ಮೂರು ಮಕ್ಕಳ ತಾಯಿಯಾದರೂ ಸಖತ್ ಗ್ಲಾಮರಸ್ !ಕಿರು ತೆರೆ ನಟನ ಮೋಹಕ್ಕೆ ಬಿದ್ದು 2ನೇ ಮದುವೆ! ಸ್ಟಾರ್ ನಟನ ಪುತ್ರಿ ಈಕೆ !
ನಮ ಚಿತ್ರ ರಂಗದಲ್ಲಿ ಸ್ಟಾರ್ ಗಳು ಮಾತ್ರವಲ್ಲ ಸ್ಟಾರ್ ಕಿಡ್ ಗಳೂ ಬಹಳ ಸಂಖ್ಯೆಯಲ್ಲಿಯೇ ಇದ್ದಾರೆ.
ಇಂಥಹ ಸ್ಟಾರ್ ಕಿಡ್ ಗಳಲ್ಲಿ ಒಬ್ಬರು ರಾಜ್ ಬಬ್ಬರ್ ಅವರ ಪುತ್ರಿ ಜೂಹಿ ಬಬ್ಬರ್. ಗ್ಲಾಮರ್ ಗೆ ಇನ್ನೊಂದು ಹೆಸರೇ ಜೂಹಿ.
ಜೂಹಿ ಬಬ್ಬರ್ ಅವರು 2003ರಲ್ಲಿ 'ಕಾಶ್ ಆಪ್ ಹಮಾರೆ ಹೋತೆ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಪೋಷಕ ಪಾತ್ರಗಳಲ್ಲಿ ಮಿಂಚಿದ್ದೇ ಹೆಚ್ಚು.
ಹಿಂದಿ ಚಿತ್ರರಂಗದ ಹೊರತಾಗಿ, ಜೂಹಿ ಪಂಜಾಬಿ ಚಲನಚಿತ್ರೋದ್ಯಮದಲ್ಲಿಯು ಹೆಸರು ಮಾಡಿದ್ದಾರೆ.
ಜೂಹಿ ಬಬ್ಬರ್ ಮೊದಲ ಮದುವೆಯು ನಿರ್ದೇಶಕ ಬಿಜೋಯ್ ನಂಬಿಯಾರ್ ಅವರೊಂದಿಗೆ 2007 ರಲ್ಲಿ ನಡೆಯಿತು. ಎರಡೇ ವರ್ಷಕ್ಕೆ ಇವರ ಮದುವೆ ಮುರಿದು ಬೀಳುತ್ತದೆ. ನಂತರ 2011ರಲ್ಲಿ ಕಿರುತೆರೆ ತಾರೆ ಅನುಪ್ ಸೋನಿ ಜೊತೆ ಎರಡನೇ ವಿವಾಹವಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜೂಹಿಗೆ ಸಖತ್ ಫಾಲೋವರ್ಸ್ ಇದ್ದಾರೆ. ದ್ದಾರೆ.ಜೂಹಿಗೆ 43 ವರ್ಷವಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದರೂ ಅವರ ಸೌಂದರ್ಯ ಮತ್ತು ಗ್ಲಾಮರ್ ಸ್ವಲ್ಪವೂ ಕಡಿಮೆಯಾಗಿಲ್ಲ.