60ರ ಹರೆಯದ ನಟಿಯಿಂದ ಪುಷ್ಪಾ 2 ಸಿನಿಮಾದಲ್ಲಿ ಐಟಂ ಸಾಂಗ್..!? ಅದನ್ಯಾರು ನೋಡ್ತಾರೆ ಗುರು..
ಸಾಮಾನ್ಯವಾಗಿ ಐಟಂ ಹಾಡುಗಳನ್ನು ಗ್ಲಾಮರಸ್ ನಟಿಯರು, ಹಾಟ್ ಸುಂದರಿಯರು, ಟ್ರೆಂಡಿಂಗ್‌ನಲ್ಲಿಯರುವ ಹಿರೋಯಿನ್ ಕೈಯಲ್ಲಿ ಮಾಡಿಸಲಾಗುತ್ತದೆ..
30 ವರ್ಷ ಮೇಲ್ಪಟ್ಟ ಸ್ಟಾರ್ ಹೀರೋಯಿನ್ ಗಳು ಕೂಡ ಐಟಂ ಸಾಂಗ್ ಗಳಲ್ಲಿ ಮಿಂಚಿದ್ದ ಉದಾರಹಣೆಗೂ ಸಹ ಇವೆ...
ಆದರೆ ಈಗ 60ರ ಹರೆಯದಲ್ಲೂ ಐಟಂ ಸಾಂಗ್ ಮಾಡಲು ಸಿದ್ಧ ಎಂದು ಹೇಳಲು ಹೊರಟಿರುವ ಹಿರಿಯ ನಾಯಕಿ ಮಾತುಗಳು ದಂಗು ಬಡಿಸುವಂತಿವೆ..
ಹೌದು.. ಹಿರಿಯ ನಟಿ ಮೀನಾಕ್ಷಿ ಶೇಷಾದ್ರಿ ʼಆಪದ್ಭಾಂದವುಡುʼ ಚಿತ್ರದಲ್ಲಿ ಚಿರಂಜೀವಿ ಜೊತೆ ನಟಿಸಿದ್ದಾರೆ. ಅದಕ್ಕೂ ಮೊದಲು ಅವರು ಬ್ರಹ್ಮರ್ಷಿ ವಿಶ್ವಾಮಿತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮೀನಾಕ್ಷಿ, ಇಪ್ಪತ್ತು ವರ್ಷದ ಹುಡುಗಿಯರಷ್ಟೇ ಐಟಂ ಸಾಂಗ್ ಮಾಡಬೇಕು ಎಂಬ ನಿಯಮವನ್ನು ಮುರಿಯುವುದಾಗಿ ಹೇಳಿದ್ದಾರೆ..
ಜೊತೆಗೆ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಬೇಕೆಂಬ ಆಸೆ ಇದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಹ ಡ್ಯಾನ್ಸ್ ಮಾಡಬಲ್ಲೆ ಎಂದಿದ್ದಾರೆ. ಇದರಿಂದ ನೆಟ್ಟಿಗರು ಶಾಕ್ ಆಗಿದ್ದಾರೆ.
20 ವರ್ಷದ ಹುಡುಗಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡರೆ ಎಲ್ಲರೂ ನೋಡ್ತಾರೆ.. 60 ವರ್ಷದವರು ಕಾಣಿಸಿಕೊಂಡರೆ ಯಾರ್ ನೋಡ್ತಾರೆ.. ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ..
ಅಷ್ಟೇ ಅಲ್ಲ, ಸುಕುಮಾರ್ ಸಿನಿಮಾಗಳೆಂದರೆ ಐಟಂ ಸಾಂಗ್‌ಗಳಿರಬೇಕು. ಅವರು ಪ್ರತಿ ಸಿನಿಮಾದಲ್ಲಿ ವಿಶೇಷ ಹಾಡುಗಳು ಇದ್ದೇ ಇರುತ್ತವೆ. ಪುಷ್ಪಾ ಸಿನಿಮಾದ ಊ ಅಂತೀಯಾ ಮಾವ ಹಾಡು ಯಾವ ರೇಂಜ್‌ನಲ್ಲಿ ಹಿಟ್ ಆಗಿತ್ತು ಅಂತ ಎಲ್ಲರಿಗೂ ಗೊತ್ತಿದೆ..
ಈ ಹಾಡಿನಲ್ಲಿ ಸಮಂತಾ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪ 2ರಲ್ಲಿ ಇಂಥದ್ದೊಂದು ಕ್ರೇಜಿ ಐಟಂ ನಂಬರ್ ಪ್ಲಾನ್ ಮಾಡಲಾಗಿದೆ.
ಇಂತಹ ಹೊತ್ತಿನಲ್ಲಿ 60ರ ಹರೆಯದ ಹಿರಿಯ ನಾಯಕಿ ಪುಷ್ಪಾ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತೇನೆ ಎಂದು ನೀಡಿರುವ ಹೇಳಿಕೆ ಹಾಟ್ ಟಾಪಿಕ್ ಆಗಿವೆ.