RPF-GRP ಯೋಧರು ಹೀಗೆ ಮಾಡುವಂತಿಲ್ಲ, ಏನು ಹೇಳುತ್ತದೆ ರೈಲ್ವೆ ಐದು ಪ್ರಮುಖ ನಿಯಮ
ಭಾರತೀಯ ರೈಲ್ವೇಯ ನಿಯಮಗಳ ಪ್ರಕಾರ, ರೈಲಿನ ಒಳಗೆ ಅಥವಾ ಹೊರಗೆ ಟಿಕೆಟ್‌ಗಳನ್ನು ಪರಿಶೀಲಿಸುವ ಹಕ್ಕು TTE ಮತ್ತು ಮೊಬೈಲ್ ಸ್ಕ್ವಾಡ್‌ಗೆ ಮಾತ್ರ ಇರುತ್ತದೆ. ರೈಲ್ವೇಯಲ್ಲಿ ಭದ್ರತೆಗಾಗಿ ನಿಯೋಜಿಸಲಾದ ಆರ್‌ಪಿಎಫ್, ಜಿಆರ್‌ಪಿ ಯೋಧರು ಅಥವಾ ಸಿಬ್ಬಂದಿ ಟಿಕೆಟ್ ಪರಿಶೀಲಿಸುವಂತಿಲ್ಲ.
ಪ್ರಯಾಣಿಕರು ಸರಿಯಾದ ನಿಲ್ದಾಣದಲ್ಲಿ ರೈಲು ಹತ್ತುವುದು ಸಾಧ್ಯವಾಗದೇ ಹೋದರೆ, TTE ಮುಂದಿನ ಎರಡು ನಿಲ್ದಾಣಗಳವರೆಗೆ ಕಾಯ್ದಿರಿಸಿದ ಸೀಟನ್ನು ಯಾರಿಗೂ ನೀಡುವಂತಿಲ್ಲ. ಆದರೆ ನೆನಪಿನಲ್ಲಿಡಿ, ಎರಡು ನಿಲ್ದಾಣಗಳ ನಂತರ, TTE RAC ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಆಸನವನ್ನು ನೀಡಬಹುದು. ಪ್ರಯಾಣಿಕರ ಬಳಿ ಎರಡು ನಿಲ್ದಾಣಗಳ ಆಯ್ಕೆ ಮಾತ್ರ ಇರುತ್ತದೆ.
ಒಬ್ಬರ ಟಿಕೆಟ್ ನಲ್ಲಿ ಇನ್ನೊಬ್ಬರು ಪ್ರಯಾಣ ಮಾಡುವಂತಿಲ್ಲ. ಆದರೆ ಕುಟುಂಬಕ್ಕೆ ಸಂಬಂಧಿಸಿದಂತೆ ವಿಭಿನ್ನ ನಿಯಮವಿದೆ. ಕುಟುಂಬದ ಸದಸ್ಯರ ಟಿಕೆಟ್‌ನಲ್ಲಿ ಪ್ರಯಾಣಿಸಬಹುದು. ಆದರೆ, ನೀವು ಯಾರ ಟಿಕೆಟ್‌ನಲ್ಲಿ ಪ್ರಯಾಣಿಸುತ್ತಿದ್ದೀರೋ ಅವರೊಂದಿಗೆ ರಕ್ತಸಂಬಂಧ ಹೊಂದಿರಬೇಕು. ಇದೆ. ಉದಾಹರಣೆಗೆ, ಪೋಷಕರು, ಒಡಹುಟ್ಟಿದವರು, ಸಂಗಾತಿಗಳು ಅಥವಾ ಮಕ್ಕಳ ಹೆಸರಿನಲ್ಲಿ ಟಿಕೆಟ್ ಇದ್ದರೆ, ಅವರ ಟಿಕೆಟ್‌ನಲ್ಲಿ ಪ್ರಯಾಣಿಸಬಹುದು. ಆದರೆ, ಇದಕ್ಕಾಗಿ ನಿಲ್ದಾಣಕ್ಕೆ ಹೋಗಿ ಟಿಕೆಟ್‌ನಲ್ಲಿ ಹೆಸರನ್ನು ಬದಲಾಯಿಸಬೇಕಾಗುತ್ತದೆ.
ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಭಾರತೀಯ ರೈಲ್ವೇ ಯಾವುದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಟಿಕೆಟ್ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ. ಸಂಸ್ಥೆಯ ಮುಖ್ಯಸ್ಥರು ರೈಲು ಹೊರಡುವ 48 ಗಂಟೆಗಳ ಮೊದಲು ಅಗತ್ಯ ದಾಖಲೆಗಳೊಂದಿಗೆ ಲೆಟರ್‌ಹೆಡ್‌ನಲ್ಲಿ ಲಿಖಿತವಾಗಿ ಅರ್ಜಿ ಸಲ್ಲಿಸಬೇಕು.
ಪ್ಲಾಟ್‌ಫಾರ್ಮ್ ಟಿಕೆಟ್ ಪ್ರಯಾಣಿಕರಿಗೆ ರೈಲು ಹಟ್ಟುವ ಅವಕಾಶ ನೀಡುತ್ತದೆ. ಇದರೊಂದಿಗೆ, ಪ್ರಯಾಣಿಕರು ತಾನು ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡ ನಿಲ್ದಾಣದಿಂದ ಪ್ರಯಾಣ ದರವನ್ನು ಪಾವತಿಸಬೇಕಾಗುತ್ತದೆ. ದರವನ್ನು ವಿಧಿಸುವಾಗ, ನಿರ್ಗಮನ ನಿಲ್ದಾಣವನ್ನು ಅದೇ ನಿಲ್ದಾಣವೆಂದು ಪರಿಗಣಿಸಲಾಗುತ್ತದೆ. ಯಾವ ವರ್ಗದಲ್ಲಿ ಪ್ರಯಾಣಿಸುತ್ತಿರೋ ಅದೇ ವರ್ಗದ ದರವನ್ನು ಪಾವತಿಸಬೇಕಾಗುತ್ತದೆ.