ಸಾಯುವುದನ್ನು ನಿಷೇಧಿಸಿರುವ 5 ನಗರಗಳು: ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ!
ಜಪಾನಿನ ದ್ವೀಪವಾದ ಇಟ್ಸುಕುಶಿಮಾವನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. 1868ರವರೆಗೆ ಇಲ್ಲಿ ಸಾಯಲು ಅಥವಾ ಜನ್ಮ ನೀಡಲು ಅವಕಾಶವಿರಲಿಲ್ಲ. ದ್ವೀಪದಲ್ಲಿ ಇನ್ನೂ ಕೂಡ ಸ್ಮಶಾನ ಅಥವಾ ಆಸ್ಪತ್ರೆ ಇಲ್ಲವೇ ಇಲ್ಲ.
ಲ್ಯಾಂಜರೋನ್‌ನಲ್ಲಿರುವ ಸ್ಥಳೀಯ ಸ್ಮಶಾನವು ಕಿಕ್ಕಿರಿದು ತುಂಬಿತ್ತು. ಇದೇ ಕಾರಣಕ್ಕೆ ಗ್ರಾನಡಾ ಪ್ರಾಂತ್ಯದ ಹಳ್ಳಿಯ ಮೇಯರ್ 1999ರಲ್ಲಿ ಸಾವನ್ನು ನಿಷೇಧಿಸಿದರು. ಅಲ್ಲದೆ ಈ ಕ್ರಮವನ್ನು ಭಾಗಶಃ ತಮಾಷೆಯಾಗಿ ಮತ್ತು ಭಾಗಶಃ ವಾಸ್ತವದತ್ತ ಗಮನ ಸೆಳೆಯಲು ರಾಜಕೀಯ ನಡೆಯಾಗಿ ಬಳಸಲಾಗಿದೆ. ಆದರೆ ಈ ನಿಷೇಧವು ಕೆಲವು ದಿನಗಳವರೆಗೆ ಮುಂದುವರೆದಿತ್ತು. ಇಲ್ಲಿನ ಪುರಸಭೆಯ ಅಧಿಕಾರಿಗಳು ಹೊಸ ಸ್ಮಶಾನವನ್ನು ನಿರ್ಮಿಸುವವರೆಗೂ ಬದುಕುವಂತೆ ಜನರಿಗೆ ಸಲಹೆ ನೀಡಿದ್ದರು. ಇದು ನಿಮಗೆ ಸ್ವಲ್ಪ ತಮಾಷೆಯಾಗಿ ಕಂಡರೂ ನಿಜವಾಗಿಯೂ ನಡೆದಿರುವ ಘಟನೆಯಾಗಿದೆ.
2007ರಲ್ಲಿ ಫ್ರಾನ್ಸ್ ನ ಕುಗ್ನಾಕ್ಸ್ ನ ಮೇಯರ್ ಹೊಸ ಸ್ಮಶಾನವನ್ನು ತೆರೆಯಲು ಅನುಮತಿ ಪಡೆಯಲು ವಿಫಲರಾದರು. ಇದರ ನಂತರ ಅವರು ಸಾವನ್ನು ನಿಷೇಧಿಸಿದರು. ಈ ನಗರವು ಸುಮಾರು 17,000 ನಿವಾಸಿಗಳನ್ನು ಹೊಂದಿತ್ತು. ಬಳಿಕ ಸ್ಥಳೀಯ ಸ್ಮಶಾನವನ್ನು ವಿಸ್ತರಿಸಲು ಅನುಮತಿ ನೀಡಲಾಗಿತ್ತು. ಇದರ ಬಳಿಕ ಸಾವಿನ ಮೇಲೆ ಹೇರಿದ್ದ ನಿಷೇಧವನ್ನು ವಾಪಸ್ ಪಡೆಯಲಾಯಿತು.
ಲಾಂಗ್ಇಯರ್ಬೈನ್ ಕಲ್ಲಿದ್ದಲು ಗಣಿಗಾರಿಕೆಗೆ ಹೆಸರುವಾಸಿಯಾದ ನಾರ್ವೆಯ ಒಂದು ಸಣ್ಣ ಪಟ್ಟಣ. ಆರ್ಕ್ಟಿಕ್ ವೃತ್ತಕ್ಕೆ ಹತ್ತಿರವಿರುವ ಕಾರಣ ಇಲ್ಲಿನ ಹವಾಮಾನವು ಸಾಮಾನ್ಯವಾಗಿ ತಂಪಾಗಿರುತ್ತದೆ. ಹೀಗಾಗಿ ಇಲ್ಲಿ ಪರ್ಮಾಫ್ರಾಸ್ಟ್ ಮೃತ ದೇಹಗಳನ್ನು ಕೊಳೆಯದಂತೆ ತಡೆಯುತ್ತದೆ. ಇದು ಸಾಂಕ್ರಾಮಿಕ ರೋಗಗಳ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸಿತ್ತು. ಆದ್ದರಿಂದ ಇಲ್ಲಿ ಹೊಸದೊಂದು ನಿಯಮ ಜಾರಿ ಮಾಡಲಾಗಿತ್ತು. ಅದರಂತೆ ಲಾಂಗ್ಇಯರ್ಬೈನ್ ನಲ್ಲಿ ಸಾಯುವುದು ಮತ್ತು ಸಮಾಧಿ ಮಾಡುವುದು ಕಾನೂನಿನಡಿ ಅಪರಾಧವೆಂದು ಘೋಷಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಸಾಯುವ ಸ್ಥಿತಿಯಲ್ಲಿದ್ದರೆ ಇಂತಹ ಕಾನೂನು ಅಸ್ತಿತ್ವದಲ್ಲಿಲ್ಲದ ನಾರ್ವೆಯ ಇತರ ನಗರಗಳಿಗೆ ಅವರನ್ನು ಕಳುಹಿಸಲಾಗುತ್ತಿತ್ತು.
2000ರಲ್ಲಿ ‘ಪರಿಸರ ಕಾಳಜಿ’ ಕಾರಣ ಹೊಸ ಸ್ಮಶಾನಕ್ಕೆ ಅನುಮತಿ ನಿರಾಕರಿಸಿದ ನಂತರ ಇಲ್ಲಿನ ಮೇಯರ್ ಹೊಸ ಕಾನೂನು ಜಾರಿಗೊಳಿಸಿದ್ದರು. ಇದರ ಪ್ರಕಾರ ಇಲ್ಲಿನ ಜನರು ನಗರದೊಳಗೆ ಸಾಯುವುದನ್ನು ನಿಷೇಧಿಸಲಾಗಿತ್ತು. ಇದು ಕೂಡ ತಪಾಷೆಯಾಗಿ ಕಂಡರೂ ನಿಜವಾಗಿ ನಡೆದಿರುವ ಘಟನೆಯಾಗಿದೆ.