ಈ ಐದು ಕೆಲಸಗಳಲ್ಲಿ ಬರೀ ನಿದ್ದೆ ಮಾಡಿದರೆ ಸಿಗುತ್ತದೆ ಕೈ ತುಂಬಾ ವೇತನ
ಈ ಕೆಲಸವನ್ನು ಮಾಡುವ ವ್ಯಕ್ತಿಯು ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ಹಾಸಿಗೆಯಲ್ಲಿ ಕಳೆಯಬೇಕಾಗುತ್ತದೆ. ಮ್ಯಾಟ್ರೆಸ್ ಟೆಸ್ಟರ್ ಅನ್ನು ಕ್ರಾಫ್ಟೆಡ್ ಬೆಡ್ಸ್ ನೇಮಕ ಮಾಡುತ್ತಿದೆ. ಇಲ್ಲಿ ಕೆಲಸಕ್ಕೆ ನೇಮಕವಾದವರು ಹಾಸಿಗೆಯ ಮೇಲೆ ಮಲಗಿ ಪರಿಶೀಲನೆ ಮಾಡಬೇಕಾಗುತ್ತದೆ.
ಪ್ರಪಂಚದಾದ್ಯಂತ ಅನೇಕ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಕ್ಲಿನಿಕಲ್ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಲು ಉದ್ಯೋಗಗಳನ್ನು ನೀಡುತ್ತವೆ. ಭಾಗವಹಿಸುವವರಿಗೆ ಹಾಸಿಗೆಯ ಮೇಲೆ ಮಲಗಲು ಸಂಬಳ ನೀಡಲಾಗುತ್ತದೆ. ಕೆರಿಯರ್ ಅಡಿಕ್ಟ್ ವರದಿಯ ಪ್ರಕಾರ, ಕಂಪನಿಗಳು ಈ ಕೆಲಸಕ್ಕಾಗಿ 100 ಡಾಲರ್ ನಿಂದ 3000 ಡಾಲರ್ ವರೆಗೆ ಅಂದರೆ 7500 ರಿಂದ 2.5 ಲಕ್ಷ ದವರೆಗೆ ವೇತನ ನೀಡುತ್ತವೆ.
ಇಂಟಿರಿಯರ್ ಸ್ಪೆಷಲಿಸ್ಟ್ ಕಂಪನಿ ನಿಯಮಿತವಾಗಿ ಸ್ಲೀಪ್ ಎಕ್ಸಿಕ್ಯುಟಿವ್ ಹುದ್ದೆಗಳಿಗಾಗಿ ನೇಮಕ ಮಾಡುತ್ತಿರುತ್ತವೆ. ಈ ಕೆಲಸಕ್ಕಾಗಿ, ಅಭ್ಯರ್ಥಿಯು ದಿನಕ್ಕೆ 10500 ರೂ.ಗಳ ವೇತನವನ್ನು ಪಡೆಯಬಹುದು.
ಬೇರೆ ಬೇರೆ ಉದ್ಯೋಗಗಳು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶಕ್ಕಾಗಿ ಅಧ್ಯಯನ ಆರಂಭಿಸಲಾಗಿದೆ. ಈ ಅಧ್ಯಯನದಲ್ಲಿ ಪಾಲ್ಗೊಳ್ಳಲು ತಿಂಗಳಿಗೆ ಸರಾಸರಿ ವೇತನವನ್ನು 1.5 ಲಕ್ಷದವರೆಗೆ ನೀಡಲಾಗುತ್ತದೆ.
ಇದನ್ನು ವಿಶ್ವದ ಅತ್ಯಂತ ಆರಾಮದಾಯಕ ಕೆಲಸ ಎಂದೂ ಕರೆಯಬಹುದು. ಕೆರಿಯರ್ ಅಡಿಕ್ಟ್ ವರದಿಯ ಪ್ರಕಾರ, ಚೀನೀ ಸಂಸ್ಥೆಯು ನಾವೋ ಬೈಜಿನ್ ವೃತ್ತಿಪರ ಸ್ಲೀಪರ್ಸ್ ಆಗಲು ಅರ್ಜಿದಾರರಿಗೆ ವಾರ್ಷಿಕವಾಗಿ 15 ಲಕ್ಷ ರೂ. ಪಾವತಿಸುತ್ತದೆ.