Electric Bikes List : ಭಾರತದಲ್ಲಿ ಸಧ್ಯ ಲಭ್ಯವಿರುವ ಈ 5 ಎಲೆಕ್ಟ್ರಿಕ್ ಬೈಕುಗಳು ಈಗಲೇ ಬುಕ್ ಮಾಡಿ : ಇಲ್ಲಿದೆ ಅವುಗಳ ಬೆಲೆ, ಸ್ಪೀಡ್ ಲಿಮಿಟ್ ಇತರೆ ಮಾಹಿತಿ

Thu, 26 Aug 2021-3:00 pm,

ರೆವೊಲ್ಟ್ ಆರ್‌ವಿ 400 ಪ್ರಸ್ತುತ 90,799 ರೂ.ಗೆ ಮಾರಾಟವಾಗುತ್ತಿದೆ (ಎಕ್ಸ್ ಶೋ ರೂಂ, ದೆಹಲಿ). ಬೈಕು 3.24 kWh ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ ಮತ್ತು ಇದು 85 kmph ಗರಿಷ್ಠ ವೇಗ ನೀಡುತ್ತದೆ.

ಎಕ್ಸ್ ಶೋರೂಂ ಬೆಲೆ: ರೂ 90,799

ರೇಂಜ್ : 90 ಕಿಮೀ

ಬ್ಯಾಟರಿ ಸಾಮರ್ಥ್ಯ: 3.24 kWh

ಚಾರ್ಜಿಂಗ್ ಸಮಯ: 4.5 ಗಂಟೆಗಳು

ಗರಿಷ್ಠ ವೇಗ: ಗಂಟೆಗೆ 85 ಕಿಮೀ

ಭಾರತದ ಎಲೆಕ್ಟ್ರಿಕ್ ವಾಹನವಿಭಾಗದಲ್ಲಿ ಆರಂಭಿಕ ಪ್ರವೇಶ ಪಡೆದವರಲ್ಲಿ ಅಥರ್ 450x ಒಂದಾಗಿದೆ. ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ತಿಂಗಳುಗಳವರೆಗೆ ಯಾವುದೇ ಸ್ಪರ್ಧೆ ಈರಲಿಲ್ಲ ಆದ್ರೆ, ಪ್ರಸ್ತುತ, ಅಥರ್ 450x ಬೆಲೆ 1.13 ಲಕ್ಷ ರೂ. (ಎಕ್ಸ್ ಶೋ ರೂಂ, ದೆಹಲಿ)

ಎಕ್ಸ್ ಶೋರೂಂ ಬೆಲೆ: 1.13 ಲಕ್ಷ ರೂ.

ರೇಂಜ್ : 116 ಕಿಮೀ

ಬ್ಯಾಟರಿ ಸಾಮರ್ಥ್ಯ: 2.9 kWh

ಚಾರ್ಜಿಂಗ್ ಸಮಯ: 5.45 ಗಂಟೆಗಳು

ಗರಿಷ್ಠ ವೇಗ: 80 ಕಿಮೀ/ಗಂ

ರುಗ್ಗೆಡ್ ಜಿ 1 ಅನ್ನು eBikeGo 79,999 ರೂ.ಗೆ ಬಿಡುಗಡೆ ಮಾಡಿದೆ (ಎಕ್ಸ್ ಶೋರೂಂ). 3kW ಮೋಟಾರ್‌ನಿಂದ ಓಡುವ ಈ ಬೈಕ್ ಭಾರತದ ಅತ್ಯಂತ ಬಲಿಷ್ಠ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಎಂದು ಹೇಳಲಾಗಿದೆ. ಪೂರ್ಣ ಚಾರ್ಜ್‌ನಲ್ಲಿ ಬೈಕ್ 160 ಕಿಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ.

ರುಗ್ಗೆಡ್ ಎಲೆಕ್ಟ್ರಿಕ್ ಬೈಕು 3 ಕೆಡಬ್ಲ್ಯೂ ಮೋಟಾರ್ ನಿಂದ ಚಾಲಿತವಾಗಿದೆ, ಇದರ ಗರಿಷ್ಠ ವೇಗವು ಗಂಟೆಗೆ 70 ಕಿಮೀ ವೇಗದಲ್ಲಿ ತಲುಪಬಹುದು. ಎಲೆಕ್ಟ್ರಿಕ್ ವಾಹನ ತಯಾರಕರು ಬೈಕು ಪೂರ್ತಿ ಸಿಂಗಲ್ ಚಾರ್ಜ್ ನಲ್ಲಿ 160 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ.

ಎಕ್ಸ್ ಶೋರೂಂ ಬೆಲೆ: 79,999 ರೂ.

ರೇಂಜ್ : 160 ಕಿಮೀ

ಬ್ಯಾಟರಿ ಸಾಮರ್ಥ್ಯ: 2kWh

ಚಾರ್ಜಿಂಗ್ ಸಮಯ: 3.5 ಗಂಟೆಗಳು

ಗರಿಷ್ಠ ವೇಗ: ಗಂಟೆಗೆ 70 ಕಿಮೀ

ಓಲಾ ಎಸ್ 1 ಪ್ರೊ ಜೊತೆಗೆ ಬಿಡುಗಡೆ ಮಾಡಲಾಗಿರುವ ಸಿಂಪಲ್ ಒನ್ 236 ಕಿಮೀ ಲಾಂಗೆಸ್ಟ್ ರೇಂಜ್ ನೀಡುವ ಎಲೆಕ್ಟ್ರಿಕ್ ಬೈಕ್ ಆಗಿದೆ. ಸಿಂಪಲ್ ಎನರ್ಜಿ ಹೇಳುವಂತೆ ಬೈಕ್ 105 ಕಿಲೋಮೀಟರ್ ಸ್ಪೀಡ್ ರೀಚ್ ಆಗುತ್ತದೆ. ಬೈಕ್ 4.8 kWh ಬ್ಯಾಟರಿ ಒಳಗೊಂಡಿದೆ.  ಸಿಂಪಲ್ ಒನ್ ಬುಕ್ಕಿಂಗ್ ಎಕ್ಸ್ ಶೋ ರೂಂ ಬೆಲೆಯಲ್ಲಿ 1,09,999 ರೂ. ಇದೆ.

ಎಕ್ಸ್ ಶೋ ರೂಂ ಬೆಲೆ: 1,09,999 ರೂ.

ರೇಂಜ್ : 236 ಕಿಮೀ

ಬ್ಯಾಟರಿ ಸಾಮರ್ಥ್ಯ: 4.8 kWh ಬ್ಯಾಟರಿ

ಚಾರ್ಜಿಂಗ್ ಸಮಯ: 2.7 ಗಂಟೆಗಳಲ್ಲಿ 80%

ಗರಿಷ್ಠ ವೇಗ: ಗಂಟೆಗೆ 105 ಕಿಮೀ

ಓಲಾ ಎಸ್ 1 ಪ್ರೊ ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸದಾಗಿ ಎಂಟ್ರಿ  ಪಡೆದಿದೆ. 1,29,999 ರೂ. ಬೆಲೆಯ ಬುಕ್ ಆದ ಇದು. ಈ ಎಲೆಕ್ಟ್ರಿಕ್ ಬೈಕ್ 3.97 ಕಿಲೋವ್ಯಾಟ್ ಬ್ಯಾಟರಿಯ ಪವರ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 181 ಕಿಮೀ ಓಡುತ್ತದೆ. ಓಲಾ ಎಸ್ 1 ಪ್ರೊನ ಗರಿಷ್ಠ ವೇಗವು ಪ್ರಸ್ತುತ ಗಂಟೆಗೆ 120 ಕಿಲೋಮೀಟರ್ ಆಗಿದ್ದು, ಬೈಕ್ ಸಂಪೂರ್ಣ ಚಾರ್ಜ್‌ಗೆ 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಎಕ್ಸ್ ಶೋರೂಂ ಬೆಲೆ: 1,29,999 ರೂ.

ರೇಂಜ್ : 181 ಕಿಮೀ

ಬ್ಯಾಟರಿ ಸಾಮರ್ಥ್ಯ: 3.97kWh

ಚಾರ್ಜಿಂಗ್ ಸಮಯ: 6 ಗಂಟೆ 30 ನಿಮಿಷಗಳು

ಗರಿಷ್ಠ ವೇಗ: ಗಂಟೆಗೆ 115 ಕಿಮೀ

ZEENEWS TRENDING STORIES

By continuing to use the site, you agree to the use of cookies. You can find out more by Tapping this link