Multibagger stock: ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದ 5 ಪೆನ್ನಿ ಸ್ಟಾಕ್‌ಗಳು..!
ನೀವು ಪೆನ್ನಿ ಸ್ಟಾಕ್‌ಗಳ ಅದ್ಭುತ ನೋಡಲು ಬಯಸಿದರೆ ಈ ಸಣ್ಣ ಐಟಿ ಕಂಪನಿಯ ಮೇಲೆ ಕಣ್ಣಿಡಿ. ಈ ಸ್ಟಾಕ್ ವರ್ಷದ ಆರಂಭದಲ್ಲಿ 12.96 ರೂ. ಇತ್ತು, ಆದರೆ ಪ್ರಸ್ತುತ 39.90 ರೂ.ನಂತೆ ವಹಿವಾಟು ನಡೆಸುತ್ತಿದೆ. ಇಲ್ಲಿಯವರೆಗೆ ಇದು ತನ್ನ ಹೂಡಿಕೆದಾರರಿಗೆ ಶೇ.215ರಷ್ಟು ಉತ್ತಮ ಆದಾಯ ನೀಡಿದೆ. ಇದರ ಮಾರುಕಟ್ಟೆ ಕ್ಯಾಪ್ ಸುಮಾರು 35 ಕೋಟಿ ರೂ.ಗಳಷ್ಟಿದೆ. ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟವು 58.70 ರೂ. ಆಗಿದ್ದರೆ, 52 ವಾರಗಳ ಕನಿಷ್ಠ ಮಟ್ಟವು 8.39 ರೂ. ಆಗಿದೆ.
ಪೆನ್ನಿ ಸ್ಟಾಕ್‌ಗಳ ವಿಷಯದಲ್ಲಿ ಈ ಸ್ಟಾಕ್ ಸಹ ಪ್ರಚಂಡ ಆದಾಯ ನೀಡಿದೆ. 2022ರಲ್ಲಿ ಕೇವಲ 10.46 ರೂ. ಇದ್ದ ಈ ಸ್ಟಾಕ್ ಇದೀಗ 61.90 ರೂ.ಗೆ ತಲುಪಿದೆ. VCU ಡೇಟಾ ನಿರ್ವಹಣೆಯ ಸ್ಟಾಕ್ ಅನ್ನು 2022ರ ಮಲ್ಟಿಬ್ಯಾಗರ್ ರಿಟರ್ನ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 95 ಕೋಟಿ ರೂ.ನಷ್ಟಿದೆ. ಇದರ 52 ವಾರಗಳ ಗರಿಷ್ಠ ಮಟ್ಟ 65.20 ರೂ. ಇದ್ದರೆ, 52 ವಾರಗಳ ಕನಿಷ್ಠ ಮಟ್ಟವು 5.47 ರೂ. ಆಗಿದೆ.
2022ರ ಆರಂಭದಲ್ಲಿ 12.43 ರೂ.ನಂತೆ ವಹಿವಾಟು ನಡೆಸುತ್ತಿದ್ದ ಎಬಿಸಿ ಗ್ಯಾಸ್ ಸ್ಟಾಕ್ ಭರ್ಜರಿ ಬೆಳವಣಿಗೆ ಕಂಡು 30.40 ರೂ.ಗೆ ತಲುಪಿದೆ. ಎಬಿಸಿ ಗ್ಯಾಸ್ ಸ್ಟಾಕ್ ಈ ವರ್ಷ ತನ್ನ ಹೂಡಿಕೆದಾರರಿಗೆ ಸುಮಾರು ಶೇ.400ರಷ್ಟು ಬಂಪರ್ ಲಾಭ ನೀಡಿದೆ. ಈ ಷೇರಿನ ಮಾರುಕಟ್ಟೆ ಮೌಲ್ಯ ಕೇವಲ 7 ಕೋಟಿ ರೂ. ಇದೆ. ಇದರ 52 ವಾರಗಳ ಗರಿಷ್ಟ 78.15 ಆದರೆ, 52 ವಾರಗಳ ಕನಿಷ್ಠ ಮಟ್ಟವು 10.66 ರೂ. ಆಗಿದೆ.
ಈ ವರ್ಷ ಷೇರುಮಾರುಕಟ್ಟೆಯಲ್ಲಿ ಮಾರಾಟದ ಭರಾಟೆ ಜೋರಾಗಿತ್ತು. ಆದರೂ ಸಹ ತಮ್ಮ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವ ಮೂಲಕ ಈ ಕಂಪನಿ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳ ಪಟ್ಟಿ ಸೇರಿದೆ. ಹೌದು, ಧ್ರುವ ಕ್ಯಾಪಿಟಲ್ ಕೇವಲ 4.54 ರೂ.ಗಳಿಂದ ಪ್ರಾರಂಭವಾದ ಈ ಸ್ಟಾಕ್‍ನ ಜರ್ನಿ ಇಂದು ಅನೇಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಪ್ರಸ್ತುತ ಈ ಸ್ಟಾಕ್ 21.60 ರೂ.ನಂತೆ ವಹಿವಾಟು ನಡೆಸುತ್ತಿದೆ. 2022ರ ವರ್ಷದಲ್ಲಿ ಈ ಪೆನ್ನಿ ಸ್ಟಾಕ್ ಹೂಡಿಕೆದಾರರಿಗೆ ಶೇ.380ರಷ್ಟು ಪ್ರಚಂಡ ಆದಾಯ ನೀಡಿದೆ. ಇದರ 52 ವಾರಗಳ ಗರಿಷ್ಟ 30.70 ಆದರೆ, 52 ವಾರಗಳ ಕನಿಷ್ಠ ಮಟ್ಟವು 3.50 ರೂ. ಆಗಿದೆ.
ಈ ಸ್ಟಾಕ್ ಸಹ 2022ರಲ್ಲಿ ಹೂಡಿಕೆದಾರರಿಗೆ ಬಂಪರ್ ಆದಾಯ ನೀಡುವ ಮೂಲಕ ಮಲ್ಟಿಬ್ಯಾಗರ್ ಎನಿಸಿಕೊಂಡಿದೆ. ಅತ್ಯುತ್ತಮ ಆದಾಯದ ಆಧಾರದ ಮೇಲೆ ಈ ವರ್ಷ ಅನೇಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಕೇವಲ 9.80 ರೂ.ಗಳಿಂದ ಪ್ರಾರಂಭವಾಗಿ ಇದೀಗ 52.15 ರೂ.ಗೆ ತಲುಪಿದೆ. ಪ್ರಸ್ತುತ ಈ ಕಂಪನಿಯ ಮಾರುಕಟ್ಟೆ ಮೌಲ್ಯ 34 ಕೋಟಿ ರೂ. ಇದೆ. ಇದರ 52 ವಾರಗಳ ಗರಿಷ್ಠ ಮಟ್ಟವು 67.75 ರೂ .ಆಗಿದ್ದರೆ, 52 ವಾರಗಳ ಕನಿಷ್ಠ ಮಟ್ಟವು 5.73 ರೂ. ಆಗಿದೆ.