. ಫ್ಲಿಪ್‌ಕಾರ್ಟ್‌ನಲ್ಲಿ 21,999 ರೂ. ಗೆ ಲಭ್ಯವಿದೆ. ಇದರ ಮೇಲೆ 11,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ಅದರ ನಂತರ ಟಿವಿ ಬೆಲೆ 10,999 ರೂ. ಗೆ ಇಳಿಯುತ್ತದೆ. ಟಿವಿಗಳ ಮೇಲೆ ಬ್ಯಾಂಕ್ ಆಫರ್ ಕೂಡ ಇದ್ದು, ಇದರಿಂದ ಟಿವಿಗಳ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

 ಇನ್ಫಾಲ್ಕನ್ ಬೈ ಟಿಸಿಎಲ್ ಕೆ 61 43 ಇಂಚಿನ ಸ್ಮಾರ್ಟ್ ಟಿವಿಯು  47,990 ರೂ. ಲಾಂಚ್ ಬೆಲೆಯನ್ನು ಹೊಂದಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ17,999 ಗೆ ಲಭ್ಯವಿದೆ. ಇದರ ಮೇಲೆ 11,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ಈ ಮೂಲಕ ಟಿವಿ ಬೆಲೆ 6,999 ರೂ.ಗೆ ಇಳಿಯುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link